ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್.ಆರ್.ವಿಶ್ವನಾಥ್‌ ಹತ್ಯೆಗೆ ಸಂಚು: ಎಚ್‌ಡಿಕೆ ಮಹತ್ವದ ಹೇಳಿಕೆ

|
Google Oneindia Kannada News

ರಾಮನಗರ, ಡಿ 1: "ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ನನಗೆ ವಾಸ್ತವ ಅಂಶಗಳೇನು ಎನ್ನುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ಮಾಹಿತಿಯನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿಯ ತಮ್ಮ ತೋಟದಲ್ಲಿ ರಾಮನಗರ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಮತದಾರರ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದ ಕುಮಾರಸ್ವಾಮಿ, "ದೇವೇಗೌಡರು ದೆಹಲಿಯಿಂದ ಬಂದ ಮೇಲೆ ವಿಧಾನ ಪರಿಷತ್‌ ಚುನಾವಣೆಯ ಮೈತ್ರಿ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಕುಮಾರಸ್ವಾಮಿ ಹೇಳಿದರು.

"ಜೆಡಿಎಸ್‌ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪನವರು ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನವರು ನಮಗೆ ಜೆಡಿಎಸ್‌ ಪಕ್ಷದ ಮತಗಳ ಅಗತ್ಯವಿಲ್ಲ. ಅವರ ಜತೆ ಹೊಂದಾಣಿಕೆ ಪ್ರಶ್ನೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಬೇಡ ಎಂದವರ ಮನೆ ಬಾಗಿಲಿಗೆ ಹೋಗಲಿಕ್ಕೆ ಆಗುತ್ತದೆಯೇ"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಎಸ್.ಆರ್.ವಿಶ್ವನಾಥ್ ಅವರನ್ನು ಹತ್ಯೆಯ ಸುಪಾರಿ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, "ಒಂದು ವೇಳೆ ಹತ್ಯೆ ಸಂಚು ನಿಜವೇ ಆಗಿದ್ದರೆ ಕಠಿಣವಾಗಿ ಕ್ರಮ ಕೈಗೊಳ್ಳಬೇಕು. ರಾಜಕಾರಣವೇ ಬೇರೆ" ಎಂದು ಕುಮಾರಸ್ವಾಮಿಯವರು ಒತ್ತಾಯಿಸಿದರು.

ಎಸ್.ಆರ್.ವಿಶ್ವನಾಥ್ ಅವರ ಹತ್ಯೆಯ ಸುಪಾರಿ

ಎಸ್.ಆರ್.ವಿಶ್ವನಾಥ್ ಅವರ ಹತ್ಯೆಯ ಸುಪಾರಿ

"ರಾಜಕೀಯದ ನೆಪದಲ್ಲಿ ಭೂ ವ್ಯವಹಾರವೋ ಅಥವಾ ಇನ್ನವುದೋ ವ್ಯವಹಾರಗಳನ್ನು ನಡೆಸಬೇಕಾದರೆ ಹತ್ಯೆ ಮಾಡುವಂಥ ಹಂತಕ್ಕೆ ಯಾರೂ ತೆಗೆದುಕೊಂಡು ಹೋಗಬಾರದು. ಸರಕಾರ ನಿರ್ಲಕ್ಷ್ಯ ಮಾಡದೇ ದಕ್ಷ ಅಧಿಕಾರಿಗಳನ್ನು ಬಿಟ್ಟು ತನಿಖೆ ಮಾಡಿಸಿ ಸತ್ಯವನ್ನು ಹೊರಗೆಳೆದು ಜನರ ಮುಂದೆ ಇಡಬೇಕು" ಎಂದು ಎಸ್.ಆರ್.ವಿಶ್ವನಾಥ್ ಅವರ ಹತ್ಯೆಯ ಸುಪಾರಿ ಬಗ್ಗೆ ಕುಮಾರಸ್ವಾಮಿ ಒತ್ತಾಯಿಸಿದರು.

