• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚನ್ನಪಟ್ಟಣದಲ್ಲಿ ಯೋಗೇಶ್ವರ್ ಹುಟ್ಟುಹಬ್ಬ ಆಚರಣೆ; ಡಿಕೆಶಿ, ಸಿದ್ದುಗೆ ಟಾಂಗ್

By ರಾಮನಗರ ಪ್ರತಿನಿಧಿ
|
   ಹುಟ್ಟುಹಬ್ಬದ ದಿನ ಸಿದ್ದರಾಮಯ್ಯ ಹಾಗು ಡಿ ಕೆ ಶಿ ಗೆ ಟಾಂಗ್ ಕೊಟ್ಟ ಸಿ ಪಿ ಯೋಗೇಶ್ವರ್ | O

   ಚನ್ನಪಟ್ಟಣ, ಆಗಸ್ಟ್ 29: "ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂದಿದ್ದರು ಸಿದ್ದರಾಮಯ್ಯ. ಸಿದ್ದರಾಮಯ್ಯನವರು ಯಾವಾಗ ಜೋತಿಷಿಯಾದರೋ ಗೊತ್ತಿಲ್ಲ. ಈ ಸರ್ಕಾರ ರಾಜ್ಯದಲ್ಲಿ ಸಂಪೂರ್ಣ 5 ವರ್ಷ ಪೂರೈಸಲಿದೆ" ಎಂದು ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಟಾಂಗ್ ನೀಡಿದರು.

   ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿ ತಮ್ಮ 57ನೇ ಹುಟ್ಟಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡ ಯೋಗೇಶ್ವರ್, ಇದೇ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರು.

   ಬೆಂಗಳೂರು ಗ್ರಾಮಾಂತರ ಟಿಕೆಟ್ ಗೆ ಲಾಬಿ ಮಾಡಿಲ್ಲ: ಯೋಗೇಶ್ವರ್

   ಫೋನ್ ಟ್ಯಾಪಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು "ಡಿಕೆಶಿ ನಮ್ದು, ಅವರದ್ದು ಎಲ್ಲರ ಫೋನ್ ಟ್ಯಾಪ್ ಅನ್ನು ಸಿಬಿಐಗೆ ವಹಿಸಲಿ ಎಂದಿದ್ದರು. ಪಾಪ ಅವರು ಬಹಳ ಕನವರಿಸುತ್ತಿದ್ದಾರೆ, ಸಿಬಿಐಗೆ ವಹಿಸಲಿ, ನಾನು ಜೈಲಿಗೆ ಹೋಗ್ತೀನಿ ಅಂತ. ನೋಡೋಣ ಮುಂದಿನ ದಿನಗಳಲ್ಲಿ ಏನಾಗುತ್ತೆ" ಎಂದರು.

   "ಅನರ್ಹ ಶಾಸಕರಿಗೆ ನಾನು ನಾಯಕನಲ್ಲ. ಅನರ್ಹರಲ್ಲಿ ಕೆಲವರು ನನ್ನ ಸ್ನೇಹಿತರಿದ್ದಾರೆ, ಹಾಗಾಗಿ ಜೊತೆಯಲ್ಲಿದ್ದೇನೆ ಅಷ್ಟೆ. ಜೊತೆಗೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನಗೆ ಸಚಿವ ಸ್ಥಾನ ಕೋಡ್ತೀನೆಂದು ಯಾರೂ ಹೇಳಿರಲಿಲ್ಲ. ಈಗ ನಾನು ಶಾಸಕನೂ ಅಲ್ಲ, ನನಗೆ ಯಾವ ಬೇಸರವೂ ಇಲ್ಲ" ಎಂದು ಹೇಳಿದರು.

   ಡಿಕೆಶಿ ಬ್ರದರ್ಸ್ ಕೋಟೆಯೊಳಗೆ ಸೈನಿಕ ಯೋಗೇಶ್ವರ್ 'ಸರ್ಜಿಕಲ್ ಸ್ಟ್ರೈಕ್'?

   "ರಾಮನಗರ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಜಿಲ್ಲೆಯ ಶಾಸಕರಾದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಮಾತನಾಡಲಿ. ಅವರು ಬಹಳ ಪ್ರಬಲರು, ಹಾಗಾಗಿ ಅವರೇನು ಜವಾಬ್ದಾರಿ ಮೆರೆಯುತ್ತಾರೆ ನೋಡೋಣ" ಎಂದು ವ್ಯಂಗ್ಯ ಮಾಡಿದರು.

   English summary
   CP Yogeshwar, who was celebrating his 57th birthday by cutting the cake with activists at the Kollapuramma temple in Channapatna, spoke against DK Shivakumar and Siddaramaiah.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X