ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೃತ ಪತ್ರಕರ್ತನ ಕುಟುಂಬಕ್ಕೆ ನೆರವಾದ ವಿಮೆ; ಸಾಮ್ರಾಟ್ ಗೌಡ ಕಾಳಜಿಗೆ ವ್ಯಾಪಕ ಮೆಚ್ಚುಗೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 28: ಸಮಾಜದ ಅಂಕುಡೊಂಕುಗಳನ್ನು ತನ್ನ ಬರವಣಿಗೆಯ ಮೂಲಕ ತಿದ್ದುವ ಪತ್ರಕರ್ತರ ಬದುಕು ತೀರಾ ಸಂಕಷ್ಟದಲ್ಲಿದೆ. ಅದರಲ್ಲೂ ಪತ್ರಕರ್ತ ಅಕಾಲಿಕ ಮರಣ ಹೊಂದಿದರೆ ಆತನನ್ನು ನಂಬಿರುವ ಕುಟುಂಬದ ಜೀವನ ನಿರ್ವಹಣೆಯ ಪಾಡು ದೇವರಿಗೆ ಪ್ರೀತಿ.

ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಿಸಿಕೊಂಡಿರುವ ಪ್ರಮುಖರೊಬ್ಬರು ಪತ್ರಕರ್ತರ ಸಂಕಷ್ಟ ಗಮನಿಸಿ, ತಮ್ಮ ಹುಟ್ಟುಹಬ್ಬದ ನೆನಪಿಗೆ ನೂರಾರು ಪತ್ರಕರ್ತರಿಗೆ ಆರೋಗ್ಯ ಮತ್ತು ಅಪಘಾತ ವಿಮೆ ಮಾಡಿಸುವ ಮೂಲಕ ನೆರವಾಗಿದ್ದರು.

ರಾಮನಗರ, ಕಾರಿನ ಮೇಲೆ ಬಿದ್ದ ಮರ, ಇಬ್ಬರು ಸಾವುರಾಮನಗರ, ಕಾರಿನ ಮೇಲೆ ಬಿದ್ದ ಮರ, ಇಬ್ಬರು ಸಾವು

ರಾಮನಗರ ಜಿಲ್ಲೆ ಮಾಗಡಿ ಮೂಲದ ಯುವ ಭಾರತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಕೆ. ಸಾಮ್ರಾಟ್ ಗೌಡ ಕಳೆದ ವರ್ಷದ ಹಿಂದೆ ತಮ್ಮ ಹುಟ್ಟುಹಬ್ಬದ ನೆನಪಿನಲ್ಲಿ ಜಿಲ್ಲೆಯ ನೂರಾರು ಪತ್ರಕರ್ತರಿಗೆ ಆರೋಗ್ಯ ಮತ್ತು ಅಪಘಾತ ವಿಮೆ ಮಾಡಿಸುವ ಮೂಲಕ ಪತ್ರಕರ್ತರ ಮೇಲಿನ ಕಾಳಜಿಯನ್ನು ವ್ಯಕ್ತಪಡಿಸಿದ್ದರು.

Insurance Assist The Family of A Deceased Journalist in Magadi; Appreciation For Samrat Gowda

ಪತ್ರಕರ್ತರ ಮೇಲಿನ ಸಾಮ್ರಾಟ್ ಗೌಡ ಅವರ ಕಾಳಜಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರವಿ ಕುಟುಂಬದ ಸಂಕಷ್ಟಕ್ಕೆ ನೆರವಾಗಿದೆ. ಮನೆಯ ಯಜಮಾನನನ್ನು ಕಳೆದುಕೊಂಡು ಸಂಕಷ್ಟದಲ್ಲಿ ಕುಟುಂಬಕ್ಕೆ, ಸಾಮ್ರಾಟ್ ಗೌಡರು ರವಿ ಹೆಸರಿನಲ್ಲಿ ಮಾಡಿಸಿದ್ದ ವಿಮೆ ಕೈಹಿಡಿದಿದ್ದು, ಮೃತನ ಕುಟುಂಬಕ್ಕೆ ವಿಮೆ ಕಂಪನಿ ಸುಮಾರು 11 ಲಕ್ಷ ರೂಪಾಯಿ ಪಾವತಿಸಲಿದೆ.

