ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀನುಗಾರಿಕೆ ಪದವಿಯಲ್ಲಿ 3 ಚಿನ್ನದ ಪದಕ ಬಾಚಿಕೊಂಡ ಚನ್ನಪಟ್ಟಣದ ಕುಶಲಾ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 2: ಬೊಂಬೆನಾಡು ಖ್ಯಾತಿಯ ರಾಮನಗರ ಜಿಲ್ಲೆ ಚನ್ನಪಟ್ಟಣದ ಕುವರಿ ಕೆ.ಬಿ. ಕುಶಲ ಮೀನುಗಾರಿಕೆ ವಿಜ್ಞಾನದ ಸ್ನಾತಕೋತ್ತರ ಪದವಿಯಲ್ಲಿ ಮೂರು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾಳೆ.

ತಾಲೂಕಿನ ಕಳ್ಳಿಹೊಸೂರು ಗ್ರಾಮದ ಸುಮಾ ಹಾಗೂ ಬೋರಗೌಡ (ಬಜ್ಜಪ್ಪ)ನವರ ಪುತ್ರಿ ಈ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಬಿ.ಕೆ. ಕುಶಲಾ ಬೀದರ್‌ನ ಕರ್ನಾಟಕ ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‍ಎಸ್‍ಯು)ನಲ್ಲಿ ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ.

ಮೃತ ಪತ್ರಕರ್ತನ ಕುಟುಂಬಕ್ಕೆ ನೆರವಾದ ವಿಮೆ; ಸಾಮ್ರಾಟ್ ಗೌಡ ಕಾಳಜಿಗೆ ವ್ಯಾಪಕ ಮೆಚ್ಚುಗೆ ಮೃತ ಪತ್ರಕರ್ತನ ಕುಟುಂಬಕ್ಕೆ ನೆರವಾದ ವಿಮೆ; ಸಾಮ್ರಾಟ್ ಗೌಡ ಕಾಳಜಿಗೆ ವ್ಯಾಪಕ ಮೆಚ್ಚುಗೆ

ಕೆ.ಬಿ. ಕುಶಲ ಅಂತಿಮ ವರ್ಷದ ಪದವಿಯಲ್ಲಿ ಮೀನುಗಾರಿಕೆ, ಸೂಕ್ಷ್ಮಜೀವ ಹಾಗೂ ವಿಜ್ಞಾನ ವಿಷಯದಲ್ಲಿ ಮೂರು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ. ಏ.28ರಂದು ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.

Channapattanas Kushala Gets 3 Gold Medals in Fishing Post Graduate

ಚಿನ್ನದ ಪದಕ ವಿಜೇತೆ ಕೆ.ಬಿ. ಕುಶಲ ಹುಟ್ಟೂರು ತಾಲೂಕಿನ ಕಳ್ಳಿಹೊಸೂರು ಗ್ರಾಮ. ಇದು ಅತ್ಯಂತ ಚಿಕ್ಕ ಗ್ರಾಮವಾಗಿದ್ದು, ಗ್ರಾಮಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆಯೂ ಸಹ ಇಲ್ಲ. ಇಂತಹ ಗ್ರಾಮದ ರೈತಾಪಿ ಕುಟುಂಬದ ಹಿನ್ನೆಲೆಯ ಕುಶಲ ತನ್ನ ನಿರಂತರ ಓದು ಹಾಗೂ ಸಾಧಿಸಲೇಬೇಕು ಎಂಬ ಹಠದಿಂದ ಈ ಸಾಧನೆ ಮಾಡಿದ್ದಾಳೆ.

ರಾಮನಗರ ಜಿಲ್ಲೆಯ ಗ್ರಾಮೀಣ ಹಿನ್ನಲೆಯ ವಿದ್ಯಾರ್ಥಿನಿ ಕೆ.ಬಿ. ಕುಶಲ ದೂರದ ಬೀದರ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು, ಶ್ರದ್ಧೆಯಿಂದ ಓದಿ ಮೂರು ಚಿನ್ನದ ಪದಕ ಪಡೆಯುವ ಮೂಲಕ ತನ್ನ ಪಾಲಕರು, ಹುಟ್ಟಿದ ಗ್ರಾಮ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಈಕೆಯ ಸಾಧನೆಗೆ ಆಕೆಯ ಕುಟುಂಬದವರು ಹಾಗೂ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.

Channapattanas Kushala Gets 3 Gold Medals in Fishing Post Graduate

ಚಿನ್ನದ ಪದಕ ಪಡೆದ ಕೆ.ಬಿ. ಕುಶಲ ಪ್ರತಿಕ್ರಿಯೆ
ಮೂರು ಚಿನ್ನ ಪಡೆದ ಕೆ.ಬಿ. ಕುಶಲ, "ತನ್ನ ತಂದೆ ತಾಯಿಯ ಸಹಕಾರದಿಂದ ಇದೆಲ್ಲವೂ ಸಾಕಾರವಾಗಿದೆ. ಇದಲ್ಲದೇ ವಿವಿಯಲ್ಲಿ ನುರಿತ ಪ್ರಾಧ್ಯಾಪಕರು ಸದಾ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಈ ವಿಷಯದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಅಪಾರವಾದ ಆಸಕ್ತಿ ಇತ್ತು. ಇದು ಸಹ ನನ್ನ ಓದಿಗೆ ಪೂರಕವಾಯಿತು".

"ಮುಂದೆ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಅಭ್ಯಾಸ ಹಾಗೂ ವೃತ್ತಿ ಮಾಡುವ ಆಲೋಚನೆ ಇದೆ. ಸ್ನಾತಕೋತ್ತರ ಪದವಿಯಲ್ಲಿ ಮೂರು ಪದಕ ಬಂದಿರುವುದು ಅಪಾರವಾದ ಸಂತೋಷ ತಂದಿದೆ ಹಾಗೂ ನನ್ನಲ್ಲಿ ಇನ್ನಷ್ಟು ಜವಾಬ್ದಾರಿಗಳನ್ನು ಹೆಚ್ಚಿಸಿದೆ ಹಾಗೂ ಇದೇ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಬಯಕೆ ಹೆಚ್ಚಾಗಿದೆ," ಎನ್ನುತ್ತಾರೆ ಚಿನ್ನದ ಪದಕ ವಿಜೇತೆ ಕೆ.ಬಿ. ಕುಶಲ.

English summary
KB Kushala From Channapattana taluk of Ramanagara District, she got Three gold medals in the Master of Fisheries Science.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X