ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದ ಸೋಲು ಅಂಬಿಗೆ ಗೆಲುವಿನ ಮೆಟ್ಟಿಲಾಯಿತು!

|
Google Oneindia Kannada News

ರಾಮನಗರ, ನವೆಂಬರ್.26: ರಾಮನಗರಕ್ಕೂ ಅಂಬರೀಶ್ ಅವರಿಗೂ ಅವಿನಾಭಾವ ಸಂಬಂಧವಿದೆ. ಅದೊಂದು ರೀತಿಯಲ್ಲಿ ರಾಜಕೀಯವಾಗಿ ಆದ ನಂಟು ಎಂದರೂ ತಪ್ಪಾಗಲಾರದು. ಒಂದು ಸೋಲು ಮುಂದೆ ಗೆಲುವಿನ ಮೆಟ್ಟಲಾಗಬಹುದು ಎಂಬುದಕ್ಕೆ ಅಂಬರೀಶ್ ಅವರಿಗೆ ರಾಮನಗರದಲ್ಲಿ ಆದ ಸೋಲೇ ನಿದರ್ಶನ ಎಂದರೆ ತಪ್ಪಾಗಲಾರದು.

ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ 1997ರಲ್ಲಿ ನಡೆದ ಉಪಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಅಂಬರೀಷ್ ಸ್ಪರ್ಧಿಸಿದ್ದು ಒಂದು ಆಕಸ್ಮಿಕ ಸಂದರ್ಭ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣವೂ ಇತ್ತು. 1994ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಎಚ್.ಡಿ.ದೇವೇಗೌಡರು ರಾಮನಗರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾದರು.

ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ

ನಂತರ ದೇಶದ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆದು 1997 ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರು ಪ್ರಧಾನಿಯಾದರು. ಈ ವೇಳೆ ಅವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆಗ ಅವರ ಕ್ಷೇತ್ರದಿಂದ ಜನತಾದಳದಿಂದ ಉಪಚುನಾವಣೆಗೆ ಸ್ಪರ್ಧಿಸಿದವರು ಅಂಬರೀಶ್.

ಅವತ್ತು ಅಂಬರೀಶ್ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಿ.ಎಂ.ಲಿಂಗಪ್ಪ. ಇವರಿಬ್ಬರಿಗೂ ರಾಜಕೀಯವಾಗಿ ಭಾರೀ ಸ್ಪರ್ಧೆ ಏರ್ಪಟ್ಟಿತ್ತು.
ಚುನಾವಣೆಯನ್ನು ಎದುರಿಸಿ ಗೆಲ್ಲಲೇ ಬೇಕೆಂದು ಪಣತೊಟ್ಟ ಅವರು ಅವತ್ತು ಕ್ಷೇತ್ರದಲ್ಲಿ ಹುರುಪಿನಿಂದಲೇ ಓಡಾಡಿ ಮತ ಯಾಚಿಸಿದ್ದರು.

 ಎಲ್ಲೆಡೆ ಉತ್ತಮ ಸ್ಪಂದನೆ

ಎಲ್ಲೆಡೆ ಉತ್ತಮ ಸ್ಪಂದನೆ

ಅಂದು ಅಂಬರೀಷ್ ಗೆ ಎಲ್ಲೆಡೆ ಉತ್ತಮ ಸ್ಪಂದನೆ ದೊರೆತಿತ್ತು. ಆದರೆ ಮತದಾನ ನಡೆದು ಚುನಾವಣಾ ಫಲಿತಾಂಶ ಬಂದಾಗ ಮಾತ್ರ ಎದುರಾಳಿ ಸಿ.ಎಂ. ಲಿಂಗಪ್ಪ ಅವರಿಗೆ 59,924 ಮತಗಳು ಹಾಗೂ ಅಂಬರೀಷ್ ಅವರಿಗೆ 50,314 ಮತಗಳು ದೊರೆತವು.

