ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ದ ಭೋವಿ ಜನಾಂಗದ ಪ್ರತಿಭಟನೆ

Posted By: ನಮ್ಮ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್ 1: ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ - 5ರ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ಧ ಭೋವಿ ಜನಾಂಗದವರು ಪ್ರತಿಭಟನೆಗೆ ಇಳಿದಿದ್ದಾರೆ.

ಬಿಗ್ ಬಾಸ್ ಗೆ ಹೊರಟಿದ್ದ ನಕಲಿ ಪೊಲೀಸನ ಅಸಲಿ ಮುಖ ಇದು!

ಭೋವಿ ಜನಾಂಗದವರ ವಿರುದ್ಧ ಸಿಹಿಕಹಿ ಚಂದ್ರು ಅವಹೇಳನಕಾರಿಯಾಗಿ ಮಾತನಾಡಿದರು ಎಂದು ರೊಚ್ಚಿಗೆದ್ದ ಅಖಿಲ ಕರ್ನಾಟಕ (ಭೋವಿ) ವಡ್ಡರ ಯುವ ವೇದಿಕೆ ಕಾರ್ಯಕರ್ತರು ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Bhowi community people protests against Big Boss contestant Sihikahi Chandru

ಬಿಗ್ ಬಾಸ್ ಮನೆಯಲ್ಲಿ ಸಿಹಿಕಹಿ ಚಂದ್ರು ತನ್ನ ಸಹ ಸ್ಪರ್ಧಿ ದಿವಾಕರ್ ರವರಿಗೆ 'ವಡ್ಡ' ಎಂಬ ಪದ ಬಳಸಿದ್ದಾರೆ. ಈ ಸಂಬಂಧ ಕೂಡಲೇ ಸಿಹಿಕಹಿ ಚಂದ್ರು ಭೋವಿ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲವಾದರೆ ಸಿಹಿಕಹಿ ಚಂದ್ರು ವಿರುದ್ದ ಜಾತಿ ನಿಂದನೆ ದೂರು ದಾಖಲಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನಾಕಾರರು ಕಲರ್ಸ್ ಕನ್ನಡ ಚಾನಲ್ ನ ಬಿಗ್ ಬಾಸ್ ಷೋ ಮತ್ತು ಸಿಹಿಕಹಿ ಚಂದ್ರು ವಿರುದ್ದ ಘೋಷಣೆ ಕೂಗಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ramanagara: Bhowi community people protested against Big Boss - 5 contestant Sihikahi Chandru at Innovative Film City.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