DK Shivakumar Files Nomination: ಬುಲೆಟ್‌ನಲ್ಲಿ ಬಂದು ಕನಕಪುರದಿಂದ ನಾಮಪತ್ರ ಸಲ್ಲಿಸಿದ ಡಿಕೆ ಶಿವಕುಮಾರ್‌

ಕನಕಪುರ, ಏಪ್ರಿಲ್‌ 17: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಸೋಮವಾರ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ಅವರು ಬೃಹತ್‌ ರೋಡ್‌ ಶೋ ನಡೆಸಿದರು. ನಾಮಪತ್ರ ಸಲ್ಲಿಸುವ ಮುಂಚೆ ಡಿಕೆ ಶಿವಕುಮಾರ್ ಅವರು ಕ್ಷೇತ್ರದ ಕೆಂಕೇರಮ್ಮ ದೇವಸ್ಥಾನಲ್ಲಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು. ಪತ್ನಿಯೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ತಮ್ಮ ತಾಯಿ ಗೌರಮ್ಮನವರ ಆಶೀರ್ವಾದ ಪಡೆದರು.

KPCC President DK Shivakumar Files Nomination For Election From Kanakpura Constituency

ಶಿವಕುಮಾರ್ ಜೊತೆ ಆಗಮಿಸಿದ್ದ ಅವರ ಸಹೋದರ ಮತ್ತು ರಾಮನಗರ ಸಂಸದ ಡಿಕೆ ಸುರೇಶ್ ಸಹ ದೇವಿಗೆ ನಮಸ್ಕರಿಸಿ, ತಾಯಿಯ ಪಾದ ಮುಟ್ಟಿ ನಮಸ್ಕರಿದ ಬಳಿಕ ಅಣ್ಣ ಮತ್ತು ಅತ್ತಿಗೆಯವರ ಕಾಲಿಗೂ ವಂದಿಸಿದರು. ಡಿಕೆ ಶಿವಕುಮಾರ್‌ ಅವರು ಕಬ್ಬಾಳಮ್ಮನ ದೇವಸ್ಥಾನಕ್ಕೆ ತೆರಳಿ ತಾಯಿಯ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಡಿಕೆ ಶಿವಕುಮಾರ್‌ ಅವರ ಪುತ್ರ ಹಾಗೂ ಅವರ ಅಳಿಯ ಇಬ್ಬರು ತಲಾ ಒಂದೊಂದು ಈಡುಗಾಯಿ ಹೊಡೆದರು. ದೇವರ ಹುಂಡಿಗೆ ಹಣ ಹಾಕಿದರು.

KPCC President DK Shivakumar Files Nomination For Election From Kanakpura Constituency

ನಾಮಪತ್ರ ಸಲ್ಲಿಕೆಗೂ ಮುನ್ನ ಟ್ವೀಟ್‌ ಮಾಡಿರುವ ಡಿಕೆ ಶಿವಕುಮಾರ್ ಅವರು ಕರ್ನಾಟಕವು ಕನಕಪುರದ ಮೂಲಕ ಹೊಸ ಭವಿಷ್ಯ ಬರೆಯುವ ಹಾದಿಯಲ್ಲಿದೆ. ಇದನ್ನು‌ ತಡೆಯುವುದು ಅಸಾಧ್ಯ ಎಂದು ಬರೆದಿದ್ದಾರೆ. ಕನಕಪುರ ಸೇರಿದಂತೆ ರಾಜ್ಯದ ವಿವಿಧೆಡೆ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರುವ ಅವರು ಕಾಂಗ್ರೆಸ್‌ ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತದೆ. ಅದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಮಾಡಲು ಹೋಗುವ ವೇಳೆ ಅವರು ಬೈಕ್‌ ಚಲಾಯಿಸಿಕೊಂಡು ಹೋದರು. ಅವರ ಜೊತೆ ಸಾವಿರಾರು ಜನರು ಕೂಡ ತೆರಳಿದರು, ಬಳಿಕ ತೆರೆದ ವಾಹನ ಏರಿದ ಅವರು ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಕಂಡು ಹರ್ಷಚಿತ್ತರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+