ಬೆಂಗಳೂರು ಉಪನಗರ ರೈಲು ಯೋಜನೆಗೆ ಬರಲಿವೆ 153 ಮೆಟ್ರೋ ಮಾದರಿಯ ಬೋಗಿಗಳು
ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಸಹಾಯವಾಗುವ ಜೊತೆಗೆ ಉತ್ತಮ ನಗರ ಸಾರಿಗೆ ಸೇವೆ ನೀಡುವ ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ (BSRP) ಮತ್ತಷ್ಟು ಬೆಳವಣಿಗೆ ಆಗಿದೆ. ಕಾರಿಡಾರ್ ನಿರ್ಮಾಣಗಳಿಗೆ ವೇಗ ನೀಡುವ ಜೊತೆಗೆ ಮೆಟ್ರೋ ಮಾದರಿಯ ರೈಲುಗಳ ಖರೀದಿಗೆ ಮುಂದಾಗಿದ್ದರ ಬಗ್ಗೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಅಧಿಕೃತ ಮಾಹಿತಿ ನೀಡಿದೆ.
ಬೆಂಗಳೂರು ಉಪನಗರ 'ಮಲ್ಲಿಗೆ' ಮತ್ತು 'ಕನಕ' ಕಾರಿಡಾರ್ ಪೂರ್ಣಗೊಳ್ಳುವ ಹೊತ್ತಿಗೆ ಬರೋಬ್ಬರಿ 153 ಮೆಟ್ರೋ ಮಾದರಿ ಬೋಗಿ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ. ಒ ಟ್ಟು ಹವಾನಿಯಂತ್ರಿತ ಬ್ರಾಡ್‌ಗೇಜ್ ಮೆಟ್ರೋ ಮಾದರಿಯ ಬೋಗಿಗಳನ್ನು ಪೂರೈಸುವಂತೆ ಬಿ-ರೈಡ್ ಸಂಸ್ಥೆ (ಕೆ-ರೈಡ್) ಚೆನ್ನೈ ಮೂಲದ ಇಂಟಿಗ್ರೆಲ್ ಕೋಚ್ ಫ್ಯಾಕ್ಟರಿಗೆ 1513 ಕೋಟಿ ರೂ. ವೆಚ್ಚದ ಕಾರ್ಯಾದೇಶ ಪತ್ರ ವಿತರಿಸಲಾಗಿದೆ.

18 ತಿಂಗಳ 153 ಹೊಸ ಬೋಗಿ ಪೂರೈಕೆ
ಈ ಅಧಿಕೃತ ಬೆಳವಣಿಗೆಗಳ ಮೂಲಕ ಮುಂದಿನ 18 ತಿಂಗಳಲ್ಲಿ ಬೆಂಗಳೂರಿಗೆ ಮೆಟ್ರೋ ಮಾದರಿಯ ರೈಲುಗಳು ಬರುವುದು ಬಹುತೇಕ ಖಚಿತವಾಗಿದೆ. ಈ ರೈಲುಗಳು ಕಾರಿಡಾರ್-4 ಮತ್ತು ಕಾರಿಡಾರ್-2ಕ್ಕೆ ಬಳಕೆ ಆಗಲಿವೆ ಎಂದು ಬಿ-ರೈಡ್ ವ್ಯವಸ್ಥಾಪ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು ಮಾಹಿತಿ ಕೊಟ್ಟಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಎಸಿ ಬೋಗಿಗಳ ರೈಲುಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಪೂರೈಕೆ ಜವಾಬ್ದಾರಿ ಪಡೆದುಕೊಂಡಿದೆ. ಕನಕ ಕಾರಿಡಾರ್ ಮತ್ತು ಮಲ್ಲಿಗೆ ಕಾರಿಡಾರ್ ನಿರ್ಮಾಣದಲ್ಲಿ ವೇಗ ನೀಡಲಾಗಿದೆ. ಟ್ರಾಕ್ ಅಳವಡಿಕೆ, ಗರ್ಡರ್ ನಿರ್ಮಾಣ, ನಿಲ್ದಾಣಗಳ ನಿರ್ಮಾಣವು ಸೇರಿ ಇನ್ನಿತರ ಸಿವಿಲ್ ಹಾಗೂ ತಾಂತ್ರಿಕೆ ಕೆಲಸಗಳು ನಡೆಯುತ್ತಿದೆ. ನಗರವನ್ನು ವರ್ತುಲ ರೂಪದಲ್ಲಿ ಸಂಪರ್ಕಿಸುವ, ಎಲ್ಲ ದಿಕ್ಕುಗಳಲ್ಲಿ ಸಾರಿಗೆ ಸೇವೆ ಲಭ್ಯವಾಗುವಂತೆ ಈ ಯೋಜನೆ ಅನುಷ್ಠಾನಕ್ಕೆ ತರಲು ಪ್ಲ್ಯಾನ್ ಮಾಡಲಾಗಿದೆ. ನಗರದಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆ ಜಾರಿಗೆ ತರಲು, ದಟ್ಟಣೆ ತಗ್ಗಿಸಲು ಬಿಎಸ್‌ಆರ್‍ಪಿ ಸಹಕಾರಿಯಾಗಲಿದೆ.
ಎರಡು ಮಾರ್ಗಗಳಲ್ಲಿ ಹೊಸ ಬೋಗಿ ಸಂಚಾರ ಶೀಘ್ರ
ಇತ್ತೀಚೆಗೆ ಮಲ್ಲಿಗೆ ಕಾರಿಡಾರ್ ನಲ್ಲಿ ಗರ್ಡರ್, ಕನಕ ಮಾರ್ಗದಲ್ಲಿ ಟಿ ಗರ್ಡರ್ ಸ್ಥಾಪನೆ ಯಶಸ್ವಿಯಾಗಿದೆ. ಕಾಮಗಾರಿಯಲ್ಲಿ ಪ್ರಮುಖ ಹಂತ ಇದಾಗಿದ್ದು, ನಿರ್ಮಾಣ ಪೂರ್ಣಗೊಳಿಸಲಾಗಿದೆ. ಒಟ್ಟು ನಾಲ್ಕು ಕಾರಿಡಾರ್‍ನ ಈ ಯೋಜನೆಯಲ್ಲಿ ಸದ್ಯ ಎರಡು ಕಾರಿಡಾರ್ ನಿರ್ಮಾಣವಾಗುತ್ತಿದೆ. 2031ರ ಹೊತ್ತಿಗೆ ಉಪನಗರ ರೈಲು ಯೋಜನೆ ಪೂರ್ಣಗೊಳ್ಳಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಹೊಸ ಮೆಟ್ರೋ ಮಾದರಿಯ ಎಸಿ ಬೋಗಿಗಳು ಬಿಎಸ್‌ಆರ್‍ಪಿ ಜಾಲದಲ್ಲಿ ಕಾರ್ಯಾಚರಣೆ ಮಾಡುವ ನಿರೀಕ್ಷೆ ಇದೆ.













Click it and Unblock the Notifications