• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌ಗೆ ಹೆಚ್ಚು ಅನುದಾನ: ಪುರಸಭೆ ತಾರತಮ್ಯ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ಎಚ್ಚರಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 16: ಜಿಲ್ಲೆಯ ಬಿಡದಿ ಪುರಸಭೆಯ ನಡೆದಿರುವ ಅನುದಾನ ಹಂಚಿಕೆ ತಾರತಮ್ಯವನ್ನು ಅಧಿಕಾರಿಗಳು ಸರಿಪಡಿಸಬೇಕು ಇಲ್ಲವಾದರೆ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎಚ್.ಸಿ‌‌.ಬಾಲಕೃಷ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಡದಿ ಪುರಸಭೆಯ ಆಡಳಿತಾಧಿಕಾರಿಗಳು ಸರ್ಕಾರದಿಂದ ಪುರಸಭೆಗೆ ಮಂಜೂರಾದ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಸಿ.ಬಾಲಕೃಷ್ಣ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.

ಕೋಲಾರದಲ್ಲಿ ಸಿದ್ದರಾಮಯ್ಯಗೆ ಯಾವುದೇ ಅಪಾಯವಿಲ್ಲ: ಮುನಿಯಪ್ಪಕೋಲಾರದಲ್ಲಿ ಸಿದ್ದರಾಮಯ್ಯಗೆ ಯಾವುದೇ ಅಪಾಯವಿಲ್ಲ: ಮುನಿಯಪ್ಪ

ಈ ಸಂಬಂಧ ಬಿಡದಿ ಪಟ್ಟಣದ ಐಕಾನ್ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಹೆಚ್‌.ಸಿ.ಬಾಲಕೃಷ್ಣ ಬಿಡದಿ ಪುರಸಭೆಗೆ ಚುನಾವಣೆ ನಡೆದು 11 ತಿಂಗಳು ಕಳೆದಿದೆ. ಹಲವು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಮೀಸಲು ನಿಗದಿ ಗೊಂದಲದಿಂದ ನ್ಯಾಯಾಲಯದಲ್ಲಿ ಪ್ರಕರಣ ಇನ್ನೂ ಬಾಕಿಯ ಇರುವ ಹಿನ್ನಲೆಯಲ್ಲಿ ಆಸಿಸ್ಟಿಂಟ್ ಕಮಿಷನರ್ ಅವರನ್ನು ಆಡಳಿತ ಅಧಿಕಾರಿಯಾಗಿ ಸರ್ಕಾರ ನೇಮಕಮಾಡಿದೆ.

ಸರ್ಕಾರದಿಂದ ಬಂದ ಅನುದಾನವನ್ನು ಪುರಸಭೆಯ ಎಲ್ಲಾ ವಾರ್ಡ್‌ಗಳಿಗೆ ಸಮವಾಗಿ ಹಂಚಿಕೆ ಮಾಡಬೇಕಾದ ಅಧಿಕಾರಿ, ಜೆಡಿಎಸ್ ಪುರಸಭಾ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಪುರಸಭಾ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಜಿ‌ ಶಾಸಕರು ಆರೋಪಿಸಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಬಿಡದಿ ಪುರಸಭೆಯ ಒಟ್ಟು 23 ವಾರ್ಡ್‌ಗಳ ಪೈಕಿ 14ರಲ್ಲಿ ಜೆಡಿಎಸ್, 9 ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಇದ್ದಾರೆ. ಪುರಸಭೆ ನಿಧಿ, ನಗರೋತ್ತನ, 15 ನೇ ಹಣಕಾಸು ಹಾಗೂ ಎಸ್.ಎಫ್.ಸಿ ಅಡಿಯಲ್ಲಿ ಪುರಸಭೆಗೆ ಬರುವ ಅನುಧಾನವನ್ನ ಸಮಾನಾಂತರವಾಗಿ ಎಲ್ಲಾ ಸದಸ್ಯರ ವಾರ್ಡ್‌ಗಳಿಗೆ ಹಂಚಿಕೆ ಮಾಡಿಲ್ಲ. ಕೇವಲ ಜೆಡಿಎಸ್ ಸದಸ್ಯರು ಇರುವ ವಾರ್ಡ್‌ಗಳಿಗಷ್ಟೆ ಅನುಧಾನವನ್ನ ಅಧಿಕಾರಿಗಳು ಹಂಚಿಕೆ ಮಾಡಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ

ಜಿಲ್ಲಾಧಿಕಾರಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ

ಜೆಡಿಎಸ್ ಸದಸ್ಯರ ವಾರ್ಡ್‌ಗಳ ಅಭಿವೃದ್ಧಿಗೆ 90% ಅನುದಾನ ನೀಡಿರುವ ಪುರಸಭಾ ಅಧಿಕಾರಿ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳ ಅಭಿವೃದ್ಧಿಗೆ ಕೇವಲ 10% ಅನುದಾನ ಬಿಡುಗಡೆ ಮಾಡಿದ್ದಾರೆ. ಆಡಳಿತ ಅಧಿಕಾರಿಯ ತಾರತಮ್ಯ ಖಂಡಿಸಿ ಸಂಸದರಾದ ಡಿ.ಕೆ.ಸುರೇಶ್, ಎಂ.ಎಲ್.ಸಿ ಸಿಎಂ ಲಿಂಗಪ್ಪ ನಾನು ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ಮನವಿ ಮಾಡಿದ್ದೆವು, ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಕಾಮಗಾರಿಗೆ ಚಾಲನೆಗೆ ಬಿಡಲ್ಲ