 ಕ್ಷೇತ್ರದ ಒಡನಾಟ ಮರೆಯಲಿಲ್ಲ

ಕ್ಷೇತ್ರದ ಒಡನಾಟ ಮರೆಯಲಿಲ್ಲ

ಸುಮಾರು 9610 ಮತಗಳ ಅಂತರದಿಂದ ಅಂಬರೀಶ್ ಅವರು ಸೋಲು ಕಾಣಬೇಕಾಯಿತು. ಆದರೆ ಆ ಸೋಲಿನ ಬಗ್ಗೆ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಜತೆಗೆ ಕ್ಷೇತ್ರದ ಒಡನಾಟವನ್ನು ಮರೆಯಲಿಲ್ಲ.

ಮೃತ್ಯುಂಜಯ ಹೋಮ ಮಾಡಲು ಮುಂದಾಗಿದ್ದ ಅಂಬರೀಷ್ ಗೆ ಮೃತ್ಯು ಕಾಡಿತುಮೃತ್ಯುಂಜಯ ಹೋಮ ಮಾಡಲು ಮುಂದಾಗಿದ್ದ ಅಂಬರೀಷ್ ಗೆ ಮೃತ್ಯು ಕಾಡಿತು

 ಗೆಲುವಿನ ಸೋಪಾನವಾಯಿತು

ಗೆಲುವಿನ ಸೋಪಾನವಾಯಿತು

ಮುಂದೆ ಅಂಬಿ ಮಂಡ್ಯದಿಂದ ಸ್ಪರ್ಧಿಸಿ ಕೇಂದ್ರದ ಸಚಿವರಾದರು. ರಾಜ್ಯದ ಸಚಿವರು ಆದರೂ ಎಂಬುದು ಗೊತ್ತೇ ಇದೆ. ಆದರೆ ರಾಮನಗರದಲ್ಲಾದ ಸೋಲು ಅವರಿಗೆ ಗೆಲುವಿನ ಸೋಪಾನವಾಯಿತು ಎಂಬುದಂತು ನಿಜ.

ಹೈಕಮಾಂಡ್ ನಾಯಕರು ಕಾದು ನೋಡುವಂತೆ ಮಾಡಿದ್ದರು ಅಂಬರೀಶ್!ಹೈಕಮಾಂಡ್ ನಾಯಕರು ಕಾದು ನೋಡುವಂತೆ ಮಾಡಿದ್ದರು ಅಂಬರೀಶ್!

 ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದ್ದರು

ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದ್ದರು

ಅವತ್ತಿನ ಅಂದರೆ 1997ರ ಉಪಚುನಾವಣೆಯ ದಿನಗಳನ್ನು ನೆನಪಿಸಿಕೊಂಡ ಕಾಂಗ್ರೆಸ್ ಮುಖಂಡ, ಸಿ.ಎಂ. ಲಿಂಗಪ್ಪ ಅವರ ಮುಂದೆ ಅಂಬರೀಶ್ ಸೋಲು ಕಂಡರೂ ಚುನಾವಣೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದ್ದರು. ಎಂದೂ ನನ್ನ ಬಗ್ಗೆ ಕೋಪ ತೋರಿಸಿದವರಲ್ಲ, ನಾವಿಬ್ಬರೂ ಭೇಟಿಯಾದಾಗ ತಮಾಷೆಯಾಗಿ ಮಾತನಾಡಿಸಿ ಕೀಟಲೆ ಮಾಡುತ್ತಿದ್ದ ಅಪರೂಪದ ವ್ಯಕ್ತಿ ಎಂಬುದಾಗಿ ಹೇಳಿದ್ದಾರೆ.

ಅಂಬಿಗೂ ಮಂಡ್ಯದ ಸರ್ ಎಂವಿ ಕ್ರೀಡಾಂಗಣಕ್ಕೂ ಎಂಥ ನಂಟು ಗೊತ್ತಾ?ಅಂಬಿಗೂ ಮಂಡ್ಯದ ಸರ್ ಎಂವಿ ಕ್ರೀಡಾಂಗಣಕ್ಕೂ ಎಂಥ ನಂಟು ಗೊತ್ತಾ?

English summary
Ambareesh was a JDS candidate in the by-election for the Ramanagara Assembly constituency in 1997. In that election CM Lingappa defeated Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X