ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿಗಳ ಕಚೇರಿ ತಲುಪಿದ ಚನ್ನಪಟ್ಟಣ ಬಹು ಕೋಟಿ ಭೂ ಹಗರಣ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 8 : ರಾಮನಗರ ಜಿಲ್ಲೆಯಲ್ಲಿ ಸದ್ದು ಮಾಡುತ್ತಿರುವ 25 ಕೋಟಿ ರೂ. ಮೌಲ್ಯದ ಸರ್ಕಾರಿ ಗೋಮಾಳ ಕಬಳಿಕೆ ಪ್ರಕರಣ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಿಓಡಿ ತನಿಖೆ ನಡೆಸುವಂತೆ ಪತ್ರ ಬರೆದಿದ್ದಾರೆ.

ಬಸವರಾಜ ಬೊಮ್ಮಾಯಿಯನ್ನು ಖುದ್ದು ಭೇಟಿಮಾಡಿದ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ , ಚನ್ನಪಟ್ಟಣದಲ್ಲಿ ಬಹುಕೋಟಿ ವೆಚ್ಚದ ಸರ್ಕಾರಿ ಗೋಮಾಳ ಕಬಳಿಕೆಯಾಗಿದೆ. ಭೂ ಕಬಳಿಕೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮವಹಿಸಬೇಕು ಹಾಗಾಗಿ ಈ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.

ರಾಮನಗರ; ಸರ್ಕಾರಿ ಅಧಿಕಾರಿಗಳಿಂದ 25 ಕೋಟಿ ರೂ. ಮೌಲ್ಯದ ಭೂಮಿ ಗುಳುಂರಾಮನಗರ; ಸರ್ಕಾರಿ ಅಧಿಕಾರಿಗಳಿಂದ 25 ಕೋಟಿ ರೂ. ಮೌಲ್ಯದ ಭೂಮಿ ಗುಳುಂ

ಚನ್ನಪಟ್ಟಣದ ಭೂ ಹಗರಣವನ್ನು ಸಿಓಡಿ ತನಿಖೆಗೆ ವಹಿಸುವಂತೆ ಮಾಡಿದ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಯಿ, ಪತ್ರದ ಮೇಲೆ ಸಿಓಡಿಯಿಂದ ತನಿಖೆ ಮಾಡಲಾಗುವುದು ಎಂದು ಬರೆದು ಸಹಿ ಮಾಡುವ ಮೂಲಕ ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ.

ಪಿಎಸ್ಐ ಹಗರಣದ ಹಿಂದೆ ಇರುವ ರಾಜಕಾರಣಿ, ಅಧಿಕಾರಿ ಯಾರೆಂಬ ಸತ್ಯ ಹೊರ ಬರಬೇಕು : ಡಿಕೆಶಿಪಿಎಸ್ಐ ಹಗರಣದ ಹಿಂದೆ ಇರುವ ರಾಜಕಾರಣಿ, ಅಧಿಕಾರಿ ಯಾರೆಂಬ ಸತ್ಯ ಹೊರ ಬರಬೇಕು : ಡಿಕೆಶಿ

ಪತ್ರದ ಮೂಲಕ ಸಿಒಡಿ ತನಿಖೆಗೆ ಮನವಿ

ಪತ್ರದ ಮೂಲಕ ಸಿಒಡಿ ತನಿಖೆಗೆ ಮನವಿ

ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಚನ್ನಪಟ್ಟಣ ತಾಲ್ಲೂಕು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭೂ ಮಾಫಿಯಾದವರೊಡನೆ ಶಾಮೀಲಾಗಿ ವಿವಿಧ ಕಡೆ ಬೆಲೆಬಾಳುವ ಬಹುಕೋಟಿ ಮೊತ್ತದ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಕೆಲವು ಸಿಬ್ಬಂದಿಗಳನ್ನು ಬಂಧಿಸಿರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿರುತ್ತದೆ. ಆದುದರಿಂದ ಚನ್ನಪಟ್ಟಣ ತಾಲ್ಲೂಕು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ನಡೆಸಿರುವ ಈ ಭೂ ಅಕ್ರಮದ ಹಗಲು ದರೋಡೆಯ ತನಿಖೆಯನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸಿ ಬೆಲೆ ಬಾಳುವ ಬಹುಕೋಟಿ ಮೊತ್ತದ ಸರ್ಕಾರಿ ಭೂಮಿಯನ್ನು ಉಳಿಸುವುದರ ಜೊತೆಗೆ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಸಿಎಂ ಬೊಮ್ಮಯಿಗೆ ಸಿ. ಪಿ. ಯೋಗೀಶ್ವರ್ ಮನವಿ ಸಲ್ಲಿಸಿದ್ದಾರೆ.

