Get Updates
Get notified of breaking news, exclusive insights, and must-see stories!

ಬಿರುಬಿಸಿಲಿನಲ್ಲಿ ಪತಿಯರ ಪರ ಪ್ರಚಾರಕ್ಕಿಳಿದ ಪತ್ನಿಯರು: ರಾಮನಗರದಲ್ಲಿ ಎಚ್‌ಡಿಕೆ, ಡಿಕೆಶಿ ಪತ್ನಿಯರ ಮತ ಬೇಟೆ

ರಾಮನಗರ, ಏಪ್ರಿಲ್‌ 26: 2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳು ನಿರಂತರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚನೆ ನಡೆಸಿದರೆ. ಪತಿಯರ ಪರವಾಗಿ ಬಿರುಬಿಸಿಲಿನಲ್ಲಿ ಚುನಾವಣಾ ಪ್ರಚಾರಕ್ಕೆ ಧುಮುಕಿರುವ ಪತ್ನಿಯರು ಮಹಿಳಾ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪೈಕಿ ಮೂರು ಕ್ಷೇತ್ರದ ಅಭ್ಯರ್ಥಿಯ ಪತ್ನಿಯರು ಕ್ಷೇತ್ರದ ಮಹಿಳಾ ಮತದಾರರು ಸೇರಿದಂತೆ ಜನರ ಮತ ತಮ್ಮತ್ತ ಸೆಳೆದು ತಮ್ಮ ಪತಿಯರನ್ನು ಗೆಲುವಿನ ದಡ ಸೇರಿಸಲು ಟೊಂಕಕಟ್ಟಿ ಹೋರಾಟಕ್ಕೆ ಧುಮುಕಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಹಾಗೂ ಮಾಗಡಿ ಕ್ಷೇತ್ರದಲ್ಲಿ ಶಾಸಕ ಎ.ಮಂಜುನಾಥ್ ಪತ್ನಿ ಲಕ್ಷ್ಮಿ ಮಂಜುನಾಥ್ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.

Anitha Kumaraswamy And Usha shivakumar Election Campaign at Ramanagara

ಚನ್ನಪಟ್ಟಣದಲ್ಲಿ ಹೆಚ್ಡಿಕೆ ಪರ ಅನಿತಾ ಕುಮಾರಸ್ವಾಮಿ ಮತ ಬೇಟೆ

ರಾಜ್ಯದಲ್ಲಿ ಜೆಡಿಎಸ್ ನೇತೃತ್ವದ ಸರ್ಕಾರ ತರುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮೂಲಕ ಪಕ್ಷ ಸಂಘಟನೆಯಲ್ಲಿ ನಿರತವಾಗಿರುವ ಹಿನ್ನಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿರುವ ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದಲ್ಲಿ ಅವರ ಪತ್ನಿ ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ ಚುನಾವಣೆಯ ಪ್ರಚಾರದ ಕಣದಲ್ಲಿದ್ದಾರೆ.

ಪುರಾಣ ಪ್ರಸಿದ್ಧ ಕೆಂಗಲ್ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಡಿಕೆಯಂತೆ ದೇವಾಲಯ ಬಳಿ ಇರುವ ಚಂದ್ರಗಿರಿ ದೊಡ್ಡಿಯಲ್ಲಿ ಚುನಾವಾಣ ಪ್ರಚಾರ ಆರಂಭಿಸಿದ ಶಾಸಕಿ ಅನಿತಾ ಕುಮಾರಸ್ವಾಮಿಗೆ ಕ್ಷೇತ್ರದ ಜೆಡಿಎಸ್ ಮುಖಂಡರು ಸಾಥ್ ನೀಡಿದರು. ಅನಿತಾ ಕುಮಾರಸ್ವಾಮಿ‌ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಸ ನಡೆಸಿದರು.

ನಿಮ್ಮ ಮನೆ ಮಗ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ರಾಜ್ಯದ ಜನರ ಸೇವೆ ಮಾಡಲು ಕಳುಹಿಸಿಕೊಡಿ. ನೀವು ನೀಡುವ ಮತ ಕೇವಲ‌ ಶಾಸಕರಿಗೆ ಅಲ್ಲ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಗೆ ಎಂಬುದನ್ನು ನೆನಪಿಡಿ. ಕ್ಷೇತ್ರದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಲ್ಲ ಪ್ರತಿಯೊಬ್ಬ ಕಾರ್ಯಕರ್ತರು ನಾನೇ ಅಭ್ಯರ್ಥಿ ಎಂಬ ಮನೋಭಾವದಿಂದ ಕುಮಾರಸ್ವಾಮಿ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಕರೆ ನೀಡಿದರು.

