ರಾಮನಗರದಲ್ಲಿ ಪೊಲೀಸರ ಮೇಲೆ ಹೂ ಮಳೆಗೆರೆದ ಸಾರ್ವಜನಿಕರು
ರಾಮನಗರ, ಏಪ್ರಿಲ್ 21: ಕೊರೊನಾ ವೈರಸ್ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಪೊಲೀಸ್ ಪಥಸಂಚಲಕ್ಕೆ ಚನ್ನಪಟ್ಟಣದ ಸಾರ್ವಜನಿಕರು ಹೂ ಮಳೆಗೆರೆದಿದ್ದಾರೆ. ಕೊರೊನಾ ವೈರಸ್ ಭೀತಿ ನಡುವೆಯೂ ಜೀವದ ಹಂಗು ತೊರೆದು ದುಡಿಯುತ್ತಿರುವ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
Recommended Video
ರಾಮನಗರದ ಸಭೆಯಲ್ಲಿ ಕುಮಾರಸ್ವಾಮಿಯವರು ತೆಗೆದುಕೊಂಡ ತೀರ್ಮಾನವೇನು ? | Kumarswamy | Ramnagara | DC | SP
ಚನ್ನಪಟ್ಟಣ ನಗರದಲ್ಲಿ ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಪೊಲೀಸರು ವಿನೂತನ ಪ್ರಯೋಗ ಮಾಡಿದ್ದಾರೆ. ಡಿವೈಎಸ್ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಿ ಮನೆಯಿಂದ ಅನಗತ್ಯವಾಗಿ ಯಾರು ಹೊರ ಬರಬೇಡಿ ಎಂದು ಮನವಿ ಮಾಡಿದರು. ಇತ್ತ ಪೊಲೀಸರ ನಡೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರು ರೂಟ್ ಮಾರ್ಚ್ ಮಾಡುತ್ತ ಸಾಗುತ್ತಿದ್ದ ರಸ್ತೆಗಳಲ್ಲಿ ಸಾರ್ವಜನಿಕರು ಹೂ ಎರಚುವುದರ ಮೂಲಕ ಪೊಲೀಸರ ಕರ್ತವ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದು ಕಂಡುಬಂದಿದೆ.

ಇನ್ನು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ತಮ್ಮ ಕಾರ್ಯಕರ್ತರ ಜತೆಗೆ ಸೇರಿ ಪೊಲೀಸರ ಮೇಲೆ ಹೂ ಎರಚುತ್ತ, ಪೊಲೀಸರ ಜಾಗೃತಿಗೆ ಅಭಿನಂದಿಸಿದರು.












Click it and Unblock the Notifications