ರಾಮನಗರದಲ್ಲಿ 65 ಅಡಿ ಎತ್ತರ ಆಂಜನೇಯ ಪ್ರತಿಮೆ ಅನಾವರಣ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಡಿಸೆಂಬರ್. 02 : ರೇಷ್ಮೆನಗರಿ ರಾಮನಗರದಲ್ಲಿ ಹನುಮ ಜಯಂತಿ ಅಂಗವಾಗಿ 65 ಅಡಿ ಎತ್ತರದ ಬೃಹತ್ ಆಂಜನೇಯನ ಪ್ರತಿಮೆಯನ್ನು ಶುಕ್ರವಾರ (ಡಿ.1)ರಂದು ಅನಾವರಣ ಮಾಡಲಾಯಿತು.

ಇಂದು ಹನುಮದ್ ವ್ರತ, ಹನುಮ ಜಯಂತಿ ಅಲ್ಲ, ಮುಂದೆ ಓದಿ..

ನಗರದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿನ ವಿಜಯನಗರ ಸಮೀಪದಲ್ಲಿ ಅಭಯ ಆಂಜನೇಯನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಹಲವಾರು ಪ್ರಮುಖರು ಸೇರಿ ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಯ ಆಂಜನೇಯನ ಪ್ರತಿಮೆಯನ್ನು ಕೆತ್ತನೆ ಮಾಡಿಸಿದ್ದಾರೆ. ಅಭಯ ಆಂಜನೇಯ ವಿಗ್ರಹ ಮಂಟಪ 25 ಅಡಿಯಿದ್ದು ಅದರ ಮೇಲೆ ಕುಳಿತಿರುವ ಭಂಗಿಯಲ್ಲಿರುವ ಮಾರುತಿಯ ವಿಗ್ರಹ 35 ಅಡಿಯಿದ್ದು ನೋಡಲು ಅತ್ಯಾಕರ್ಷಕವಾಗಿದ್ದು ಆಸ್ಥಿಕರ ಗಮನ ಸೆಳೆಯುತ್ತಿದೆ.

65 Feet Anjaneya statue uneveiled

ಇನ್ನೂ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಿಟಿಜಿಟಿ ಮಳೆಯಲ್ಲಿಯೂ ಸಹ ಭಕ್ತಾಧಿಗಳ ದಂಡು ನೂತನ ಗೋಪುರ ವೀಕ್ಷಣೆ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದರು.

65 Feet Anjaneya statue uneveiled

ಮಾರುತಿಯ ಬೃಹತ್ ವಿಗ್ರಹ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
During Hanuman Jayanti 65ft Hanuman statue unveiled in Ramanagar, which is in Bengaluru Mysuru highway.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