ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾದ ಚಿಲುಮೆ ಮಠದ ಸ್ವಾಮೀಜಿ

ರಾಮನಗರ, ಡಿಸೆಂಬರ್ 20: ಸರ್ವಸಂಗ ಪರಿತ್ಯಾಗಿಯಾದ ಚಿಲುಮೆ ಮಠದ ಪೀಠಾಧಿಪತಿ ಬಸವಲಿಂಗ ಶ್ರೀಗಳ ಶ್ರಮದಿಂದ ಅಭಿವೃದ್ಧಿ ಮಠ ಹೊಂದಿತ್ತು. ಆದರೆ ಮಠದ ಅಭಿವೃದ್ಧಿ ಕ್ರಮೇಣ ಕುಂಠಿತ ಕಂಡಿದ್ದರಿಂದ ಚಿಲುಮೆ ಮಠದ ಸ್ವಾಮೀಜಿ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಚಿಲುಮೆ ಮಠದ ಬಸವಲಿಂಗ ಶ್ರೀಗಳು ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಠದ ಗೋಡೆಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ಗೆ ನೇಣು ಬಿಗಿದುಕೊಂಡು ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದಿನಂತೆ ಮಠದಲ್ಲಿ ಇದ್ದ ಧನ ಕರುಗಳನ್ನು ಕಟ್ಟಿ ಹಾಕಲು ರಾಮಣ್ಣ ಬಂದಿದ್ದರು. ಈ ವೇಳೆ ಸ್ವಾಮಿ ಅಂತಾ ಕರೆದಿದ್ದರೂ ಮಾತನಾಡಲಿಲ್ಲ, ಹೊರ ಬರಲಿಲ್ಲ. ಹಾಗಾಗಿ ರಾಮಣ್ಣನವರೇ ಮಠದ ಒಳಗೆ ಹೋಗಿ ನೋಡಿದಾಗ ಬಸವಲಿಂಗ ಸ್ವಾಮೀಜಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ.

Ramanagara: Chilume Math Basavalinga Swamiji committed suicide under mental depression

ತಕ್ಷಣ ಪಕ್ಕದ ಬಂಡೆ ಮಠದ ಸ್ವಾಮೀಜಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಬಂಡೆ ಮಠದ ಸ್ವಾಮೀಜಿಗಳು ಶ್ರೀಗಳ ಶವವನ್ನು ನೇಣು ಹಗ್ಗದಿಂದ ಕೆಳಗಿಳಿಸಿದ್ದಾರೆ. ಘಟನೆಯ ವಿಷಯ ತಿಳಿದ ಕುದೂರು ಪೊಲೀಸರು ಸ್ಥಳಕ್ಕೆ ಬಂದಿದ್ದು, ಅಲ್ಲದೇ ಜಿಲ್ಲಾ ಎಸ್ಪಿ ಎಸ್. ಗಿರೀಶ್ ಕೂಡ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಚಿಲುಮೆ ಮಠ ಈ ಹಿಂದೆ ಚೆನ್ನಾಗಿ ಅಭಿವೃದ್ಧಿ ಕಂಡಿತ್ತು. ತದನಂತರದ ದಿನಗಳಲ್ಲಿ ಮಠಕ್ಕೆ ಭಕ್ತರ ಸಂಖ್ಯೆ ಕಡಿಮೆ ಕೂಡ ಆಗಿತ್ತು. ಅಲ್ಲದೇ ಸ್ವಾಮಿಗಳ ಆರೋಗ್ಯ ಬೇರೆ ಸರಿ ಇರಲಿಲ್ಲ. ಇದರಿಂದಾಗಿ ಸ್ವಾಮೀಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

Ramanagara: Chilume Math Basavalinga Swamiji committed suicide under mental depression

ಮಠದಲ್ಲಿ ಹೇಳಿಕೊಳ್ಳುವಷ್ಟು ಕೆಲಸಗಾರರು ಕೂಡ ಇರಲಿಲ್ಲ ಹಾಗಾಗಿ ಮಠದಲ್ಲಿನ ಕೆಲಸಗಳನ್ನು ಬಸವಲಿಂಗ ಸ್ವಾಮಿಗಳೇ ಮಾಡುತ್ತಿದ್ದರು. ದನ ಮೇಯಿಸುವುದು, ಭೂಮಿ ಉಳಮೆಯನ್ನು ಸ್ವತಃ ಸ್ವಾಮೀಜಿ ಮಾಡುತ್ತಿದ್ದುದು ಅವರ ಶ್ರಮ ಜೀವನಕ್ಕೆ ಸಾಕ್ಷಿಯಾಗಿದೆ.

Ramanagara: Chilume Math Basavalinga Swamiji committed suicide under mental depression

ಎಸ್ಪಿ ಎಸ್. ಗಿರೀಶ್ ಪ್ರತಿಕ್ರಿಯೆ
ಚಿಲುಮೆ ಮಠಕ್ಕೆ ಭೇಟಿ ನೀಡಿ ಮಾತನಾಡಿದ ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಚಿಲುಮೆ ಮಠ ಲಿಂಗಾಯತ ಸಮಾಜಕ್ಕೆ ಸೇರಿದ್ದು, ಬಸವಲಿಂಗ ಸ್ವಾಮಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಪ್ರಕರಣ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಿಕೊಂಡು ಎಲ್ಲಾ ಆಯಾಮಗಳಿಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+