ಚನ್ನಪಟ್ಟಣ ರಾಜಕೀಯ : ಕಾಮಗಾರಿ ನಾಮಫಲಕ್ಕೆ ಹಾನಿ
ಚನ್ನಪಟ್ಟಣ, ಜನವರಿ 09 : ಚನ್ನಪಟ್ಟಣದಲ್ಲಿನ ರಾಜಕೀಯ ಜಟಾಪಟಿ ಗುಟ್ಟಾಗಿ ಉಳಿದಿಲ್ಲ. ಈ ಹಗ್ಗ-ಜಗ್ಗಾಟ ಈಗ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳಿಗೂ ತಟ್ಟಿದೆ. ಕಾಮಗಾರಿಗಳ ನಾಮಫಲಕಗಳು ರಾಜಕೀಯ ದ್ವೇಷದಿಂದ ಭಗ್ನವಾಗಿವೆ.
ಸಿದ್ದರಾಮಯ್ಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದ ನಾಮಫಲಕದ ಕಲ್ಲುಗಳು ಚನ್ನಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಅನಾಥವಾಗಿ ಬಿದ್ದಿವೆ. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇದರಿಂದ ರಾಜಕೀಯ ಹಗ್ಗ-ಜಗ್ಗಾಟ ನಡೆಯುತ್ತಿದೆ.
ಜನವರಿ 3ರಂದು ಸಿದ್ದರಾಮಯ್ಯ ಸಾಧನ ಸಮಾವೇಶದಲ್ಲಿ ಸುಮಾರು 542 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದರು. ಆದರೆ, ಕಾರ್ಯಕ್ರಮ ಮುಗಿದು 6 ದಿನಗಳು ಕಳೆದರೂ ಶಂಕುಸ್ಥಾಪನೆಯ ಫಲಕಗಳನ್ನು ತೆಗೆದುಕೊಂಡು ಹೋಗಿಲ್ಲ.

ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ್ದ ಫಲಕಗಳನ್ನು ಬಿಟ್ಟು ಬೇರೆ ಇಲಾಖೆಯವರು ಫಲಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಕ್ರೀಡಾಂಗಣದಲ್ಲಿ ಉಳಿದಿದ್ದ ಎರಡು ಕಲ್ಲು ಗಳಲ್ಲಿ ಒಂದು ಒಡೆದು ಹೋಗಿದ್ದು ಮತ್ತೊಂದು ಅನಾಥವಾಗಿ ಬಿದ್ದಿತ್ತು.

ರಾಜಕೀಯ ಕೆಸರೆರಚಾಟದಲ್ಲಿ ಅನಾಥವಾಗಿ ಹೋಗಿದ್ದ ನಾಮಫಲಕಗಳನ್ನು ತೆಗೆದುಕೊಂಡು ಹೋಗುವಂತೆ ಕಾಲೇಜು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇನ್ನೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications