ಸಿಪಿ ಯೋಗೇಶ್ವರ್‌ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?

ರಾಮನಗರ, ಜನವರಿ 22; "ಈ ಹಿಂದೆ ಏತ ನೀರಾವರಿ ಯೋಜನೆಯಲ್ಲಿ ಹಣ ಗೋಲ್ ಮಾಲ್ ಮಾಡಿದ್ದಾರೆ. ಕಳಪೆ ಪೈಪ್ ಹಾಕಿ ಹಣ ಮಾಡಿ ಇದೀಗ ಅದರ ಹೊಣೆಯನ್ನು ನನ್ನ ಮೇಲೆ ಹಾಕಿದ್ದಾರೆ. ಈ ಕೆಲಸವನ್ನು ರಾಜ್ಯದಲ್ಲಿ ಮಾಡಬೇಡಿ. ಒಳ್ಳೆ ರೀತಿ ಕೆಲಸ ಮಾಡಿ ಕ್ಷೇತ್ರದ ಹೆಸರು ಉಳಿಸಿಕೊಳ್ಳಿ" ಎಂದು ಚನ್ನಪಟ್ಟಣ ಶಾಸಕ ಎಚ್. ಡಿ. ಕುಮಾರಸ್ವಾಮಿ ಸಚಿವ ಸಿ. ಪಿ. ಯೋಗೇಶ್ವರ್‌ಗೆ ಸಲಹೆ ನೀಡಿದರು.

ಶುಕ್ರವಾರ ಚನ್ನಪಟ್ಟಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನದ ಉದ್ಘಾಟನೆ ನಡೆಯಿತು. ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಚಿವ ಯೋಗೇಶ್ವರ್ ಬೆಂಬಲಿಗರು ಈಗ ಉದ್ಘಾಟನೆ ಬೇಡ ಎಂದು ಕಾರ್ಯಕ್ರಮದ ಬಗ್ಗೆ‌ ಅಪಸ್ವರ ಎತ್ತಿದ್ದರು.

ಎಚ್. ಡಿ. ಕುಮಾರಸ್ವಾಮಿ ಅವರು ಮಾತನಾಡಿ, "ಸಚಿವರು ರಾಜ್ಯಕ್ಕೆ ಸಚಿವರಷ್ಟೇ ಅವರು ಚನ್ನಪಟ್ಟಣದ ಒಂದು ಅಂಗ ಅಷ್ಟೆ. ಚನ್ನಪಟ್ಟಣದಲ್ಲಿ ಶಾಸಕನಾಗಿ ಹೆಚ್ಚಿನ ಅಧಿಕಾರ ನನಗಿದೆ. ಲಘುವಾಗಿ ಮಾತನಾಡುವುದನ್ನು ಅವರು ಬಿಡಬೇಕು" ಎಂದರು.

HD Kumaraswamy Suggestion To Minister CP Yogeshwar

"ಇತರ ಮಾತನಾಡಿದರೆ ನನ್ನ ಮೇಲೆ ಅಭಿಮಾನ ಇರುವ ಜನರು ಇನ್ನಷ್ಟು ಬಿಗಿ ಆಗುತ್ತಾರೆ. ನಿಮ್ಮ ಇಲಾಖೆಯನ್ನು ಸರಿಯಾಗಿ ನಡೆಸುವುದನ್ನು ಕಲಿತುಕೊಳ್ಳಿ, ಗುಣತ್ಮಕವಾಗಿ ಕೆಲಸ ಮಾಡಿ" ಎಂದು ಸಿ. ಪಿ. ಯೋಗೇಶ್ವರ್‌ಗೆ ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮ; ಅಂಬೇಡ್ಕರ್ ಭವನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, "15 ವರ್ಷಗಳ ನಂತರ ಈ‌ ಭವನ ಉದ್ಘಾಟನೆ ಕಂಡಿದೆ. ಶಾಸಕರು, ಸಂಸದರು, ಸಮಾಜ ಕಲ್ಯಾಣ ಇಲಾಖೆ ಅನುದಾನ ಬಳಸಿಕೊಳ್ಳಲಾಗಿದೆ" ಎಂದರು.

"ಈ ಭವನವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ನಾನು ಕ್ಷೇತ್ರದ ಶಾಸಕನಾದ ಮೇಲೆ ಭವನ ಉದ್ಘಾಟನೆ ಮಾಡಲು ಶ್ರಮ ವಹಿಸಿದ್ದೇನೆ. ಚುನಾವಣೆ ನಂತರ ರಾಜಕೀಯ ಮುಖ್ಯವಲ್ಲ. ಕ್ಷೇತ್ರದ ಮತದಾರರ ಅಭಿವೃದ್ಧಿ ಮುಖ್ಯ. ಬಿಜೆಪಿ ಸರ್ಕಾರದ ಕೆಲ ಸಚಿವರ ಜೊತೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ" ಎಂದು ಹೇಳಿದರು.

"ನಾನು ಯಾವ ಗುತ್ತಿಗೆದಾರರ ಬಳಿ‌ ಕಮಿಷನ್ ಹಣ ಕೇಳಿಲ್ಲ. ಗುಣಮಟ್ಟದ ಕೆಲಸವಾಗಬೇಕು ಅಷ್ಟೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಜೊತೆ ನಾನು ಇರುತ್ತೇನೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ. ಶ್ರೀರಾಮುಲು ಅವರು ಈ ಕಾರ್ಯಕ್ರಮಕ್ಕೆ ಬರುವುದಕ್ಕೂ ಒತ್ತಡ ಇತ್ತು" ಎಂದು ಕುಮಾರಸ್ವಾಮಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+