ದೊಡ್ಡ ಆಲಹಳ್ಳಿಯಲ್ಲಿ ಮತ ಚಲಾಯಿಸಿದ ಡಿ.ಕೆ.ಶಿವಕುಮಾರ್
ರಾಮನಗರ, ಮೇ 12 : ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಬರುವ ಆತ್ಮವಿಶ್ವಾಸ ಇದೆ. ಮತದಾನ ಎಲ್ಲೆಡೆ ಚೆನ್ನಾಗಿ ನಡೆಯುತ್ತಿದೆ. ಅಂಥಹ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಹೇಳಿದರು.
ತಮ್ಮ ಸ್ವಗ್ರಾಮ ದೊಡ್ಡ ಆಲಹಳ್ಳಿ ಮತಕಟ್ಟೆಯಲ್ಲಿ ಪತ್ನಿ ಉಷಾ ಮತ್ತು ಮಗಳು ಐಶ್ವರ್ಯ ಅವರೊಂದಿಗೆ ಮತ ಚಲಾಯಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೂರದ ಊರಿನಿಂದ ಬಂದು ಜನತೆ ಮತ ಚಲಾಯಿಸುತ್ತಿರುವುದು ನೋಡಿದರೆ ಖುಷಿಯಾಗುತ್ತಿದೆ ಎಂದರು.

ಬೆಂಗಳೂರಿನ ರಾಜಾರಾಜೇಶ್ವರಿ ನಗರ ಕ್ಷೇತ್ರದಲ್ಲಿ ನಡೆಯಬೇಕಿದ್ದ ಚುನಾವಣೆ ಮುಂದೂಡಿರುವುದಕ್ಕೆ ಪ್ರತಿಕ್ರಯಿಸಿ ಬೇರೆಯವರು ಮಾಡಿರುವ ಆರೋಪ ನಮ್ಮ ಮೇಲೆ ಹೊರಿಸಲಾಗುತ್ತಿದೆ. ಕೇಂದ್ರ ಸರ್ಕಾರ ತನ್ನ ಆಡಳಿತವನ್ನು ದುರುಪಯೋಗ ಮಾಡಿಕೊಂಡು ಇಷ್ಟೆಲ್ಲಾ ಮಾಡುತ್ತಿದೆ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ಸಮೀಕ್ಷೆ ಮಾಡುವವರು ತಮ್ಮ ಕೆಲಸ ಮಾಡಿದ್ದಾರೆ. ಅವರು ಹೇಳುವುದೇ ಸರಿ ಎಂದೂ ಹೇಳಲಾಗುವುದಿಲ್ಲ. ಹೆಚ್ಚು ಮತ ತೆಗೆದುಕೊಂಡು ಸರ್ಕಾರ ರಚಿಸುವವರು ಯಾರು ಎಂಬುದನ್ನು ನೋಡಲು ಬಹಳ ಸಮಯವಕಾಶ ಬೇಕಾಗಿಲ್ಲ ಎಂದು ಉತ್ತರಿಸಿದರು.












Click it and Unblock the Notifications