ಈ ರಾಶಿಯವರ ಬಹು ದಿನದ ಆಸೆ ಈಡೇರುವುದು, ಆರ್ಥಿಕ ಸ್ಥಿತಿ ಸುಧಾರಿಸುವುದು, ವಿದ್ಯಾರ್ಥಿಗಳಿಗೆ ಉತ್ತಮ ದಿನ
Horoscope May 23: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ರಾಹುಕಾಲವು ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ವೃತ್ತಿ ಬೆಳವಣಿಗೆ, ನೆಟ್‌ವರ್ಕಿಂಗ್ ಮತ್ತು ವೃತ್ತಿಪರ ಸಂವಹನದಲ್ಲಿ ಅತ್ಯುತ್ತಮ ಅವಕಾಶಗಳು ಸಿಗುತ್ತವೆ. ಆರ್ಥಿಕವಾಗಿ ಸ್ವಲ್ಪ ಸಮಸ್ಯೆ ಹುಟ್ಟಿಕೊಳ್ಳುವುದು. ಹಠಾತ್ ಖರ್ಚು, ಪ್ರಯಾಣ ವೆಚ್ಚಗಳು ಅಥವಾ ಐಷಾರಾಮಿ ವಸ್ತುಗಳ ಖರೀದಿ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ತಾಳ್ಮೆ ಅಗತ್ಯ. ತಲೆನೋವಿನ ಸಮಸ್ಯೆ ಕಾಡುವುದು.

ವೃಷಭ ರಾಶಿ:
ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ಹಣಕಾಸು, ಶಿಕ್ಷಣ, ವ್ಯವಹಾರ ಅಥವಾ ನಿರ್ವಹಣೆಗೆ ಸಂಬಂಧಿಸಿದ ವೃತ್ತಿಪರರು ತಮ್ಮ ಕೆಲಸಕ್ಕೆ ಮೆಚ್ಚುಗೆ ಪಡೆಯಬಹುದು. ಹಣಕಾಸಿನ ವಿಷಯಕ್ಕೆ ಬಂದರೆ ದಿನ ನಿಮ್ಮ ಪರವಾಗಿ ಇರುವುದಿಲ್ಲ. ಖರ್ಚು ವೆಚ್ಚಗಳು ಮಿತಿಯಲ್ಲಿರಲಿ.
ಮಿಥುನ ರಾಶಿ:
ಆತ್ಮವಿಶ್ವಾಸ ಹೆಚ್ಚಾಗುವುದು. ಹೂಡಿಕೆಗೆ ಇದು ಸರಿಯಾದ ದಿನವಲ್ಲ. ಆರೋಗ್ಯ ಸಮಸ್ಯೆಯೂ ಕಾಡಬಹುದು. ಆದಾಯ ಉತ್ತಮವಾಗಿರುತ್ತದೆ. ಆದರೆ ಖರ್ಚು ಮಾಡುವಾಗ ಸರಿಯಾಗಿ ಯೋಚಿಸಿ ವ್ಯಯಿಸುವುದು ಒಳ್ಳೆಯದು.
ಕರ್ಕಾಟಕ ರಾಶಿ:
ಹಣಕಾಸು ಯೋಜನೆ ಮತ್ತು ವೃತ್ತಿ ಮಹತ್ವಾಕಾಂಕ್ಷೆಯ ಮೇಲೆ ಇಂದಿನ ದಿನ ಕೇಂದ್ರೀಕೃತವಾಗಿರುತ್ತದೆ. ವೃತ್ತಿಪರ ವಿಷಯಗಳಲ್ಲಿ ನಿಮ್ಮ ನಿಲುವಿಗೆ ಮನ್ನಣೆ ಸಿಗುವುದು. ಕೆಲಸ ಬದಲಿಸುವ ಯೋಚನೆ ಇದ್ದರೆ ಮುಂದುವರಿಯಬಹುದು. ಹಣಕಾಸಿನ ಸ್ಥಿತಿ ಸುಧಾರಿಸಬಹುದು.
