ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಮೇಲೆ ಐಟಿ ದಾಳಿ
ರಾಮನಗರ, ನವೆಂಬರ್ 17: ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಮನರಂಜನಾ ತಾಣವಾದ ಇನ್ನೋವೇಟಿವ್ ಫಿಲ್ಮ್ ಸಿಟಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನ.16ರ ಬೆಳಿಗ್ಗೆ ಆದಾಯ ತೆರಿಗೆಯ 10 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಫಿಲ್ಮ್ ಸಿಟಿ ಮೇಲೆ ದಾಳಿ ನಡೆಸಿದೆ.
ಫಿಲ್ಮ್ ಸಿಟಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ ಇನ್ನೋವೇಟಿವ್ ಫಿಲ್ಮ್ ಸಿಟಿಯ ಸಿಇಓ ಉಪಾಸನ ಅವರನ್ನು ವಿಚಾರಣೆ ಮಾಡಿದ್ದಾರೆ. ಅಲ್ಲದೇ ಕಡತಗಳ ಪರಿಶೀಲನೆ ಸಹ ನಡೆಸಿದ್ದಾರೆ. ಮನೋರಂಜನ ತಾಣಗಳಲ್ಲಿ ಇನ್ನೋವೇಟಿವ್ ಫಿಲ್ಮ್ ಸಿಟಿ ಒಂದಾಗಿದ್ದು, ಕಿರುತೆರೆಯ ಖ್ಯಾತ ರಿಯಾಲೀಟಿ ಶೋ ಬಿಗ್ ಬಾಸ್ ಇದೇ ಫಿಲ್ಮ್ ಸಿಟಿಯಲ್ಲಿ ಚಿತ್ರಿಕರಣ ನಡೆಯುತ್ತಿದೆ.

ಇತ್ತೀಚೆಗೆ ಹೆಚ್ಚಿನ ಆದಾಯ ಸಂಗ್ರಹ ಮಾಡುತ್ತಿದೆ ಎಂಬ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳು ಸಂಜೆಯವರೆಗೂ ಕಡತಗಳ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications