ಕುಮಾರಸ್ವಾಮಿ ಹಗಲುಗನಸು ಕಾಣುತ್ತಿದ್ದಾರೆ: ಡಿ.ಕೆ.ಸುರೇಶ್

ರಾಮನಗರ, ಮಾರ್ಚ್ 26: ಹಗಲುಗನಸು ಕಾಣುತ್ತಿರುವವರು ಡಿ.ಕೆ.ಶಿವಕುಮಾರ್ ಅಲ್ಲ ಕುಮಾರಸ್ವಾಮಿ ಅವರು ಈ ವಿಷಯ ರಾಜ್ಯದ ಜನರಿಗೆ ಗೊತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ರಾಮನಗರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ‌ ಇಂದಿರಾ ಕ್ಯಾಂಟೀನ್ ಗೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾದ್ಯಮದವರೊಂದಿಗೆ ಮಾತನಾಡಿದರು.

ನಾನೇ ಸಿಎಂ ಆಗುತ್ತೇನೆಂದು ಹೆಚ್.ಡಿ.ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಯೂ 'ಮುಖ್ಯಮಂತ್ರಿಗಾಗಿ ಮತ ನೀಡಿ' ಎಂದರು ಆದರೆ ಗೆಲ್ಲಲಿಲ್ಲ. ಮತ್ತೆ ಈ ಬಾರಿ ಅದೇ ಹಳೆ ಟೇಪ್ ಅನ್ನು ರೀವೈಂಡ್‌ ಮಾಡಿ ಹೊಸ ಟೆಕ್ನಾಲಜಿ ಬಳಸಿಕೊಂಡು ಹೊಸ ರಾಗ ಹಾಡುತ್ತಿದ್ದಾರೆ ಎಂದರು.

MP DK Suresh slams HD Kumaraswamy

ರಾಹುಲ್ ಗಾಂಧಿಗೆ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಜೆಡಿಎಸ್ ನವರಿಗೆ ಇಲ್ಲ ಎಂದ ಅವರು ದೇವೇಗೌಡರು ಇಂದು ಮಾಜಿ ಪ್ರಧಾನಿ ಅನ್ನಿಸಿಕೊಳ್ಳುತ್ತಿದ್ದರೆ ಅದು ಕಾಂಗ್ರೆಸ್ ನ‌ ಕೊಡುಗೆ ಅದನ್ನ ಅವರು ಮರೆಯಬಾರದು ಎಂದರು.‌

ಜಾತ್ಯಾತೀತದ ತತ್ವಗಳು ಗೊತ್ತಿಲ್ಲ ಎಂದವರು ಜಾತ್ಯಾತೀತ ನಿಲುವುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಒಂದಂದೂ ಬಣ್ಣ ಒಂದೂಂದು ಮಾತು ಬದಲಿಸುವರನ್ನು ನೋಡುತ್ತಿದ್ದೇವೆ ಎಂದರು.

MP DK Suresh slams HD Kumaraswamy

ಇನ್ನೂ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳ ಪೈಕಿ ಒಂದಾದ ಇಂದಿರಾ ಕ್ಯಾಂಟೀನ್‌ಗೆ ಸಂಸದ ಡಿ.ಕೆ.ಸುರೇಶ್ ಚಾಲನೆ ನೀಡಿ ನಂತರ ಕ್ಯಾಂಟೀನ್ ನಲ್ಲಿ ಮಾಡಿದ ತಿಂಡಿಯನ್ನು ಸ್ವತಃ ಸಾರ್ವಜನಿಕರಿಗೆ ಬಡಿಸಿ, ನಂತರ ತಾವು ಕೂಡ ತಿಂಡಿಯ ಸವಿ ಸವಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+