ರಾಮನಗರ, ಚಿತ್ರದುರ್ಗದಲ್ಲಿ ಇಂದು ದಾಖಲಾದ ಕೊರೊನಾ ಪ್ರಕರಣಗಳೆಷ್ಟು?

ರಾಮನಗರ, ಜುಲೈ 10: ರಾಮನಗರ ಜಿಲ್ಲೆಯಲ್ಲಿ ಇಂದು 23 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 355ಕ್ಕೆ ಏರಿಕೆಯಾಗಿದೆ.

Recommended Video

      Nepals bans Indian TV channels,ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರ ಬಂದ್ | Oneindia Kannada

      ಚನ್ನಪಟ್ಟಣದಲ್ಲಿ 2, ಕನಕಪುರದಲ್ಲಿ 10, ಮಾಗಡಿಯಲ್ಲಿ 5 ಹಾಗೂ ರಾಮನಗರದಲ್ಲಿ 6 ಪ್ರಕರಣಗಳು ಇಂದು ಪತ್ತೆಯಾಗಿವೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು 29 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

      ಕೊರೊನಾ ಸೋಂಕು; ಶತಕದ ಅಂಚಿನಲ್ಲಿ ಕೋಟೆನಾಡು ಚಿತ್ರದುರ್ಗ
      ಚಿತ್ರದುರ್ಗದಲ್ಲಿ ಇಂದು 4 ಪ್ರಕರಣ: ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು 4 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ.

      Coronavirus Cases On July 10 In Chitradurga And Ramanagar

      ಚಳ್ಳಕೆರೆ ನಿವಾಸಿ, ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೆಬಲ್, ಚಿತ್ರದುರ್ಗ ನಗರದ ಧರ್ಮಶಾಲೆ ರಸ್ತೆಯ 60 ವರ್ಷದ ಮಹಿಳೆ, ಮೊಳಕಾಲ್ಮೂರಿನ 67 ವರ್ಷದ ಮಹಿಳೆ ಹಾಗು 22 ವರ್ಷದ ಯುವತಿಗೆ ಕೊರೊನಾ ಸೋಂಕು ತಗುಲಿದೆ. ಶ್ರೀರಾಂಪುರ ಠಾಣೆ ಪೊಲೀಸ್ ಪೇದೆ ಹೊರತುಪಡಿಸಿ ಜಿಲ್ಲೆಯ ಮೂವರು ಸೋಂಕಿತ ಮಹಿಳೆಯರು ಬೆಂಗಳೂರು ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ.

      ಜಿಲ್ಲೆಯ ಒಟ್ಟು 98 ದೃಢಪಟ್ಟ ಪ್ರಕರಣಗಳಲ್ಲಿ ಈಗಾಗಲೇ 72 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಸದ್ಯ 26 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಮಾಹಿತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+