ಕಳೆದ ಹತ್ತು ವರ್ಷಗಳಿಂದ "ಹೊಸ ಆದರ್ಶ' ಪತ್ರಿಕೆಯನ್ನು ನಡೆಸುತ್ತಿದ್ದ ಹಿರಿಯ ಪತ್ರಕರ್ತ ರವಿ, ಮಂಗಳವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತ ಕುಟುಂಬಕ್ಕೆ ಆರೋಗ್ಯ ವಿಮೆ ಇಲಾಖೆಯಿಂದ ಹನ್ನೊಂದು ಲಕ್ಷ ಪರಿಹಾರ ಮೊತ್ತವನ್ನು ಕೊಡಿಸಲು ಮುಂದಾಗಿರುವ ಸಾಮ್ರಟ್ ಗೌಡರ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Insurance Assist The Family of A Deceased Journalist in Magadi; Appreciation For Samrat Gowda

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾಮ್ರಾಟ್ ಗೌಡ, ಹೊಸ ಆದರ್ಶ ಪತ್ರಿಕೆ ನಡೆಸುತ್ತಿದ್ದ ರವಿ ತುಂಬಾ ಆತ್ಮೀಯರಾಗಿ ನಮ್ಮ ಜೊತೆ ಒಡನಾಟದಲ್ಲಿ ಇದ್ದರು. ಅವರು ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದು ತುಂಬಾ ನೋವಾಗಿದೆ. ಅವರ ಕುಟುಂಬಕ್ಕೆ ನೋವು ತುಂಬುವ ಶಕ್ತಿಯನ್ನು ಭಗವಂತ ನೀಡಲಿ ಎಂದು ವಿಷಾದಿಸಿದ್ದಾರೆ.

ನನ್ನ ಹುಟ್ಟಿದ ಹಬ್ಬದ ಪ್ರಯುಕ್ತ ರಾಮನಗರ ಜಿಲ್ಲಾ ಪತ್ರಕರ್ತರಿಗೆ ಸ್ಟಾರ್ ಹೆಲ್ತ್ ಕಂಪನಿಯಿಂದ ಪತ್ರಕರ್ತರಿಗೆ ವಿಮೆ ಮಾಡಿಸಿದೆ. ಅಪಘಾತದಲ್ಲಿ ಮೃತಪಟ್ಟಿರುವ ರವಿ ಅವರ ಕುಟುಂಬಕ್ಕೆ ಸ್ಟಾರ್ ಹೆಲ್ತ್ ಕಂಪನಿಯಿಂದ 11 ಲಕ್ಷ ಪರಿಹಾರವನ್ನು ಕೊಡಿಸುವ ಕೆಲಸವನ್ನು ಮಾಡುತ್ತೇನೆ. ಈಗಾಗಲೇ ಸ್ಟಾರ್ ಹೆಲ್ತ್ ಏಜೆಂಟರಾದ ಚಕ್ರಬಾವಿ ಜಗದೀಶ್‌ರವರ ಜೊತೆ ಮಾತನಾಡಿದ್ದು, ರವಿ ಕುಟುಂಬವರಿಂದ ಶೀಘ್ರದಲ್ಲೇ ದಾಖಲೆಗಳನ್ನು ಪಡೆದು ಕೂಡಲೇ ಅವರ ಕುಟುಂಬಕ್ಕೆ ಹನ್ನೊಂದು ಲಕ್ಷ ಪರಿಹಾರವನ್ನು ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

Recommended Video

ರಶೀದ್ ಸಿಕ್ಸರ್ ನೋಡಿ ತಾಳ್ಮೆ ಕಳೆದುಕೊಂಡ ಮುತ್ತಯ್ಯ ಮುರಳೀಧರನ್ ಮಾಡಿದ್ದೇನು? | Oneindia Kannada

ಪತ್ರಕರ್ತರು ಸುದ್ದಿ ವಿಚಾರವಾಗಿ ಸಾಕಷ್ಟು ಕಡೆ ಓಡಾಡುತ್ತಿರುತ್ತಾರೆ ಜೀವನದ ಹಂಗನ್ನು ಲೆಕ್ಕಿಸದೆ ಸುದ್ದಿಗಾಗಿ ಸದಾ ಓಡಾಡುತ್ತಿರುವ ಪತ್ರಕರ್ತರಿಗೆ ಈ ರೀತಿ ಆಗಿರುವುದು ನೋವಿನ ವಿಚಾರವಾಗಿದ್ದು, ಪತ್ರಕರ್ತರ ಮೇಲಿನ ಕಾಳಜಿಯಿಂದ ವಿಮೆ ಮಾಡಿಸಿದ್ದೆ ಹಾಗೂ ವಿಮೆಗಳ ರಿನಿವಲ್ ಕೂಡ ಮಾಡಿದ್ದೇವೆ. ವಿಮೆಯ ಮೂಲಕ ಅವರ ಕುಟುಂಬಕ್ಕೆ ಸಣ್ಣ ಸಹಾಯ ಮಾಡುತ್ತಿರುವುದಾಗಿ ಸಾಮ್ರಾಟ್ ಗೌಡ ತಿಳಿಸಿದರು.

English summary
Health and Accident Insurance has Assist to the hardship of Ravi's family who died in a road accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X