ನಿಖಿಲ್ ಕುಮಾರಸ್ವಾಮಿ ಎಲ್ಲಿಂದ ಸ್ಪರ್ಧೆ

ನಿಖಿಲ್ ಕುಮಾರಸ್ವಾಮಿ ಎಲ್ಲಿಂದ ಸ್ಪರ್ಧೆ

ನಿಖಿಲ್ ಅವರು ರಾಮನಗರ ಅಥವಾ ಮಂಡ್ಯ ಇವೆರಡರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, "ಪಕ್ಷದ ಬಯಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ. ಕಾರ್ಯಕರ್ತರ ಒಲವು, ಪಕ್ಷದ ಆದೇಶ ಬಂದರೆ ಸ್ಪರ್ಧಿಸಲು ತಯಾರಿದ್ದೇನೆ ಎಂದು ಅವರು ಹೇಳಿದ್ದಾರೆ. ಅದು ಇನ್ನೂ ಎರಡು ವರ್ಷದ ಮಾತು" ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಮ್ಮ ಹೃದಯದಲ್ಲಿರುವ ನೆಲೆ ರಾಮನಗರ

ನಮ್ಮ ಹೃದಯದಲ್ಲಿರುವ ನೆಲೆ ರಾಮನಗರ

"ರಾಮನಗರ ನಮ್ಮ ಕರ್ಮಭೂಮಿ, ನಮ್ಮ ಹೃದಯದಲ್ಲಿರುವ ನೆಲೆ. ಈ ಭೂಮಿ ಮೇಲೆ ಇರುವವರೆಗೂ ಇಲ್ಲೇ ಇರುತ್ತೇವೆ, ಅಲ್ಲದೇ, ಭೂಮಿ ಮೇಲೆ ಮಣ್ಣಾದರೂ ಈ ಮಣ್ಣಲ್ಲೇ ಮಣ್ಣಾಗುವೆ. ನಮ್ಮ ಮತ್ತು ರಾಮನಗರದ ನಡುವೆ ವಿಶೇಷ ಬಾಂಧವ್ಯವಿದೆ. ಅದನ್ನು ಅಳಿಸಲು ಯಾರಿದಂಲೂ ಸಾಧ್ಯವಿಲ್ಲ. ಉಸಿರಿರುವ ತನಕವಷ್ಟೇ ಅಲ್ಲ ಉಸಿರು ನಿಂತ ಮೇಲೆಯೂ ರಾಮನಗರವೇ ನಮ್ಮ ಕರ್ಮಭೂಮಿ ಆಗಿರುತ್ತದೆ" ಎಂದು ಕುಮಾರಸ್ವಾಮಿ ಪುನರುಚ್ಚಿಸಿದರು.

Recommended Video

Nandi Hills ರಸ್ತೆಗಳ ಮರುನಿರ್ಮಾಣ , ಪ್ರವಾಸಿಗರು ಫುಲ್ ಖುಷ್ | Oneindia Kannada
ಮೋದಿ ಜೊತೆ ಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ

ಮೋದಿ ಜೊತೆ ಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ

ಮೋದಿ ಜೊತೆ ಗೌಡರು ಚುನಾವಣೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಿರಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, "ಮೊದಲಿನಿಂದಲೂ ಪ್ರಧಾನಮಂತ್ರಿಗಳು ಮತ್ತು ದೇವೇಗೌಡರ ನಡುವೆ ಉತ್ತಮ ಬಾಂಧವ್ಯವಿದೆ. ಗೌಡರ ಬಗ್ಗೆ ಮೋದಿ ಅವರಿಗೆ ವಿಶೇಷ ಗೌರವವಿದೆ. ಅವರಿಬ್ಬರೂ ಭೇಟಿಯಾಗುವುದು ಹೊಸದೇನಲ್ಲ. ನಾನು ಸಿಎಂ ಆಗಿದ್ದಾಗ ಭೇಟಿಯಾಗಿದ್ದ ಸಂದರ್ಭದಿಂದಲೂ ನನಗೆ ಗೊತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಹಾಸನಕ್ಕೆ ಐಐಟಿ ತರುವ ವಿಚಾರದ ಬಗ್ಗೆ ಮೋದಿ ಅವರ ಜತೆ ಚರ್ಚೆ ನಡೆಸಲು ಹೋಗಿದ್ದಾರೆಂಬ ಮಾಹಿತಿ ಗಮನಿಸಿದ್ದೇನೆ" ಎಂದು ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದರು.

English summary
Alleged Plot To Eliminate MLA S R Vishwanath: Former CM H D Kumaraswamy Reaction. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X