ಸಿಂಹ ರಾಶಿ:
ಕೋಪದ ಕೈಗೆ ಬುದ್ದಿ ಕೊಡಬೇಡಿ. ನಿಮ್ಮ ಮಾತಿನಿಂದ ಪ್ರೀತಿ ಪಾತ್ರರ ಮನಸ್ಸಿಗೆ ನೋವು ಉಂಟು ಮಾಡುವಿರಿ. ತಾಳ್ಮೆ ಇರಲಿ. ಖರ್ಚು ವೆಚ್ಚಗಳ ಬಗ್ಗೆ ನಿಯಂತ್ರಣ ಇರಲಿ. ಆರೋಗ್ಯದ ಬಗ್ಗೆ ಗಮನ ಹರಿಸಿ.
ಕನ್ಯಾ ರಾಶಿ:
ಶಿಸ್ತು ಬಹಳ ಮುಖ್ಯವಾಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶ ಒದಗಿ ಬರುವುದು. ನಿರ್ಧಾರ ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ. ಹೊಟ್ಟೆ ನೋವಿನಂಥಹ ಆರೋಗ್ಯ ಸಮಸ್ಯೆ ಕಾಡಬಹುದು.
ತುಲಾ ರಾಶಿ:
ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೆ ಲಾಭವಾಗುವುದು. ಹೊಸ ಉದ್ಯೋಗಾವಕಾಶ ಸಿಗುವುದು. ಈ ಮೂಲಕ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದು. ಹೊಸ ವಸ್ತುಗಳ ಖರೀದಿ ಬಗ್ಗೆ ಎಚ್ಚರ ಇರಲಿ.
ವೃಶ್ಚಿಕ ರಾಶಿ:
ಹೂಡಿಕೆಗೆ ದಿನ ಉತ್ತಮವಾಗಿದೆ. ಅನಗತ್ಯವಾಗಿ ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ. ನಿಮ್ಮ ಮಾತೇ ನಿಮಗೆ ಸಮಸ್ಯೆ ಉಂಟು ಮಾಡಬಹುದು. ಮಾನಸಿಕ ಒತ್ತಡ ಹೆಚ್ಚಾಗಬಹುದು.
ಧನು ರಾಶಿ:
ಉನ್ನತ ಶಿಕ್ಷಣಕ್ಕಾಗಿ ಪ್ರಯಾಣ ಬೆಳೆಸಬೇಕಾಗಬಹುದು. ಎದುರಾಗಿರುವ ಸಮಸ್ಯೆಗೆ ಪರಿಹಾರ ಸಿಗುವುದು. ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ದೇಹದೊಂದಿಗೆ ಮನಸ್ಸಿಗೂ ವಿಶ್ರಾಂತಿಯ ಅವಶ್ಯಕತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಮಕರ ರಾಶಿ:
ಹೊಸ ಜವಾಬ್ದಾರಿ ಸಿಗಬಹುದು.ವೃತ್ತಿ ಜವಾಬ್ದಾರಿಗಳು ಹೆಚ್ಚಾಗಬಹುದು. ಮಾನಸಿಕ ಒತ್ತಡ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗುವುದು.
ಕುಂಭ ರಾಶಿ:
ನಿಮ್ಮ ಮಾತಿಗೆ ಮನ್ನಣೆ ಸಿಗುವುದು. ಬಹಳ ದಿನಗಳ ಆಸೆ ಈಡೇರುವುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರುವುದು. ವಿದ್ಯಾರ್ಥಿಗಳಿಗೆ ದಿನ ಉತ್ತಮವಾಗಿರುವುದು.
ಮೀನ ರಾಶಿ:
ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ಹಿಂದೆ ಮಾಡಿರುವ ಉಳಿತಾಯದಿಂದ ಲಾಭವಾಗುವುದು. ಹಣಕಾಸಿನ ಸಮಸ್ಯೆ ನೀಗುವುದು. ಆರೋಗ್ಯ ಸುಧಾರಿಸುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications