ಮಂತ್ರಾಲಯ ಗುರುರಾಯರ ಅನುಗ್ರಹ ಬೇಡಿದ ರಜನಿಕಾಂತ್

Posted By:
Subscribe to Oneindia Kannada
   ಮಂತ್ರಾಲಯದ ಗುರುರಾಯರ ಸನ್ನಿಧಾನದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ | Oneindia Kannada

   ರಾಯಚೂರು, ನವೆಂಬರ್ 21: ರಾಯಚೂರು ಸಮೀಪದ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುರುರಾಯರ ಅನುಗ್ರಹ ಬೇಡಿದರು.

   'ರಜನಿ, ಕಮಲ್ ಮುಖಕ್ಕೆ ಶೇ 10ರಷ್ಟು ವೋಟ್ ಸಿಗಲ್ಲ'

   ಆಂಧ್ರಪ್ರದೇಶದ ಕರ್ನೂರು ಜಿಲ್ಲೆಯ ವಿಶ್ವವಿಖ್ಯಾತ ಪುಣ್ಯಕ್ಷೇತ್ರ ಮಂತ್ರಾಲಯ ಗ್ರಾಮಕ್ಕೆ ರಜನಿಕಾಂತ್ ಅವರು ಮಂಗಳವಾರ ಬೆಳಗ್ಗೆ ಭೇಟಿ ನೀಡಿದರು.

   ಮೋದಿ ಸ್ವಚ್ಛತಾ ಅಭಿಯಾನ ಬೆಂಬಲಿಸಿ ರಜನಿ ಟ್ವೀಟ್

   ಬೆಳಿಗ್ಗೆ 7.30ಕ್ಕೆ ಮಂತ್ರಾಲಯಕ್ಕೆ ಬಂದ ರಜನಿಕಾಂತ್, ನೇರವಾಗಿ ಮಂತ್ರಾಲಯದ ಮಂಚಾಲಮ್ಮ ದೇವಿಯ ದರ್ಶನ ಪಡೆದರು. ನಂತರ ರಾಘವೇಂದ್ರ ಸ್ವಾಮಿ, ಆಂಜನೇಯ ಸ್ವಾಮಿ ದರ್ಶನ ಪಡೆದರು. ರಾಯರ ಸನ್ನಿಧಿಯಲ್ಲಿ ಕೆಲ ಹೊತ್ತು ಧ್ಯಾನ ಮಾಡಿದರು.

   ಮಂತ್ರಾಲಯ ಪ್ರಭುಗಳ ಸಾನಿಧ್ಯದಲ್ಲಿ ಜಗ್ಗೇಶ್‌

   ಹತ್ತು ನಿಮಿಷಗಳ ಕಾಲ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರ ಜತೆ ಮಾತುಕತೆ ನಡೆಸಿ, ಪ್ರಸಾದ ಸ್ವೀಕರಿಸಿ ತೆರಳಿದರು.

   ರಜನಿಕಾಂತ್ ರಾಜಕೀಯಕ್ಕೆ ಏಕೆ ಧುಮುಕಬೇಕು : 5 ಕಾರಣ

   ಈ ಹಿಂದೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 10 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದಾರೆ. ಈ ಹಣವನ್ನು ಮಠದ ಅಭಿವೃದ್ಧಿ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿಕೊಳ್ಳಲಾಗಿದೆ.

   ರಜನಿ ಅಂದು ನೀಡಿದ್ದ ದಾನ, ಸದ್ವಿನಿಯೋಗ

   ರಜನಿ ಅಂದು ನೀಡಿದ್ದ ದಾನ, ಸದ್ವಿನಿಯೋಗ

   ರಜನಿಕಾಂತ್ ಅವರು ಈ ಹಿಂದೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 10 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದರು. ಈ ದಾನ ರೂಪದ ಮೊತ್ತದಲ್ಲಿ ಹಳೆಯ ಕಟ್ಟಡವನ್ನು ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ. 25 ಕೊಠಡಿಗಳಿಗೆ ಹವಾನಿಯಂತ್ರಣ ಸೌಲಭ್ಯ ಹಾಗೂ 100 ಸಾಮಾನ್ಯ ಕೊಠಡಿಗಳನ್ನು ನಿರ್ಮಿಸಲಾಗಿದೆ.

