ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರದ ವೈದ್ಯ ದಂಪತಿಗೆ ಸೋಂಕು; ಚಿಕಿತ್ಸೆ ಪಡೆದಿದ್ದರು ನೂರಾರು ಮಂದಿ!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜೂನ್ 18: ಕನಕಪುರದ ವೈದ್ಯ ದಂಪತಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಆತಂಕ ಉಂಟಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆ ಆಗಿದೆ.

ಕನಕಪುರದಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ವೈದ್ಯ ದಂಪತಿ ಕಳೆದ ಒಂದು ವಾರದಲ್ಲಿ 800ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಒಂದು ಸಂಗತಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ದಂಪತಿಯಿಂದ ಚಿಕಿತ್ಸೆ ಪಡೆದಿದ್ದ ನೂರಾರು ಮಂದಿಯಲ್ಲಿ ಭಯ ಶುರುವಾಗಿದೆ. ಜೊತೆಗೆ ದಂಪತಿಯಲ್ಲಿ ಪತ್ನಿ ಸ್ರ್ತೀ ರೋಗ ತಜ್ಞರಾಗಿದ್ದು, ಇವರ ಬಳಿ ಗರ್ಭಿಣಿಯರೇ ಹೆಚ್ಚಾಗಿ ಚಿಕಿತ್ಸೆ ಪಡೆದಿದ್ದರು.

ರಾಮನಗರ: ಒಂದೇ ದಿನ 12 ಮಂದಿಗೆ ಕೊರೊನಾ ವೈರಸ್ ಸೋಂಕುರಾಮನಗರ: ಒಂದೇ ದಿನ 12 ಮಂದಿಗೆ ಕೊರೊನಾ ವೈರಸ್ ಸೋಂಕು

ಎರಡು ದಿನಗಳ ಹಿಂದೆ ಕನಕಪುರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಗೆ ಈ ವೈದ್ಯರು ಚಿಕಿತ್ಸೆ ನೀಡಿದ್ದು, ಆ ವ್ಯಕ್ತಿಯಿಂದಲೇ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Kanakapura Doctor Couple Tested Coronavirus Positive

ಕನಕಪುರ ನಗರಸಭೆಯು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಎಲ್ಲರೂ ಸ್ವಯಂ ಹೋಂ ಕ್ವಾರಂಟೈನ್ ಆಗಬೇಕೆಂದು ಪ್ರಕಟಣೆ ಹೊರಡಿಸಿದೆ. ವೈದ್ಯ ದಂಪತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಹರಿದಾಡುತ್ತಿದೆ.

English summary
Coronavirus in Kanakapura doctor couple has been confirmed today. The total number of infected persons has increased to 39 in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X