ಲಾಕ್ ಡೌನ್ ನಡುವೆಯೂ ವ್ಯಾಪಾರಕ್ಕೆ ತೆರೆದ ರೇಷ್ಮೆ ಮಾರುಕಟ್ಟೆ!
ರಾಮನಗರ, ಏಪ್ರಿಲ್ 2: ಮಾರಣಾಂತಿಕ ಕೊರೊನಾ ವೈರಸ್ ಭೀತಿಯಿಂದ ಕರ್ನಾಟಕದಲ್ಲಿರುವ ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಬಂದ್ ಆಗಿತ್ತು. ಆದ್ರೀಗ, ಲಾಕ್ ಡೌನ್ ನಡುವೆಯೂ ರೇಷ್ಮೆ ಮಾರುಕಟ್ಟೆಯನ್ನು ತೆರೆಯಲಾಗಿದೆ.
ಪ್ರಮುಖ ನಾಲ್ಕು ರೇಷ್ಮೆ ಮಾರುಕಟ್ಟೆಗಳಾದ ಶಿಡ್ಲಘಟ್ಟ, ರಾಮನಗರ, ಕೊಳ್ಳೇಗಾಲ ಮತ್ತು ಕನಕಪುರ ಮಾರುಕಟ್ಟೆ ಓಪನ್ ಆಗಿವೆ. ವಹಿವಾಟು ಆರಂಭದಲ್ಲೇ ರೇಷ್ಮೆ ಬೆಲೆ ಏರಿಕೆ ಆಗಿದ್ದು, ಸಿಬಿ ರೇಷ್ಮೆ ಬೆಲೆ ಪ್ರತಿ ಕೆಜಿಗೆ 300 ರೂಪಾಯಿಯಾಗಿದೆ. ಇನ್ನೂ ಬಿವಿ ರೇಷ್ಮೆ ಬೆಲೆ 300 ರೂಪಾಯಿ ಗಡಿ ದಾಟಿದೆ.
ಕೊರೊನಾ ಸಂಕಷ್ಟ: ಬಡವರ ಹೊಟ್ಟೆ ತುಂಬಿಸಲಿದೆ HDK ಜನತಾ ದಾಸೋಹ
ರೇಷ್ಮೆ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಮಾರುಕಟ್ಟೆಯ ಪ್ರವೇಶ ದ್ವಾರದಲ್ಲೇ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಇಡಲಾಗಿದೆ. ವ್ಯಾಪಾರ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.
ರೇಷ್ಮೆ ಬೆಳೆಗಾರರಿಗೆ ನಷ್ಟವಾಗಬಾರದು ಎಂಬ ಕಾರಣಕ್ಕೆ ಮಾರುಕಟ್ಟೆಯನ್ನ ತೆರೆಯಲಾಗಿದೆ. ಮಾರುಕಟ್ಟೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ, ಅಲ್ಲಿರುವ ಎಲ್ಲರಿಗೂ ಒಳಿತು.