• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಡಿಸಲು ನಾಶ: ಅರಣ್ಯ ಅಧಿಕಾರಿಗಳ ಮೇಲೆ ಗಂಭೀರ ಆರೋಪ

|

ರಾಮನಗರ, ಏಪ್ರಿಲ್ 1: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬನ್ನೇರುಘಟ್ಟ ಅರಣ್ಯ ಪ್ರದೇಶದ ಬುಡಗಯ್ಯನ ದೊಡ್ಡಿಯಲ್ಲಿ ಅರಣ್ಯ ಅಧಿಕಾರಿಗಳ ಬಡವರ ಗುಡಿಸಲುಗಳನ್ನು ನಾಶ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಫೇಸ್ ಬುಕ್‌ನಲ್ಲಿ ಡಾ ಕೃಷ್ಣಮೂರ್ತಿ ಕೆವಿ ಇರುಳಿಗ ಎನ್ನುವವರು ತಮ್ಮ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ವಿಡಿಯೋಗಳ ಸಾಕ್ಷಿಯನ್ನು ನೀಡಿ, ಅರಣ್ಯ ಅಧಿಕಾರಿಗಳು ಬುಡಕಟ್ಟು ಸಮುದಾಯದ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದಿದ್ದಾರೆ.

ಶಿವಮೊಗ್ಗದಿಂದ ಝೀರೋ ಟ್ರಾಫಿಕ್ ನಲ್ಲಿ 2 ತಿಂಗಳ ಮಗು ರವಾನೆ

''ತಾತ್ಕಾಲಿಕವಾಗಿ ಸಡ್ಡು ಗಳನ್ನು ನಿರ್ಮಾಣ ಮಾಡಿಕೊಂಡು ಅಹೋ ರಾತ್ರಿ ಧರಣಿ ನಡೆಸುತ್ತಿದ್ದ ಇರುಳಿಗರ ಮೇಲೆ ಅರಣ್ಯ ಇಲಾಖೆಯವರ ಅಟ್ಟಹಾಸ ಮೆರೆದಿದ್ದಾರೆ. ಮೊದಲೇ ಕರೊನೋದಿಂದ ಅನ್ನ ನೀರು ಇಲ್ಲದೆ ಒದ್ದಾಡುದಿದ್ದ ಇರುಳಿಗ ಬುಡಕಟ್ಟು ಸಮುದಾಯದ ಮೇಲೆ ಅರಣ್ಯ ಇಲಾಖೆಯವರು ಏಕಾಏಕಿ ದಾಳಿ ಮಾಡಿ ದೌರ್ಜನ್ಯ ಎಸಗಿದ್ದಾರೆ.'' ಎಂದು ಬರೆದುಕೊಂಡಿದ್ದಾರೆ.

''ಇಡೀ ದೇಶವೇ ಲಾಕ್ ಡೌನ್ ಹಾಗಿರುವಾಗ ಹಿನ್ನೆಲೆಯಲ್ಲಿ ಅದಿವಾಸಿಗಳು ತಾತ್ಕಾಲಿಕವಾಗಿ ಧರಣಿ ಕೈಬಿಟ್ಟಿದ್ದರು. ಗುಡಿಸಲಿನಲ್ಲೆ ವಾಸಮಾಡುತ್ತಿದ್ದರು. ಆದರೆ ಇಂದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಇಡೀ ಗುಡಿಸಲುಗಳನ್ನು ಕಿತ್ತು ಹಾಕಿ ಗುಂಡಾ ವರ್ತನೆ ತೋರಿದ್ದಾರೆ.'' ಎಂದು ಆರೋಪ ಮಾಡಿದ್ದಾರೆ.

ರಾಮನಗರದಲ್ಲಿ ಕರ್ತವ್ಯಕ್ಕೆ ಗೈರಾದ 15 ಸರ್ಕಾರಿ ವೈದ್ಯರು

ಕೆಲವು ವಿಡಿಯೋ ಹಾಗೂ ಫೋಟೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಗುಡಿಸಲು ನಾಶ ಆಗಿರುವ ದೃಶ್ಯ ಕಾಣುತ್ತಿದೆ. ವಾಸ ಮಾಡುತ್ತಿದ್ದ ಗುಡಿಸಲು ಕಳೆದುಕೊಂಡ ಜನ ಕಣ್ಣೀರು ಹಾಕುತ್ತಿದ್ದಾರೆ.

English summary
Krishn Murthy KV Iruliga has accused Bannerghatta forest officers have destroyed iruliga community the huts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X