• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ: ರಸ್ತೆಗಾಗಿ ರಾಷ್ಟ್ರಪತಿಗಳಿಗೆ ದಯಾಮರಣ ಅರ್ಜಿ ಸಲ್ಲಿಸಿದ ನೊಂದ ಕುಟುಂಬ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 14: ರಸ್ತೆಯನ್ನು ಸಂಪೂರ್ಣ ಮುಚ್ಚಿ ಮನೆ ಒಳಗೆ ಹೋಗದಂತೆ ಸುತ್ತಲೂ ನಿರ್ಬಂಧ ವಿಧಿಸಿರುವ ಕಾರಣ ಮನೆಯನ್ನು ತೊರೆದಿರುವ ನೊಂದ ಕುಟುಂಬ, ಮನೆಗೆ ರಸ್ತೆಯನ್ನು ಬಿಡಿಸಿಕೊಡಿ, ಇಲ್ಲವೆ ದಯಾಮರಣ ನೀಡಿ ಎಂದು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡಮುದುವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದ ಕೃಷ್ಣಮೂರ್ತಿಯ ಕುಟುಂಬ ಸದಸ್ಯರು ದಯಾಮರಣ ಕೋರಿ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ವೀರೆಗೌಡನದೊಡ್ಡಿ ಗ್ರಾಮದವರಾದ ಕೃಷ್ಣಮೂರ್ತಿ ಮತ್ತಿಕುಂಟೆ ಗ್ರಾಮದಲ್ಲಿ 1992ರಲ್ಲಿ ಗಿರೀಗೌಡ ಎಂಬುವರಿಂದ ನಿವೇಶನ ಖರೀದಿಸಿ, 1993ರಲ್ಲಿ ಮನೆ ಕಟ್ಟಿಕೊಂಡಿದ್ದಾರೆ. 1998ರ ತನಕ ಚೆನ್ನಾಗಿದ್ದ ಅಕ್ಕಪಕ್ಕದವರು, ನಂತರ ರಸ್ತೆಯಲ್ಲಿ ಓಡಾಡುವ ವಿಚಾರವಾಗಿ ತಗಾದೆ ತೆಗೆದು ಮನೆಯ ದಕ್ಷಿಣ ಭಾಗಕ್ಕಿದ್ದ ರಸ್ತೆಯನ್ನು ಮುಚ್ಚಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

 ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಕ್ರಮವಿಲ್ಲ

ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಕ್ರಮವಿಲ್ಲ

ನಂತರದಲ್ಲಿ ಮನೆಯ ಉತ್ತರ ಭಾಗದಲ್ಲಿದ್ದ ಖಾಲಿ ನಿವೇಶನವನ್ನು 2002ರಲ್ಲಿ ಖರೀದಿ ಮಾಡಿ ರಸ್ತೆ ಸಂಪರ್ಕ ಪಡೆದುಕೊಂಡು, ಆ ಜಾಗವು ತಮಗೆ ಬರಬೇಕೆಂದು ಅಕ್ಕ- ಪಕ್ಕದವರು ಬೇಲಿ ಹಾಕಿಕೊಂಡಿದ್ದಾರೆ. ಅಂತಿಮವಾಗಿ ಮನೆಗೆ ಬರಲು ಇದ್ದ ಎಲ್ಲಾ ಅವಕಾಶಗಳು ಬಂದ್ ಆಗಿದ್ದರಿಂದ ದಾರಿ ಕಾಣದೆ ಕುಟುಂಬ 2005ರಲ್ಲಿ ಮನೆ ಖಾಲಿ ಮಾಡಿಕೊಂಡು ಬೆಂಗಳೂರಿಗೆ ವಲಸೆ ಹೋಗಿದೆ.
ಕುಟುಂಬಕ್ಕೆ ಆಗಿದ್ದ ಅನ್ಯಾಯವನ್ನು ಸಹಿಸಿಕೊಂಡು ಬಿ.ಕಾಂ ಪದವಿಧರನಾಗಿ ಸಿನಿಮಾ ಇಂಡಸ್ಟ್ರಿನಲ್ಲಿ ರೈಟರ್ ಕಂ ಕೋ-ಡೈರೆಕ್ಟರ್ ಆಗಿರುವ ಕೃಷ್ಣಮೂರ್ತಿ ಪುತ್ರ ವಿಶ್ವನಾಥ್. ವಿ.ಕೆ. ತಮ್ಮ ಮನೆಗೆ ರಸ್ತೆಯನ್ನು ಬಿಡಿಸಿಕೊಡುವಂತೆ 2020ರಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯಿತಿ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

 ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿದ್ದಾರೆ

ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿದ್ದಾರೆ

"ಸಂಬಂಧಪಟ್ಟವರಿಂದ ಯಾವುದೇ ಪರಿಹಾರ ದೊರೆಯದಿದ್ದಾಗ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿ, ತಾವು 38 ವರ್ಷಗಳ ಹಿಂದೆ ಕಟ್ಟಿ ವಾಸ ಮಾಡುತ್ತಿದ್ದ ಮನೆಗೆ ಇದ್ದ ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿದ್ದು, ಅದನ್ನು ಬಿಡಿಸಿಕೊಡುವಂತೆ ಹೋರಾಟ ನಡೆಸಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ನೊಂದ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಕನಕಪುರ ತಾಲ್ಲೂಕು ಆಡಳಿತ, ರಾಮನಗರ ಜಿಲ್ಲಾಡಳಿಕ್ಕೆ ಮನವಿ ಮಾಡಿ ಹೋರಾಟ ನಡೆಸಿದರೂ, ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಹೋರಾಟ ನಡೆಸುವ ವೇಳೆ ತಾವು ಮಾಡಬೇಕಿದ್ದ ಕೆಲಸಕ್ಕೂ ಹೋಗದೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಜೀವನಕ್ಕೆ ಆಸರೆಯಾಗಿದ್ದ ಮನೆಗೂ ರಸ್ತೆಯಿಲ್ಲದೆ ಇಲ್ಲಿ ಜೀವನ ಮಾಡುವುದು ಕಷ್ಟವಾಗಿದೆ. ಅದಕ್ಕಾಗಿ ಇಡೀ ಕುಟುಂಬ ದಯಾಮರಣಕ್ಕೆ ಮುಂದಾಗಿದ್ದೇವೆ," ಎನ್ನುತ್ತಾರೆ ವಿಶ್ವನಾಥ್.

