ಕುತೂಹಲ ಕೆರಳಿಸಿದ ಡಿಕೆ ಶಿವಕುಮಾರ್ -ನಿತ್ಯಾನಂದ ಸ್ವಾಮೀಜಿ ಭೇಟಿ

Recommended Video

      ಡಿ ಕೆ ಶಿವಕುಮಾರ್ ನಿತ್ಯಾನಂದ ಸ್ವಾಮೀಜಿಯನ್ನ ಭೇಟಿ ಮಾಡಿರುವ ಫೋಟೋಗಳು ವೈರಲ್ | Oneindia Kannada

      ಬಿಡದಿ, ಏಪ್ರಿಲ್ 20: ಇಂಧನ ಸಚಿವ, ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಹಾಗೂ ಮಾಗಡಿ ಶಾಸಕ ಎಚ್. ಸಿ ಬಾಲಕೃಷ್ಣ ಅವರು ಇತ್ತೀಚೆಗೆ ಬಿಡದಿಯ ಶ್ರೀನಿತ್ಯಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ನಿತ್ಯಾನಂದ ಸ್ವಾಮೀಜಿ ಅವರ ಜತೆ ಕೆಲ ಕಾಲ ಮಾತುಕತೆ ನಡೆಸಿದರು.

      ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಮತಯಾಚನೆ ಸಂದರ್ಭದಲ್ಲಿ ಎಲ್ಲಾ ಆಶ್ರಮ, ಮನೆ ಮಠಗಳಿಗೆ ತೆರಳಬೇಕಾಗುತ್ತದೆ. ಅದೇ ರೀತಿ ಬಿಡದಿ ಆಶ್ರಮಕ್ಕೆ ಬಂದು ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಳ್ಳಲಾಗಿದೆ ಎಂದರು.

      Elections 2018 : DK Shivakumar meets Nithyananada Swamiji Bidadi Ashram

      ಇಂಧನ ಸಚಿವ ಡಿ.ಕೆ. ಶಿವಕುಮಾರ್​ ಅವರು ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮೀಜಿ ಅವರಿಗೆ ಶಾಲು ಹೊದೆಸಿ, ಗೌರವ ನೀಡಿದ ಚಿತ್ರಗಳನ್ನು ಆಶ್ರಮದವರು ಫೇಸ್ ಬುಕ್ ನಲ್ಲಿ ಹಾಕಿದ್ದು, ಈಗ ಸಾಮಾಜಿಕ ಜಾಲ ತಾಣಗಳ ಮೂಲೆ ಮೂಲೆ ತಲುಪುತ್ತಿವೆ.

      ಡಿ.ಕೆ ಶಿವಕುಮಾರ್​​ ಕೂಡ ಕನಕಪುರ ಕ್ಷೇತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಿತ್ಯಾನಂದ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಮ್ಯಾಜಿಕ್ ನಂಬರ್(113 ಪ್ಲಸ್) ಸುಲಭವಾಗಿ ದಾಟಲಿದೆ, ಅಧಿಕಾರ ಉಳಿಸಿಕೊಳ್ಳುತ್ತೀರಾ ಎಂದು ಡಿಕೆಶಿ ಅವರನ್ನು ಹರಿಸಿದ್ದಾರೆ ಎಂಬ ಮಾತುಗಳು ಹರಡಿವೆ. ಏನಾಗುವುದೋ ಕಾದು ನೋಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+