ಏಸುಗೆ ಡಿಕೆಶಿ ಫೋಟೊ; ಸಾಮಾಜಿಕ ಜಾಲತಾಣದಲ್ಲಿ ಏಸುಕುಮಾರ್ ಎಂದು ಕುಚೋದ್ಯ

ರಾಮನಗರ, ಜನವರಿ 02: ಹಿಂದೂಪರ ಸಂಘಟನೆಗಳ ವಿರೋಧದ ನಡುವೆಯೂ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣವನ್ನು ಸಮರ್ಥಿಸಿಕೊಂಡ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಏಸುಕುಮಾರ್ ಎಂದು ಕರೆದು ಟ್ರೋಲ್ ಮಾಡಿದ್ದಾರೆ ನೆಟ್ಟಿಗರು.

ಏಸುಕ್ರಿಸ್ತನ ಭಾವ ಚಿತ್ರಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮುಖದ ಚಿತ್ರ ಅಳವಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕುಚೋದ್ಯ ಮಾಡಿದ್ದು, ಅಲ್ಲದೇ ಇನ್ನೊಂದು ಇಟಲಿ ನಮ್ಮ ಕನಕಪುರ ನಾಡು, ಕನಕಪುರದ ಹಿಂದೂಗಳ ಆತ್ಮಕ್ಕೆ ಶಾಂತಿ ಸಿಗಲಿ, ಡಿಕೆಶಿ ಎಲ್ಲಾ ಹಿಂದೂಗಳನ್ನು ಮತಾಂತರ ಮಾಡಿದ ಮೇಲೆ ಕ್ರೈಸ್ತ ಮಿಷಿನರಿಗಳದೇ ದರ್ಬಾರು, ಎಂಬ ಬರಹಗಳನ್ನು ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

DK Shivakumar Photo Trolled In Social Media

ಡಿ.ಕೆ ಸಹೋದರರು ತಮ್ಮ ಅಧಿಕಾರ ಬಳಸಿ 114 ಅಡಿ ಎತ್ತರದ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ 10 ಎಕರೆ ಸರ್ಕಾರಿ ಭೂಮಿಯನ್ನು ಖರೀದಿಸಿ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಕೊಡುಗೆ ನೀಡಿದ್ದರು. ನಂತರ ಈ ಒಂದು ಸಂಗತಿ ವಿವಾದದ ರೂಪ ಪಡೆದಿತ್ತು. ಇದೀಗ ಡಿಕೆ ಸಹೋದರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಹರಿಬಿಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+