ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಸೋತವನನ್ನು ಗೆಲ್ಲಿಸಿದ್ದು ರಾಮನಗರ ಜಿಲ್ಲೆಯ ಜನತೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 11: ಚನ್ನಪಟ್ಟಣ ನನಗೆ ಎರಡನೇ ಮನೆ, ಹಾಸನದಲ್ಲಿ ಸೋತವನ್ನು ಗೆಲ್ಲಿಸಿದ್ದು ರಾಮನಗರ ಜಿಲ್ಲೆ ಜನತೆ ಎಂದು ಚನ್ನಪಟ್ಟಣದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.

ಹೆಚ್ಡಿಡಿಯವರು ಇಂದು ಚನ್ನಪಟ್ಟಣದ ನೀಲಸಂದ್ರ ಗ್ರಾಮದಲ್ಲಿರುವ ಬೋರೆದೇವರ( ಭೈರವೇಶ್ವರ) ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾದ್ಯಮಗಳೂಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆಯಿದೆ : ಅನಿತಾಕುಮಾರಸ್ವಾಮಿರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆಯಿದೆ : ಅನಿತಾಕುಮಾರಸ್ವಾಮಿ

ರಾಮನಗರ ಜಿಲ್ಲೆಗು ನನಗೂ ಅವಿನಾಭಾವ ಸಂಬಂಧ ಇದೆ‌. ಹಾಸನದಲ್ಲಿ ಸೋತಿದ್ದ ನನ್ನನ್ನ ರಾಮನಗರದ ಜಿಲ್ಲೆಯ ಜನ ಗೆಲ್ಲಿಸಿದರು. ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿ ಮಾಡಿದ್ದು ಕೂಡ ಇದೇ ರಾಮನಗರ ಜಿಲ್ಲೆಯಿಂದ ಎಂದು ಹೇಳಿದರು.

Channapatna is like my home town: HDD describes

ಅಂದು ಚನ್ನಪಟ್ಟಣದ ವಿರುಪಾಕ್ಷಿಪುರ ಹೋಬಳಿ ಒಂದರಲ್ಲೇ 8 ಸಾವಿರ ಮತಗಳ ಮುನ್ನಡೆ ಕೊಟ್ಟಿದ್ದರು. ಇಲ್ಲಿ ಜೆಡಿಎಸ್ ಸದೃಢವಾಗಿದೆ ತಾಲ್ಲೂಕಿನ ಮುಖಂಡರು ಒಟ್ಟಾಗಿ ಹಳ್ಳಿಗಳತ್ತ ಹೋಗಲಿ, ಅನ್ಯ ಪಕ್ಷಗಳು ಎಷ್ಟೇ ಕೋಟಿ ಹಣ ಖರ್ಚು ಮಾಡಿಕೊಳ್ಳಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿಯವರನ್ನು ಅಭ್ಯರ್ಥಿ ಎಂದು ಘೋಷಿಸುವಂತೆ ಕಾರ್ಯಕರ್ತರ ಒತ್ತಾಯದ ಬಗ್ಗೆ ಮಾತನಾಡಿದ ಹೆಚ್ಡಿಡಿಯವರು ಅನಿತಾ ಕುಮಾರಸ್ವಾಮಿ ಅವರು ಎರಡು ಬಾರಿ ಸೋತಿದ್ದಾರೆ. ಅವರ ಮನಸ್ಸಿನಲ್ಲಿ ಆಸೆ ಇರುವುದು ನಿಜ ಅದರೆ ಈ ಒಂದು ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದರೆ ರಾಜ್ಯದಲ್ಲಿ ತಪ್ಪು ಸಂದೇಶ ಹೋಗುತ್ತದೆ ಇತರೆ ಯಾವುದೇ ಪಕ್ಷಗಳು ಇನ್ನು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ

ನಮ್ಮ ಮೇಲೆ ಕುಟುಂಬ ರಾಜಕಾರಣ ಅಪವಾದ ಸುತ್ತಿಕೊಂಡಿದೆ:ಎಚ್ ಡಿಡಿನಮ್ಮ ಮೇಲೆ ಕುಟುಂಬ ರಾಜಕಾರಣ ಅಪವಾದ ಸುತ್ತಿಕೊಂಡಿದೆ:ಎಚ್ ಡಿಡಿ

ಇನ್ನು ಸಂಭಾವ್ಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಹೆಚ್.ಡಿ.ಕೆ ಅವರು ಪಟ್ಟಿ ಸಿದ್ದ ಇಟ್ಟುಕೊಂಡಿದ್ದೇನೆ ಅಂತಾ ಹೇಳುತ್ತಿದ್ದಾರೆ. ಅದರೆ ಪಟ್ಟಿಯಲ್ಲಿ ಯಾರು ಅಭ್ಯರ್ಥಿಗಳು ಇದ್ದಾರೆ ಅಂತ ನನಗೆ ಗೊತ್ತಿಲ್ಲ.
ಅನಿತಾ ಕುಮಾರಸ್ವಾಮಿ, ನಿಖಿಲ್, ಪ್ರಜ್ವಲ್ ಸ್ಪರ್ಧೆ ಮಾಡುತ್ತಾರೆ ಎಂದು ಮಾಧ್ಯಮದವರು ದಿನವಿಡೀ ಸುದ್ದಿ ಮಾಡುತ್ತಿದ್ದಾರೆ ನಮ್ಮ ಕುಟುಂಬದ ಯಾವುದೇ ದೋಷ ಕಂಡುಹಿಡಿಯಲು ಮಾಧ್ಯಮದವರಿಂದ ಸಾಧ್ಯವಾಗಲಿಲ್ಲ

English summary
Former prime minister HD Devegowda described channapatna as well as Ramanagar district is like his home town since he had political rebirth while lost in Hassan District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X