 ಮನೆಗೆ ಬರುವ ರಸ್ತೆಯನ್ನು ತೆರವುಗೊಳಿಸಿ

ಮನೆಗೆ ಬರುವ ರಸ್ತೆಯನ್ನು ತೆರವುಗೊಳಿಸಿ

ಸಮಾಜದಲ್ಲಿ‌ ಒಬ್ಬ ವ್ಯಕ್ತಿ ಬದುಕಲು ಬೇಕಿರುವ ಎಲ್ಲಾ ಅವಕಾಶಗಳನ್ನು ಕಾನೂನಿನಡಿ ಸಂವಿಧಾನಬದ್ಧ ಹಕ್ಕುಗಳನ್ನು ಕೊಡುತ್ತದೆ. ಗ್ರಾಮ ಪಂಚಾಯತಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಿದೆ. ಆದರೆ ತಾವು ವಾಸಿಸುವ ಮತ್ತಿಕುಂಟೆ ಗ್ರಾಮದಲ್ಲಿ ಅಕ್ಕಪಕ್ಕದವರಾದ ಮಾಗಡಿಗೌಡರ ಕುಟುಂಬದವರಾದ ವೆಂಕಟೇಶ್, ಶ್ರೀನಿವಾಸ್, ಉದಯರಂಗ, ತಿಮ್ಮೇಗೌಡ, ರಜಿನಿಕಾಂತ್ ತೊಂದರೆ ಕೊಡುತ್ತಿದ್ದಾರೆ ಎಂಬುದು ಕೃಷ್ಣಮೂರ್ತಿ ಕುಟುಂಬದ ಆರೋಪಮಾಡಿದ್ದಾರೆ.
ಇದರಿಂದ ನೊಂದಿರುವ ಕೃಷ್ಣಮೂರ್ತಿ, ಪತ್ನಿ ಭಾಗ್ಯಮ್ಮ, ಮಗ ವಿಶ್ವನಾಥ್, ಸೊಸೆ ಚೈತ್ರ, ಮೊಮ್ಮಕ್ಕಳಾದ ಚರಿತ, ರೋಚನ್ ದಯಾಮರಣಕ್ಕೆ ಅರ್ಜಿ ಹಾಕಿಕೊಂಡವರಾಗಿದ್ದಾರೆ. ತಾವು ಗೌರವಯುತ ಬದುಕು ಸಾಗಿಸಲು ಮನೆಗೆ ಬರುವ ರಸ್ತೆಯನ್ನು ತೆರವುಗೊಳಿಸಿ, ಮನೆಯಲ್ಲಿ ನೀರು ನಿಲ್ಲದಂತೆ ಚರಂಡಿ ಮಾಡಬೇಕೆಂದು ಕುಟುಂಬವು ಒತ್ತಾಯವಾಗಿದೆ.

  ಐದನೇ ಟೆಸ್ಟ್ ಮ್ಯಾಚ್ ರದ್ದಾಗಿದ್ದು ಕೊರೊನ ಭೀತಿಗೆ ಅಂತ ಗುಡುಗಿದ ಗಂಗೂಲಿ | Oneindia Kannada
   ಅಧಿಕಾರಿಗಳ ಪ್ರತಿಕ್ರಿಯೆ

  ಅಧಿಕಾರಿಗಳ ಪ್ರತಿಕ್ರಿಯೆ

  ಮುದುವಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಪ್ರತಿಕ್ರಿಯೆ ನೀಡಿ, "ಮತ್ತಿಕುಂಟೆ ಗ್ರಾಮದಲ್ಲಿ ವಿಶ್ವನಾಥ. ವಿ.ಕೆ. ಮನೆಗೆ ಇದ್ದ ದಕ್ಷಿಣ ಭಾಗದ ರಸ್ತೆ ಸಂಪರ್ಕ ಕಡಿತವಾಗಿರುವುದು ತಮ್ಮ ಗಮನಕ್ಕೆ ಬಂದಿದ್ದು, ಉತ್ತರ ಭಾಗದಲ್ಲಿ ತಾತ್ಕಾಲಿಕ ರಸ್ತೆಯನ್ನು ಮಾಡಿದ್ದೇವೆ. ಸಿಇಒ ಅವರಿಂದ ವಿಶೇಷ ಅನುಮತಿ ಪಡೆದು ನರೇಗಾಲ್ಲಿ ಕಾಂಕ್ರೀಟ್ ಹಾಕಲಾಗುವುದು. ದಕ್ಷಿಣ ಭಾಗದಲ್ಲಿ ಚರಂಡಿಯನ್ನು ಮಾಡಿ ನೀರು ಹೋಗುವಂತೆ ಮಾಡಲಾಗುವುದು," ಎಂದು ತಿಳಿಸಿದ್ದಾರೆ.ಎಂ.ಎ. ಲೋಕೇಶ್ ಸ್ಪಷ್ಟಪಡಿಸಿದ್ದಾರೆ.

  English summary
  Members of the Krishnamurthy family of Mattikunte village in Kanakapura taluk of Ramanagara district have applied to the President and Chief Minister seeking euthanasia.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X