ರಾಮನಗರದಲ್ಲಿ ಆಹಾರ ಪದಾರ್ಥ ವಿತರಣೆಗೆ ಎಚ್ಡಿಕೆಯಿಂದ ಚಾಲನೆ

ರಾಮನಗರ, ಏಪ್ರಿಲ್ 22: ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಬಡವರ್ಗದ ಜನರಿಗೆ ದಿನಸಿ ಆಹಾರ ಪದಾರ್ಥಗಳನ್ನು ಮನೆಮನೆಗೆ ತಲುಪಿಸುವ ಯೋಜನೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಬುಧವಾರ ಚಾಲನೆ ನೀಡಿದ್ದಾರೆ‌.

ಈಗಾಗಲೇ ಬೆಳಿಗ್ಗೆ ಮತ್ತು ಸಂಜೆ ಉಪಹಾರವನ್ನು ಎಚ್.ಡಿ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿಯವರು ಪ್ರತಿನಿತ್ಯ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಸುಮಾರು 10 ಸಾವಿರ ಬಡವರ್ಗದ ಜನರಿಗೆ ಬೆಳಿಗ್ಗೆ ಮತ್ತು ಸಂಜೆ ಉಪಹಾರವನ್ನು ಉಚಿತವಾಗಿ ನೀಡುತ್ತಿದ್ದಾರೆ.

"ಅನ್ನಂ ಪರಬ್ರಹ್ಮಂ' ಎಂಬ ಮಾತಿನಂತೆ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಯವರು ರಾಮನಗರದ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ಮತ್ತು ಚನ್ನಪಟ್ಟಣ ಕ್ಷೇತ್ರದ 30 ಸಾವಿರ ಬಡ ಕುಟುಂಬಗಳಿಗೆ ದಿನಸಿ ಆಹಾರ ಪದಾರ್ಥಗಳನ್ನು ನೀಡುವ ಕಾರ್ಯಕ್ರಮವನ್ನು ಆರಂಭಿಸಿದರು.

Distribution Of Food Items From HD Kumaraswamy In Ramanagara

ಈಗಾಗಲೇ ಜೆಡಿಎಸ್ ಪಕ್ಷದ ಸ್ವಯಂಸೇವಕರು ದಿನಸಿ ಆಹಾರ ಪದಾರ್ಥಗಳನ್ನು ಪ್ಯಾಕಿಂಗ್ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಆಹಾರ ದಿನಸಿ ಪ್ಯಾಕಿಂಗ್ ಮಾಡುತ್ತಿರುವ ರಾಮನಗರದ ಮಂಜುನಾಥ ಕನ್ವೆನ್ಶನ್ ಹಾಲ್ ಗೆ ಇಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Distribution Of Food Items From HD Kumaraswamy In Ramanagara

ದಿನಸಿ ಆಹಾರ ಪದಾರ್ಥಗಳ‌ ಕಿಟ್ ಗಳನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಜನರಿಗೆ ಮತ್ತು ನಗರ ವ್ಯಾಪ್ತಿಯ ಬಡವರ್ಗದ ಜನರಿಗೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+