ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ತಾಲೂಕಿನ ಅಮ್ಮಳ್ಳಿದೊಡ್ಡಿಯಲ್ಲಿ ರೈತನ ಮೇಲೆ ಕಾಡಾನೆ ದಾಳಿ, ಜನಾಕ್ರೋಶ

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ, ಅಕ್ಟೋಬರ್‌, 16: ತಾಲೂಕಿನ ಅಮ್ಮಳ್ಳಿದೊಡ್ಡಿಯಲ್ಲಿ ರೈತರ ಜಮೀನುಗಳ ಮೇಲೆ ದಾಗುಂಡಿ ಇಟ್ಟು ಹಾವಳಿ ನೀಡುತ್ತಿದ್ದ ಎರಡು ಪುಂಡಾನೆಯನ್ನು ಸಾಕಾನೆ ಬಳಸಿ ಸೆರೆ ಹಿಡಿದಿದ್ದರು. ಆದರೂ ಕೂಡ ಮತ್ತೆ ಕಾಡಾನೆಗಳ ಉಪಟಳ ಹೆಚ್ಚಾಗುತ್ತಲೇ ಇದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಹೊಲಕ್ಕೆ ಹೋಗಿದ್ದ ರೈತನ ಮೇಲೆ ಆನೆಯೊಂದು ದಾಳಿ ಮಾಡಿದೆ. ಆನೆ ದಾಳಿಯಲ್ಲಿ ರೈತ ಗಂಭೀರ ಗಾಯಗೊಂಡಿರುವ ಘಟನೆ ಅಮ್ಮಳ್ಳಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದ ರೈತ ಚೇತನ್ (33) ಜಮೀನಿನ ಬಳಿ ತೆರಳಿದ್ದಾಗ ಆನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ರೈತ ಚೇತನ್ ಕಿವಿ, ಬೆನ್ನು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಅದೃಷ್ಟವಶಾತ್ ಚೇತನ್‌ ಕಾಡಾನೆ ದಾಳಿಯಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಭಾರಿ ಮಳೆಗೆ ರೇಷ್ಮೆ ನಗರಿ ರಾಮನಗರದಲ್ಲಿ ಮತ್ತೆ ಜಲ ಕಂಟಕಭಾರಿ ಮಳೆಗೆ ರೇಷ್ಮೆ ನಗರಿ ರಾಮನಗರದಲ್ಲಿ ಮತ್ತೆ ಜಲ ಕಂಟಕ

ರೈತ ಚೇತನ್‌ ಗದ್ದೆ ಬಳಿ ಹೋದ ಸಮಯದಲ್ಲಿ ಹಿಂದಿನಿಂದ ಬಂದ ಕಾಡಾನೆ ದಾಳಿ ನಡೆಸಿತ್ತು. ಅಲ್ಲದೆ ಕೊರೆಯಲ್ಲಿ ತಿವಿಯಲು ಯತ್ನಿಸಿದೆ. ಚೇತನ್ ಮೇಲೆ ಆನೆ ದಾಳಿ ಮಾಡಿತ್ತಿರುವುದನ್ನು ಕಂಡ ಚೇತನ್ ಸ್ನೇಹಿತರು ಜೋರಾಗಿ ಕಿರುಚಾಡಿದ್ದಾರೆ. ಆಗ ಆನೆ ಚೇತನ್‌ ನನ್ನು ಬಿಟ್ಟು ಪರಾರಿಯಾಗಿದೆ. ಕಾಡಾನೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ರೈತ ಚೇತನ್‌ನನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸರ್ಕಾರ ಅನುಮತಿ, ಸೆರೆಯಾಗದ ಕಾಡಾನೆ

ಸರ್ಕಾರ ಅನುಮತಿ, ಸೆರೆಯಾಗದ ಕಾಡಾನೆ

ಇನ್ನು ರೈತನ ಮೇಲಿನ ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಉಪಟಳ ನೀಡುತ್ತಿದ್ದ ‌ಒಂಟಿ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಸರ್ಕಾರ ಅರಣ್ಯ ಇಲಾಖೆಗೆ ಅನುಮತಿ ನೀಡಿತ್ತು. ಆದರೆ ಅರಣ್ಯ ಇಲಾಖೆ ಒಂದು ಒಂದು ಕಾಡಾನೆಯನ್ನು ಮಾತ್ರ ಸೆರೆಹಿಡಿದಿದೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಚೇತನ್ ಮೇಲೆ ಕಾಡಾನೆ ದಾಳಿ

