ಬುಧ ಸಂಕ್ರಮಣದಿಂದ ಈ ರಾಶಿಯವರು ಪಡೆಯಲಿದ್ದಾರೆ ಅಪಾರ ಹಣ, ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು
ಬುಧ ನಕ್ಷತ್ರ ಗೋಚಾರ 2026: ವೈದಿಕ ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಶುಭ ಗ್ರಹ ಮತ್ತು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಇದು ಬುದ್ಧಿಶಕ್ತಿ, ವ್ಯವಹಾರ ಮತ್ತು ಚಂಚಲತೆಯನ್ನು ಪ್ರತಿನಿಧಿಸುತ್ತದೆ. ಬುಧ ಗ್ರಹವು ಜೂನ್ 11, 2026 ರಂದು ಬೆಳಿಗ್ಗೆ 11:30 ಕ್ಕೆ ಗುರುವಿನ ಅಧಿಪತ್ಯದ ಪುನರ್ವಸು ನಕ್ಷತ್ರವನ್ನು ಪ್ರವೇಶಿಸುತ್ತದೆ. ಆಗಸ್ಟ್ 8 ರವರೆಗೆ ಇದೇ ಈ ನಕ್ಷತ್ರದಲ್ಲಿ ಸಂಚಾರ ನಡೆಸಲಿದ್ದಾನೆ. ಗುರುವಿನ ನಕ್ಷತ್ರದಲ್ಲಿ ಬುಧನ ಸಂಕ್ರಮಣ ನಾಲ್ಕು ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ. ಬುಧ ಸಂಕ್ರಮಣದ ಫಲವಾಗಿ ಈ ರಾಶಿಯವರಿಗೆ ಆರ್ಥಿಕ ಲಾಭವಾಗಿ ಹಲವು ಪ್ರಯೋಜನಗಳಾಗುವುದು. ಬುಧ ನಕ್ಷತ್ರ ಬದಲಾವಣೆಯಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾದ ರಾಶಿಗಳು ಯಾವುವು ಎಂದು ನೋಡೋಣ.

ಮಿಥುನ ರಾಶಿ:
ಈ ಬುಧ ಸಂಚಾರ ಮಿಥುನ ರಾಶಿಯವರಿಗೆ ಹಲವು ವಿಧಗಳಲ್ಲಿ ಶುಭಫಲ ನೀಡುವುದು. ಆರ್ಥಿಕ ಲಾಭವಾಗುವುದು ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸಿನ ಹಾದಿಗಳು ತೆರೆದುಕೊಳ್ಳುವುದು. ಪಾಲುದಾರಿಕೆಯಲ್ಲಿ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸುವುದು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವುದು, ವೇತನ ಹೆಚ್ಚಳವಾಗುವುದು.

ಕನ್ಯಾ ರಾಶಿ:
ಬುಧ ಸಂಕ್ರಮಣವು ಕನ್ಯಾರಾಶಿಯವರಿಗೂ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದು. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವ ಅವಕಾಶಗಳಿವೆ. ಆಸ್ತಿ ಖರೀದಿಸಲು ಮತ್ತು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಶುಭ ಸಮಯ. ಹೊಸ ಯೋಜನೆಯನ್ನು ಆರಂಭ ಮಾಡಿದರೆ ಯಶಸ್ಸು ಸಿಗುವುದು. ಬ್ಯಾಂಕಿಂಗ್ ಅಥವಾ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು.

ಧನು ರಾಶಿ:
ಬುಧ ಸಂಕ್ರಮಣದೊಂದಿಗೆ ಧನು ರಾಶಿಯವರ ಭಾಗ್ಯದ ಬಾಗಿಲು ತೆರೆಯುವುದು. ಉದ್ಯೋಗದಲ್ಲಿರುವವರಿಗೆ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಹಳೆಯ ಹೂಡಿಕೆಗಳಿಂದ ಗಮನಾರ್ಹ ಆರ್ಥಿಕ ಲಾಭವಾಗುವುದು. ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಆರೋಗ್ಯವು ಸುಧಾರಿಸುತ್ತದೆ.

ಮೀನ ರಾಶಿ:
ಮೀನ ರಾಶಿಯವರಿಗೆ ಬುಧನ ಸಂಚಾರವು ಯಶಸ್ಸಿನ ಬಾಗಿಲು ತೆರೆಯುತ್ತದೆ. ದೀರ್ಘಾವಧಿಯ ವೃತ್ತಿ ಬದಲಾವಣೆ ಯೋಜನೆಯಲ್ಲಿ ಯಶಸ್ಸು ಸಿಗುವುದು. ಅವರ ಮಾತು ಅವರ ಕೆಲಸದ ಸ್ಥಳದ ಮೇಲೆ ಪರಿಣಾಮ ಬೀರುತ್ತದೆ. ವಿದೇಶ ಪ್ರಯಾಣ ಯೋಗವಿದೆ. ಆರ್ಥಿಕವಾಗಿ, ಸಮಯ ಅನುಕೂಲಕರವಾಗಿರುತ್ತದೆ. ವೈವಾಹಿಕ ಜೀವನವು ಸಿಹಿಯಾಗಿರುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications