ಬಿಡುವು ಕೊಟ್ಟ ಮಳೆ: ಸಹಜ ಸ್ಥಿತಿಯತ್ತ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ
ರಾಮನಗರ, ಆ.31: ಬಾರಿ ಮಳೆಗೆ ಕೆರೆಗಳಾಗಿ ಮಾರ್ಪಟ್ಟಿದ ದಶಪಥ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಇಂದು ವರುಣ ಕೊಂಚ ಬಿಡುವು ಕೊಟ್ಟ ಹಿನ್ನಲೆಯಲ್ಲಿ ಹೆದ್ದಾರಿ ಸಂಚಾರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೆದ್ದಾರಿಯಲ್ಲಿ ಮಳೆ ನೀರು ತಗ್ಗಿದ ಹಿನ್ನಲೆಯಲ್ಲಿ ಬೆಂಗಳೂರು ಮೈಸೂರು ಸಂಚಾರ ಯಾವುದೇ ಅಡೆತಡೆಯಿಲ್ಲದೆ ಸಾಗಿದೆ.
ಕಳೆದ ಶುಕ್ರವಾರ ಹಾಗೂ ಭಾನುವಾರ ರಾತ್ರಿ ಸುರಿದ ಬಾರಿ ಮಳೆಗೆ ಸಾವಿರಾರು ಕೋಟಿ ವೆಚ್ಚದ ದಶಪಥ ರಾಷ್ಟ್ರೀಯ ಹೆದ್ದಾರಿಯ 275 ರ ನ್ಯೂನತೆ ಬಟಾಬಯಲಾಗಿದೆ. ಅದರಲ್ಲೂ ಬಾನುವಾರ ತಡರಾತ್ರಿ ಸುರಿದ ಮಳೆಗೆ ಬೆಂಗಳೂರು ಮೈಸೂರು ಸಂಚಾರವೇ ಅಸ್ತವ್ಯಸ್ತವಾಗಿತ್ತು. ಪ್ರಯಾಣಿಕರು ಇನ್ನಿಲ್ಲದ ಸಂಕಷ್ಟ ಅನುಭವಿಸಿದರು.
ಎಚ್ಚರಿಕೆ ನೀಡಿದ ಮಳೆ:
ಮಳೆಗಾಲ ಪ್ರಾರಂಭದಿಂದಲೂ ದಶಪಥ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ಸ್ಥಳೀಯರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಪದೇ ಪದೇ ನಿರ್ಮಾಣವಾಗುತ್ತಿತ್ತು. ಮಾಗಡಿ ಶಾಸಕ ಎ.ಮಂಜುನಾಥ್ ಸೇರಿದಂತೆ ಸ್ಥಳೀಯರು ಹಾಗೂ ಸಾರ್ವಜನಿಕರು ಅವೈಜ್ಞಾನಿಕ ಕಾಮಾಗಾರಿ ನಡೆದಿದೆ ಎಂದು ಆರೋಪಿಸಿದ್ದರು.

ಶಾಸಕರು, ಸ್ಥಳೀಯರು ಹಾಗೂ ಸಾರ್ವಜನಿಕರು ಆರೋಪಕ್ಕೆ ಬಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಸುರಿದ ಮಹಾಮಳೆ ಸಾಕ್ಷಿ ನೀಡಿದೆ ಹೆದ್ದಾರಿಯ ಅಂಡರ್ ಪಾಸ್‌ಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದಿದ್ದ ಸಮಯದಲ್ಲೇ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿರುವ ಡಿಬಿಎಲ್ ಕಂಪನಿಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.
ಹೆದ್ದಾರಿ ಸರಿಪಡಿಸದಿದ್ದರೆ ದಸರಾ ಸಮಯದಲ್ಲಿ ಅಪಾಯ ತಪ್ಪಿದ್ದಲ್ಲ:
ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಾರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದೆ. ದಸರಾ ಸೊಬಗು ಸವಿಯಲು ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಚಾರಕ್ಕೆ ಉತ್ತಮ ಗುಣಮಟ್ಟದ ರಸ್ತೆ ಒದಗಿಸುವ ಮೂಲಕ ಸಂಚಾರದ ಅವದಿಯನ್ನು ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣವಾದ ದಶಪಥ ರಾಷ್ಟ್ರೀಯ ಹೆದ್ದಾರಿ 275 ಇದೀಗ ಪ್ರವಾಸಿಗರ ಪಾಲಿಗೆ ಸಂಕಷ್ಟಗೀಡುಮಾಡುವ ಆತಂಕ ಎದುರಾಗಿದೆ.
ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಾಗಾರಿಗೆ ಕಾರಣವಾದ ಹೆದ್ದಾರಿ ಪ್ರಾಧಿಕಾರ ಹಾಗೂ ಡಿಬಿಎಲ್ ಕಂಪನಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವಂತೆ ಮಹಾಮಳೆ ರಾಜ್ಯದ ಮುಂದೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ತೆರೆದಿಟ್ಟಿದೆ. ಇನ್ನಾದರೂ ಹೆದ್ದಾರಿಯ ಅವೈಜ್ಞಾನಿಕ ಕಾಮಾಗಾರಿ ಸರಿಪಡಿಸದಿದ್ದರೆ ವಿಶ್ವ ವಿಖ್ಯಾತ ದಸರಾಗೆ ಆಗಮಿಸುವ ದೇಶ ವೀದೇಶದ ಪ್ರವಾಸಿಗರ ಮುಂದೆ ಹೆದ್ದಾರಿಯ ಅವೈಜ್ಞಾನಿಕ ಕಾಮಾಗಾರಿ ಬೆತ್ತಲುಗೊಳ್ಳಲಿದೆ.












Click it and Unblock the Notifications