ರೈತ ಚೇತನ್ ಮೇಲೆ ಕಾಡಾನೆ ದಾಳಿ

ಪದೇ ಪದೇ ಉಪಟಳ ನೀಡುತ್ತಿದ್ದ ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯಬೇಕಾದ ಅರಣ್ಯ ಇಲಾಖೆ ಇದೀಗ ನಿರ್ಲಕ್ಷ್ಯ ತೋರುತ್ತಿದೆ. ಅಧಿಕಾರಿಗಳು ಆನೆಯನ್ನು ಕೈಬಿಟ್ಟು, ಮರಿ ಆನೆಯನ್ನು ಸೆರೆಹಿಡಿದಿದೆ. ಕೈಬಿಟ್ಟ ಕಾಡಾನೆಯೇ ನಮಗೆ ಉಪಟಳ ನೀಡುತ್ತಿದೆ. ಇದೇ ಕಾಡಾನೆ ಗದ್ದೆ ಬಳಿಗೆ ತೆರಳಿದ್ದ ರೈತ ಚೇತನ್ ಮೇಲೆ ಹಾಡಗಲೇ ದಾಳಿ ಮಾಡಿದೆ ಎಂದು ಗ್ರಾಮಸ್ಥರು‌ ಅರಣ್ಯ ಇಲಾಖೆಯ ವಿರುದ್ಧ ಹರಿಹಾಯ್ದರು.

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಮರಿಯಾನೆ ಸೆರೆಹಿಡಿದು ಇದೇ ಕಾಡಾನೆ ಎಂದು ಜನರನ್ನು ನಂಬಿಸಲಿ ಯತ್ನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯುತ್ತೇವೆ. ನಾಳೆಯಿಂದಲೇ ಸಾಕಾನೆ ಬಳಸಿಕೊಂಡು ಕಾರ್ಯಾಚರಣೆ ಪ್ರಾರಂಭಿಸುತ್ತೆವೆ ಎಂದು ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ಕಳೆದರು ಪುಂಡಾನೆ ಸೆರೆ ಕಾರ್ಯಾಚರಣೆ ಪ್ರಾರಂಭಿಸದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕೆಂಡಕಾರಿದ್ದಾರೆ.

ನಾಡಾನೆ ಬಳಸಿಕೊಂಡು ಕಾಡಾನೆಗಳ ಸೆರೆ

ನಾಡಾನೆ ಬಳಸಿಕೊಂಡು ಕಾಡಾನೆಗಳ ಸೆರೆ

ತೆಂಗಿನಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಯ ಬಿ‌.ವಿ.ಹಳ್ಳಿ ಗ್ರಾಮದ ಅರಣ್ಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ಕಾಡಾನೆಯನ್ನು ಸೆರೆ ಹಿಡಿದಿರುವುದಾಗಿ ಅರಣ್ಯ ಇಲಾಖೆ ಹೇಳಿತ್ತು. ದುಬಾರೆ ಆನೆ ಶಿಬಿರದ ಹರ್ಷ, ಪ್ರಶಾಂತ್, ಲಕ್ಷ್ಮಣ, ಹಾಗೂ ಮತ್ತಿಗೋಡು ಆನೆ ಕ್ಯಾಂಪ್‌ನ ಮಹಾರಾಷ್ಟ್ರ ಭೀಮ, ಗಣೇಶ ಆನೆಗಳ ಬಳಸಿಕೊಂಡು ಸುಮಾರು 50ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾವುತರು 36 ವರ್ಷದ ಒಂದು ಆನೆ ಮತ್ತು 19ವರ್ಷದ ಮತ್ತೊಂದು ಆನೆಯನ್ನು ಸೆರೆಹಿಡಿದು ಸ್ಥಳಾಂತರ ಮಾಡಿರುವುದಾಗಿ ತಿಳಿಸಿದ್ದರು.

English summary
Farmer Chetan injured from Elephant attack in Ammallidoddy village of Ramanagara taluk. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X