ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಡಿ. ಕೆ. ಸುರೇಶ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 03; ಕೋವಿಡ್ ಮಹಾ ಮಾರಿಗೆ ಬಲಿಯಾದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ. ಕೆ. ಸುರೇಶ್ ಜನರಲ್ಲಿನ ಆತಂಕವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಲು ಮುಂದಾಗಿದ್ದಾರೆ‌.

ಕನಕಪುರ ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ ಇತ್ತೀಚೆಗೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದರು.

ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ

ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ ಅಂತ್ಯಕ್ರಿಯೆ ಮುಳ್ಳಿಹಳ್ಳಿ ಗ್ರಾಮದಲ್ಲಿ ನಡೆಯಿತು. ಸೋಂಕಿತನ ಅಂತ್ಯಕ್ರಿಯೆಯಲ್ಲಿ ಪಿಪಿಒ ಕಿಟ್ ಧರಿಸದೇ ಕೇವಲ ಫೇಸ್‌ ಶೀಲ್ಡ್‌ ಧರಸಿ ಸಂಸದ ಡಿ. ಕೆ. ಸುರೇಶ್ ಪಾಲ್ಗೊಂಡರು.

ವಿಕ್ಟೋರಿಯಾ ಆಸ್ಪತ್ರೆಯೊಂದರಲ್ಲೇ ದಿನಕ್ಕೆ 30ಕ್ಕೂ ಹೆಚ್ಚು ಸೋಂಕಿತರ ಸಾವು! ವಿಕ್ಟೋರಿಯಾ ಆಸ್ಪತ್ರೆಯೊಂದರಲ್ಲೇ ದಿನಕ್ಕೆ 30ಕ್ಕೂ ಹೆಚ್ಚು ಸೋಂಕಿತರ ಸಾವು!

 MP DK Suresh Participated Part In Last Rites Of COVID Patient

‌ಈ ಹಿಂದೆಯು ಸಹ ಡಿ. ಕೆ. ಸುರೇಶ್ ಕೋವಿಡ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ, ಕೋವಿಡ್ ರೋಗಿಗಳಿಗೆ ಹೆದರಬೇಡಿ ಚಿಕಿತ್ಸೆ ಪಡೆದು ಧೈರ್ಯದಿಂದ ಕೊರೊನಾ ಸೋಲಿಸಿ ಎಂದು ಧೈರ್ಯ ಹೇಳಿದ್ದರು, ಆತ್ಮಸ್ಥೈರ್ಯ ತುಂಬಿದ್ದರು.

ಬೆಡ್ ಸಿಗದೆ, ಆಸ್ಪತ್ರೆ ಮುಂಭಾಗ ಕೊರೊನಾ ಸೋಂಕಿತೆ ಕಾರಿನಲ್ಲೇ ಸಾವು ಬೆಡ್ ಸಿಗದೆ, ಆಸ್ಪತ್ರೆ ಮುಂಭಾಗ ಕೊರೊನಾ ಸೋಂಕಿತೆ ಕಾರಿನಲ್ಲೇ ಸಾವು

ಹಲವು ಬಾರಿ ಕೋವಿಡ್ ಸೋಂಕಿತರು ಮೃತಪಟ್ಟ ವೇಳೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಹೆದರಬೇಡಿ, ಮುಂಜಾಗ್ರತಾ ಕ್ರಮ ಕೈಗೊಂಡು ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರೆ ಸೋಂಕಿಗೆ ತಗುಲುವುದಿಲ್ಲ ಎಂದು ಸಂದೇಶ ನೀಡಿದ್ದರು.

ಈಗ ಮತ್ತೊಮ್ಮೆ ಸಂಸದರು ಕೋವಿಡ್ ಸೋಂಕಿತರ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡರು. ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅಂತಿಮ ವಿಧಿ ವಿದಾನಗಳನ್ನು ನೇರವೇರಿಸಿ ಎಂದು ಸಲಹೆ ನೀಡಿದರು.

English summary
Congress leader and Bengaluru Rural MP D. K. Suresh took part in the last rites of Covid victim in Kanakapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X