ಕಾಮಗಾರಿಗೆ ಚಾಲನೆಗೆ ಬಿಡಲ್ಲ

ಅನುದಾನ ಹಂಚಿಕೆ ತಾರತಮ್ಯವನ್ನ ಆಡಳಿತಾಧಿಕಾರಿಗಳು ಸೋಮವಾರದ ಒಳಗಾಗಿ ಸರಿಪಡಿಸದಿದ್ದರೆ ಪುರಸಭೆ ಕಚೇರಿ ಎದುರು ಸೋಮವಾರದಿಂದ ನಮ್ಮ ಹೋರಾಟ ಪ್ರಾರಂಭಿಸಬೇಕಾಗುತ್ತದೆ. ಈಗಾಗಲೇ ಜೆಡಿಎಸ್ ಸದಸ್ಯರ ವಾರ್ಡ್‌ಗಳಿಗೆ ಹಣ ಹಂಚಿಕೆ ಮಾಡಿ ಎಸ್ಟಿಮೇಟ್ ಮಾಡಿ ಟೆಂಡರ್ ಕೂಡ ಮಾಡಲಾಗಿದೆ. ಇನ್ನೂ ಕೇವಲ ವರ್ಕ್ ಅರ್ಡರ್ ಬರಬೇಕಿದೆ. ಒಂದು ವೇಳೆ ಏನಾದರೂ ಇದನ್ನ ರದ್ದು ಮಾಡದೆ ಗುತ್ತಿಗೆದಾರ ವಾರ್ಡ್‌ಗಳಲ್ಲಿ ಕೆಲಸ ಪ್ರಾರಂಭಿಸಲು ಬಂದರೆ ನಾವು ಬಿಡಲ್ಲ ವಾರ್ಡ್ ಜನೆತೆಯ ಜೊತೆಗೆ ನಾವು ಪ್ರತಿಭಟನೆ ನಡೆಸಲಾಗುವುದು ಎಂದು ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ವಾರ್ಡ್ ಟಾರ್ಗೆಟ್

ಕಾಂಗ್ರೆಸ್ ವಾರ್ಡ್ ಟಾರ್ಗೆಟ್

ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿರುವ ವಾರ್ಡ್‌ನ ಮತದಾರರ ನಮ್ಮನ್ನ ಕೈ ಹಿಡಿದಿಲ್ಲ ಎಂದು ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ 9 ವಾರ್ಡ್‌ಗಳನ್ನ ಶಾಸಕರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಉಮೇಶ್ ಕಿಡಿಕಾರಿದರು. 2021-22 ನೇ ಸಾಲಿನಲ್ಲಿ ಒಟ್ಟು 8.5 ಕೋಟಿ ಅನುಧಾನ ಸರ್ಕಾರದಿಂದ ಬಂದಿದೆ. ಇದರಲ್ಲಿ 4.91ಕೋಟಿಯನ್ನ ನೀರು ಹಾಗೂ ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟು 3.59 ಕೋಟಿಯನ್ನ ಸಮಾಜ ಸೇವೆ, ಎಸ್ಸಿ ಎಸ್.ಟಿ ಸೇರಿದಂತೆ ಇತರೆ ಸೇವೆಗಳಿಗೆ ಮೀಸಲಿಡಲಾಗಿತ್ತು. 4.91 ಕೋಟಿಯಲ್ಲಿ 13,14,19 ನೇ ಕಾಂಗ್ರೆಸ್ ವಾರ್ಡ್‌ಗಳಿಗೆ ತಲಾ 12.5 ಲಕ್ಷದಂತೆ ಅನುದಾನ ಹಂಚಿಕೆ ಮಾಡಿ ಉಳಿದ ಹಣವನ್ನ ಜೆಡಿಎಸ್ ಸದಸ್ಯರು ಇರುವ ವಾರ್ಡ್‌ಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಅಂಕಿಅಂಶಗಳ ಸಮೇತ ಉಮೇಶ್ ಮಾತನಾಡಿದರು.

ಸುದ್ದಿಗೋಷ್ಟಿಯಲ್ಲಿ ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್, ಪರಸಭೆ ಸದಸ್ಯರಾದ ರಾಮಚಂದ್ರು, ಹೊಂಬಣ್ಣ, ಕುಮಾರ್, ನವೀನ್, ಮುಖಂಡರಾದ ಬೆಟ್ಟಸ್ವಾಮಿ, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

English summary
Former MLA HC Balakrishna condemned the discrimination in Bidadi Municipality grant allocation and warned that the Congress would stage a protest in front of the municipal office if the authorities did not correct it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X