ಸ್ವಗ್ರಾಮದಲ್ಲಿ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿದ ಡಿಕೆಶಿ
ರಾಮನಗರ, ಅಕ್ಟೋಬರ್ 28: ಇಂದು ತಮ್ಮ ಸ್ವಗ್ರಾಮ ಕನಕಪುರದ ದೊಡ್ಡ ಆಲಹಳ್ಳಿಗೆ ಭೇಟಿ ಕೊಟ್ಟಿರುವ ಡಿ.ಕೆ. ಶಿವಕುಮಾರ್ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಕನಕಪುರಕ್ಕೆ ಬಂದ ಡಿ.ಕೆ. ಶಿವಕುಮಾರ್ ಗೆ ಸಾವಿರಾರು ಬೆಂಬಲಿಗರು ಸಂಭ್ರಮದಿಂದ ಸ್ವಾಗತ ನೀಡಿದರು. ನಂತರ ಡಿಕೆ ಸಹೋದರರು ಪರಸ್ಪರ ಸಿಹಿ ತಿನಿಸಿಕೊಂಡರು. "ನಿಮ್ಮೆಲ್ಲರ ಪ್ರೀತಿಗೆ ನಾನು ಚಿರ ಋಣಿ, ಇಂದು ಇಡೀ ದಿನ ಕನಕಪುರದಲ್ಲಿ ಇರುತ್ತೇನೆ. ನನಗಾಗಿ ಸಾಕಷ್ಡು ಹೊತ್ತಿನಿಂದ ಕಾಯುತ್ತಿದ್ದೀರಿ, ನೀವು ತೋರಿಸಿದ ಪ್ರೀತಿಗೆ ನಾನು ನಮ್ಮ ಎಲ್ಲ ಮುಖಂಡರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.

ನಂತರ ಸ್ವಗ್ರಾಮಕ್ಕೆ ಭೇಟಿ ಕೊಟ್ಟು, ತಮ್ಮ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಕುಟುಂಬಸ್ಥರೊಡನೆ ತಂದೆ ಹಾಗೂ ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿದರು. ಇಡಿ ವಿಚಾರಣೆ ಇದ್ದ ಸಂದರ್ಭ ಗಣೇಶ ಹಬ್ಬದ ದಿನ ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಇದಕ್ಕಾಗಿ ಕಣ್ಣೀರನ್ನೂ ಹಾಕಿದ್ದರು ಡಿಕೆಶಿ. ಇಂದು ಡಿಕೆಶಿ ತಾಯಿ ಗೌರಮ್ಮ, ಪತ್ನಿ ಉಷಾ, ಮಗಳು ಐಶ್ವರ್ಯ ಸಹೋದರ ಡಿ.ಕೆ.ಸುರೇಶ್ ಎಲ್ಲರೂ ಸಮಾಧಿ ಬಳಿ ಸೇರಿ ಪೂಜೆ ಸಲ್ಲಿಸಿದರು.












Click it and Unblock the Notifications