ಡಿಕೆ ಶಿವಕುಮಾರ್ ಪರ ಮತ ಕೇಳುವಾಗ ಕಣ್ಣೀರು ಹಾಕಿದ ಡಿಕೆ ಸುರೇಶ್ ಹೇಳಿದ್ದೇನು?
ಕನಕಪುರ ಕ್ಷೇತ್ರದಲ್ಲಿ ಅಣ್ಣ ಡಿಕೆ ಶಿವಕುಮಾರ್ ಪರವಾಗಿ ಪ್ರಚಾರ ಮಾಡುವ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಕಣ್ಣೀರು ಹಾಕಿದ್ದಾರೆ. ಕೆಲವರು ಡಿಕೆಶಿ ಯಾಕೆ ಗಡ್ಡ ಬಿಟ್ಕೊಂಡವ್ರೆ ಅಂತಾ ಕೇಳ್ತಿದ್ದಾರೆ, ಅದಕ್ಕೆ ಕ್ಷೇತ್ರದ ಜನ ಉತ್ತರ ಕೊಡಬೇಕು. ಗಡ್ಡ ಯಾಕೆ ಬಿಟ್ಟವ್ರೆ ಎನ್ನೋದು 13ನೇ ತಾರೀಖು ತೀರ್ಮಾನ ಆಗುತ್ತೆ ಎನ್ನುವ ಸಂದರ್ಭದಲ್ಲಿ ಗದ್ಗದಿತರಾದರು.
ಕನಕಪುರದಲ್ಲಿ ಡಿಕೆಶಿ ಏಕಚಕ್ರಾಧಿಪತ್ಯ ಮುರಿಯಲು ಮಾಸ್ಟರ್ ಪ್ಲ್ಯಾನ್ ಮಾಡಿರುವ ಬಿಜೆಪಿ ಸಚಿವ ಅಶೋಕ್‌ರನ್ನು ಕಣಕ್ಕಿಳಿಸಿದೆ. ಈ ಮೂಲಕ ಕನಕಪುರ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿದೆ.

ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್, 7ನೇ ಗೆಲುವು ಪಡೆಯುವ ವಿಶ್ವಾಸದಲ್ಲಿದ್ದಾರೆ. ಆದರೆ ಈ ಬಾರಿ ಡಿಕೆಶಿಗೆ ಗೆಲುವು ಅಷ್ಟು ಸುಲಭವಾಗಿಲ್ಲ, ಅಶೋಕ್ ಕೂಡ ಒಕ್ಕಲಿಗರಾಗಿರುವುದರಿಂದ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ.
ಡಿಕೆ ಶಿವಕುಮಾರ್ ಸದ್ಯ ರಾಜ್ಯದ ಹಲವು ಭಾಗಗಲ್ಲಿ ಪ್ರಚಾರ ಮಾಡುತ್ತಿದ್ದು, ಕನಕಪುರದಲ್ಲಿ ಡಿಕೆ ಸುರೇಶ್ ಅಣ್ಣನನ್ನು ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಡಿಕೆಶಿ ಪತ್ನಿ ಉಷಾ ಕೂಡ ಇಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಕನಕಪುರ ಬಂಡೆಗೆ ಡಿಚ್ಚಿ ಹೊಡಿತಾರ ಅಶೋಕ್
ಬಿಜೆಪಿ ಕಾಂಗ್ರೆಸ್‌ನ ಅಗ್ರನಾಯಕರನ್ನು ಅವರ ಕ್ಷೇತ್ರದಲ್ಲೇ ಕಟ್ಟಿ ಹಾಕಲು ರಣತಂತ್ರ ರೂಪಿಸಿದೆ. ಅದಕ್ಕಾಗಿಯೇ ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಅಶೋಕ್‌ರನ್ನು ಕಣಕ್ಕಿಳಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡಿರುವ ವರುಣಾದಲ್ಲಿ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ.
ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿರುವುದರಿಂದ ಡಿಕೆ ಬ್ರದರ್ಸ್ ಕೂಡ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ಮಾಡದೇ ಇದ್ದರೂ, ಸಹೋದರ ಡಿಕೆ ಸುರೇಶ್ ಕ್ಷೇತ್ರದಲ್ಲಿ ಠಿಖಾಣಿ ಹೂಡಿದ್ದು, ರಣತಂತ್ರ ರೂಪಿಸುತ್ತಿದ್ದಾರೆ.
ಕನಕಪುರದಲ್ಲಿ ಜಾತಿವಾರು ಲೆಕ್ಕಾಚಾರ
ಒಟ್ಟು 2,20,391 ಮತದಾರರನ್ನು ಹೊಂದಿರುವ ಕನಕಪುರ ಕ್ಷೇತ್ರದಲ್ಲಿ 1,09, 876 ಪುರುಷರು, 1,10,500 ಮಹಿಳಾ ಮತದಾರದ್ದರೆ,11 ಜನ ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಇಲ್ಲಿ ಒಕ್ಕಲಿಗರು 99,567 , ದಲಿತರು 44341 , ಮುಸ್ಲಿಮರು 22,500, ಲಿಂಗಾಯತರು 18,500 , ಕುರುಬರು 5,600, ತಿಗಳರು 10,500, ಕ್ರೈಸ್ತರು 2,507, ಬೆಸ್ತರು 6000 ಹಾಗೂ ಇತರೆ ಸಮುದಾಯದ 9400 ಮತದಾರರಿದ್ದಾರೆ.












Click it and Unblock the Notifications