Anitha Kumaraswamy And Usha shivakumar Election Campaign at Ramanagara

ಕನಕಪುರ ಪ್ರಚಾರ ಕಣದಲ್ಲಿ ಉಷಾ ಶಿವಕುಮಾರ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರುವ ಪಣತೊಟ್ಟು, ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿರುವ ರಾಜ್ಯ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಅವರ ಪತ್ನಿ ಉಷಾ ಶಿವಕುಮಾರ್ ಪತಿ ಪರ ಮತಯಾಚನೆ ನಡೆಸಿದರು. ಕನಕಪುರ ಪಟ್ಟಣದ ಪ್ರಮುಖ ಬೀದಿಗಳು ಸೇರಿದಂತೆ ಹಲಸಿಮರದೊಡ್ಡಿ, ವಾಣಿ ಟಾಕೀಸ್, ಜೆಸಿ ಬಡವಾಣೆಯ ಪ್ರಮುಖ ಬೀದಿಗಳಲ್ಲಿ ಮತ ಬೇಟೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಷಾ ಶಿವಕುಮಾರ್ ನನಗೆ ರಾಜಕೀಯ ಗೊತ್ತಿಲ್ಲ, ಯಾರು ಸ್ಪರ್ಧಿ, ಯಾರು ಪ್ರತಿಸ್ಪರ್ಧಿ ತಿಳಿದಿಲ್ಲ. ಡಿಕೆ ಸಾಹೇಬರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಹಾಗಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ. ನಾವು ಪ್ರಚಾರಕ್ಕೆ ಬರದಿದ್ದರೂ, ನಮ್ಮ ಜನ ಡಿಕೆಶಿ ಅವರಿಗೆ ಮತ ನೀಡುತ್ತಾರೆ. ಬಹಿರಂಗ ಪ್ರಚಾರ ಅಂತ್ಯ ವರೆಗೆ ಕ್ಷೇತ್ರದಲ್ಲೇ ಉಳಿದು ಚುನಾವಣಾ ಪ್ರಚಾರ ಮಾಡುತ್ತೇನೆ ಎಂದರು.

ಮಾಗಡಿ ಕ್ಷೇತ್ರದ ಪ್ರಚಾರಕ್ಕಿಳಿದ ಲಕ್ಷ್ಮೀ ಮಂಜುನಾಥ್

ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ, ಜೆಡಿಎಸ್​ ಅಭ್ಯರ್ಥಿ ಎ.ಮಂಜುನಾಥ್ ಕ್ಷೇತ್ರದಲ್ಲಿ ಒಂದು ಕಡೆ ಪ್ರಚಾರ ಕೈಗೊಂಡರೆ, ಅವರ ಪತ್ನಿ ಲಕ್ಷ್ಮೀ ಮಂಜುನಾಥ್ ಮಾಗಡಿ ಕ್ಷೇತ್ರದ ಬಿಡದಿಯಲ್ಲಿ ತಮ್ಮ ಮಹಿಳೆಯರು ಹಾಗೂ ಬೆಂಬಲಿಗರೊಡನೆ ಮನೆ ಮನೆಗೆ ತೆರಳಿ ಎ.ಮಂಜುನಾಥ್ ಅವರಿಗೆ ಮತ ನೀಡಿ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸುವ ಮೂಲಕ ಶಾಸಕರಾಗಿ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.

Anitha Kumaraswamy And Usha shivakumar Election Campaign at Ramanagara

ಮಹಿಳಾ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಮಾಡಿ ಪತಿ ಮಂಜುನಾಥ್ ಗೆಲುವಿಗಾಗಿ ಪತ್ನಿ ಲಕ್ಷ್ಮೀ ಮಂಜುನಾಥ್ ಮತಯಾಚನೆ ಮಾಡಿದರು. ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್​ ಶಾಸಕ ಎ.ಮಂಜುನಾಥ್ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಳೆದ 5 ವರ್ಷಗಳ ಅವಧಿಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಮಾಜಿ ಸಿಎಂ ಕುಮಾರಸ್ವಾಮಿ ಅವಧಿಯಲ್ಲಿ ಬಿಡದಿ ಸೇರಿದಂತೆ ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನ ಲಭಿಸಿತ್ತು.‌ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಬೇಕಿದ್ದು ಮತ್ತೊಮ್ಮೆ ಎ.ಮಂಜುನಾಥ್ ಅವರಿಗೆ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+