   ಪ್ರವಾಹದಿಂದ ಹಾಳಾಗಿದ್ದ ಮಠದ ಆಸ್ತಿ ಪಾಸ್ತಿ

   ಪ್ರವಾಹದಿಂದ ಹಾಳಾಗಿದ್ದ ಮಠದ ಆಸ್ತಿ ಪಾಸ್ತಿ

   2009ರಲ್ಲಿ ಉಂಟಾದ ಪ್ರವಾಹದ ಕಾರಣ ಮಠದ ಕೋಟ್ಯಾಂತರ ಆಸ್ತಿಪಾಸ್ತಿ ನಾಶವಾಗಿತ್ತು. ಅಲ್ಲಿನ ಲಾಡ್ಜ್‌ಗಳು, ಅಡುಗೆ ಮನೆ, ರಸ್ತೆ ಸೇರಿದಂತೆ ಸುಮಾರು ರು.100 ಕೋಟಿಯಷ್ಟು ಆಸ್ತಿಪಾಸ್ತಿ ನಾಶವಾಗಿದ್ದ ಘಟನೆಯನ್ನು ಮಂತ್ರಾಲಯಕ್ಕೆ ಆಗಮಿಸುವ ಭಕ್ತರು ಇನ್ನೂ ಮರೆತಿಲ್ಲ. ಮಂತ್ರಾಲಯ ಗ್ರಾಮದ ಅಭಿವೃದ್ಧಿಗಾಗಿ ರಜನಿಕಾಂತ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ದಾನ ನೀಡಿದ್ದಾರೆ.

   ರಜನಿಕಾಂತ್ ಅವರು ಆಗಾಗ ಭೇಟಿ ನೀಡುತ್ತಾರೆ

   ರಜನಿಕಾಂತ್ ಅವರು ಆಗಾಗ ಭೇಟಿ ನೀಡುತ್ತಾರೆ

   ರಾಯರ ಸನ್ನಿಧಾನಕ್ಕೆ ಕುಟುಂಬ ಸಮೇತರಾಗಿ ಆಗಾಗ ರಜನಿಕಾಂತ್ ಅವರು ಭೇಟಿ ನೀಡುತ್ತಿರುತ್ತಾರೆ. ವರನಟ ಡಾ.ರಾಜ್ ಕುಮಾರ್ ಅವರಂತೆಯೇ ರಜನಿಕಾಂತ್ ಸಹ ರಾಯರ ಮಹಾನ್ ಆರಾಧಕರು. ರಜನಿ ಅವರು 'ಶ್ರೀರಾಘವೇಂದ್ರ' (1985) ಎಂಬ ಚಿತ್ರದಲ್ಲಿ ರಾಯರ ಭಕ್ತನಾಗಿ ಅಭಿನಯಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

   ರಾಯರ ಫೋಟೋ ಉಡುಗೊರೆ ನೀಡುವ ರಜನಿ

   ರಾಯರ ಫೋಟೋ ಉಡುಗೊರೆ ನೀಡುವ ರಜನಿ

   ರಜನಿಕಾಂತ್ ಅವರ ಮನೆಗೆ ಆಗಾಗ ಭೇಟಿ ನೀಡುವ ಅತಿಥಿಗಳಿಗೆ ರಾಯರ ಫೋಟೋಗಳನ್ನು ಉಡುಗೊರೆಯಾಗಿ ನೀಡುತ್ತಾ ಬರುತ್ತಿದ್ದಾರೆ. ಯಾವುದೇ ಶುಭ ಕಾರ್ಯಕ್ಕೂ ಮುನ್ನ ರಾಯರ ಅನುಗ್ರಹ ಬೇಡುವುದು ರಜನಿ ಅವರಿಗೆ ರೂಢಿಯಾಗಿದೆ. ಅದರಂತೆ, ಮುಂದಿನ ಎಲ್ಲಾ ಕಾರ್ಯಗಳಿಗೆ ಶುಭವಾಗಲೆಂದು ರಾಯರಲ್ಲಿ ರಜನಿ ಅವರು ಬೇಡಿಕೊಂಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Superstar Rajinikanth visited Mantralayam Sri Raghavendra Temple, Kurnool district, Andhrapradesh.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