23 ಎಕರೆ ಸರ್ಕಾರಿ ಭೂಮಿ ಕಬಳಿಕೆ

23 ಎಕರೆ ಸರ್ಕಾರಿ ಭೂಮಿ ಕಬಳಿಕೆ

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ವೆ ನಂಬರ್ 118 ರಲ್ಲಿ 192 ಎಕರೆ ಸರ್ಕಾರಿ ಗೋಮಾಳ ಜಮೀನು ಇದೆ. ಈ ಗೋಮಾಳದಲ್ಲಿ ಸುಮಾರು 25 ಕೋಟಿ ಮೌಲ್ಯದ 23 ಎಕರೆ ಜಾಗವನ್ನು ಅಧಿಕಾರಿಗಳು ಹಣದ ಆಸೆಗೆ ಬಿದ್ದು ಕಡತಗಳನ್ನು ಬದಲಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಭೂಗಳ್ಳರಿಗೆ ನೆರವಾಗಿದ್ದರು. ಈ ಕುರಿತು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ.

ಪೋಲಿಸ್ ತನಿಖೆಯಲ್ಲಿ ಅಕ್ರಮ ಸಾಬೀತು

ಪೋಲಿಸ್ ತನಿಖೆಯಲ್ಲಿ ಅಕ್ರಮ ಸಾಬೀತು

"ಪ್ರಕರಣದ ಪೋಲಿಸ್ ತನಿಖೆಯಲ್ಲಿ ಮೇಲುನೋಟಕ್ಕೆ ಅಕ್ರಮ ನಡೆದಿದೆ ಎನ್ನುವುದು ತಿಳಿದುಬಂದಿದೆ. ಇನ್ನಷ್ಟು ತನಿಖೆ ನಡೆಸಿ ಭೂ ಅಕ್ರಮದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಆರೋಪಿಗಳು ಎಷ್ಟು ಡಿಸಿ ಮತ್ತು ಎಡಿಸಿ, ಎಷ್ಟು ಎಸಿಗಳು ಹಾಗೂ ಎಷ್ಟು ತಹಶೀಲ್ದಾರ್‌ಗಳ ಸಹಿಗಳನ್ನು ನಕಲಿ ಮಾಡಿದ್ದಾರೆ ಮತ್ತು ಈ ಹಗರಣದಲ್ಲಿ ಎಷ್ಟು ಹಣದ ವ್ಯವಹಾರ ನಡೆದಿದೆ? ಎಂಬುದು ತನಿಖೆಯಲ್ಲಿ ತಿಳಿಯಲಿದೆ" ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ಈಗಾಗಲೆ ತಿಳಿಸಿದ್ದಾರೆ.

ಪ್ರಕರಣದಲ್ಲಿ ಮೂವರ ಬಂಧನ

ಪ್ರಕರಣದಲ್ಲಿ ಮೂವರ ಬಂಧನ

ಪಕರಣಕ್ಕೆ ಸಂಬಂಧಪಟ್ಟಂತೆ ಚನ್ನಪಟ್ಟಣ ತಹಶೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕನಾದ ಬಿ.ಕೆ. ಹರೀಶ್‌ಕುಮಾರ್, ಮತ್ತೊಬ್ಬ ಸಹಾಯಕ ನಾಗರಾಜು ಹಾಗೂ ಚನ್ನಪಟ್ಟಣ ನಗರಸಭಾ ಸದಸ್ಯ ಬೋರಲಿಂಗಯ್ಯ, ಜಿಲ್ಲಾಧಿಕಾರಿಗಳ ಕಚೇರಿ ದ್ವಿತೀಯ ದರ್ಜೆ ಕ್ಲರ್ಕ್ ಚಿಕ್ಕಸಿದ್ದಯ್ಯ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಲೋಕೇಶ್ ಎಂಬುವವರ ವಿರುದ್ಧ ಗೋಮಾಳ ಕಬಳಿಸಿದ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿಗಳಲ್ಲಿ ಹರೀಶ್ ಕುಮಾರ್, ನಾಗರಾಜ್ ಹಾಗೂ ಬೋರಲಿಂಗಯ್ಯನನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೂ ಚಿಕ್ಕಸಿದ್ದಯ್ಯ ಹಾಗೂ ಲೋಕೇಶ್ ಇಬ್ಬರನ್ನು ಬಂಧಿಸಬೇಕಿದೆ.

Recommended Video

Zooನಲ್ಲಿದ್ದ Orangutanಗೆ ಕೋಪ ಬಂದಾಗ ಏನಾಯ್ತು ನೋಡಿ | OneIndia Kannada

English summary
BJP MLC and Former minister CP Yogeshwar has written letter to chief minister Basavaraj Bommai seeking a COD probe into the Channapatna land scam in Ramanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X