• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಣ್ಣೆ ಏಟಲ್ಲಿ ಶಾಸಕ ಎ.ಮಂಜುಗೆ ಕುಡುಕರ ಅವಾಜ್

|

ರಾಮನಗರ, ಮೇ 4: ಎಣ್ಣೆ ಏಟಲ್ಲಿ ಮಾಗಡಿ ಶಾಸಕ ಎ.ಮಂಜುಗೆ ಕುಡುಕರು ಬಹಿರಂಗವಾಗಿ ಅವಾಜ್ ಹಾಕಿದ್ದಾರೆ. ರಾಮನಗರ ಜಿಲ್ಲೆ ಮಾಗಡಿಯ ಬಸವನಪಾಳ್ಯದಲ್ಲಿ ಈ ಘಟನೆ ನಡೆದಿದೆ.

ರಸ್ತೆ ಕಾಮಗಾರಿ ಸಂಬಂಧ ಪೂಜೆಗೆ ಗ್ರಾಮಕ್ಕೆ ಶಾಸಕ ಎ.ಮಂಜು ಭೇಟಿ ನೀಡಿದ್ದರು. ಈ ವೇಳೆ ಕೆಲ ಕುಡುಕರು ಶಾಸಕರ ಮೇಲೆ ಗರಂ ಆಗಿದ್ದಾರೆ. ಗ್ರಾಮದ ಹಾಲಿನ ಡೈರಿ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಇಂದು ಬಾರ್ ಗಳು ಓಪನ್ ಆಗಿದ್ದು, ಎಣ್ಣೆ ಹಾಕಿದ್ದ ಮತ್ತಿನಲ್ಲಿ ಗಲಾಟೆ ನಡೆದಿದೆ.

ಕುಡಿಯುವುದಕ್ಕೆ ಮುಂಚೆಯೇ ಅಂಗಡಿ ಮುಂದೆ ತಲೆತಿರುಗಿ ಬಿದ್ದ ಯುವತಿ

ಬಸವನಪಾಳ್ಯದ ಹಾಲಿನ ಡೈರಿಯ ಆಡಳಿತ ಮಂಡಳಿ ಸೂಪರ್ ಸೀಡ್ ಆದ ಹಿನ್ನೆಲೆ ಈ ವಿಚಾರವಾಗಿ ಶಾಸಕ ಎ.ಮಂಜು ವಿರುದ್ಧ ಕೆಲವರು ಗರಂ ಆಗಿದ್ದಾರೆ.ಬೆಳಗ್ಗೆಯೇ ಫುಲ್ ಟೈಟ್ ಆಗಿ ಎ ಮಂಜುಗೆ ಅವಾಜ್ ಹಾಕಿದ್ದಾರೆ. ನಂತರ ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಘಟನೆ ಬಗ್ಗೆ ತಿಳಿದ ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಲವರನ್ನ ವಿಚಾರಣೆಗೊಳಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

English summary
Drunk people fight against mla a manju in Basavanapalya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X