ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್‌ ಜೋಡೋ ಯಾತ್ರೆ: ಡಿಕೆಶಿ ಸಭೆಯ ಫ್ಲೆಕ್ಸ್‌ನಲ್ಲಿ ಸಿದ್ದು ಭಾವಚಿತ್ರಕ್ಕೆ ಕೊಕ್‌

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಸೆಪ್ಟೆಂಬರ್‌, 12: ತಿಂಗಳ ಹಿಂದೆ ದಾವಣೆಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಆಗ ಕಾರ್ಯಕರ್ತರೆಲ್ಲ ಸೇರಿ ಕಾಂಗ್ರೆಸ್‌ ನಾಯಕರ ಭಾವಚಿತ್ರಗಳನ್ನು ಫ್ಲೆಕ್ಸ್‌ನಲ್ಲಿ ಹಾಕಿಸಿದ್ದರು. ಇದೀಗ ಜಿಲ್ಲಾ ಕಾಂಗ್ರೆಸ್ ಸಮಿತಿ ಭಾರತ್‌ ಜೋಡೋ ಪೂರ್ವಭಾವಿ ಸಭೆಯ ಫ್ಲೆಕ್ಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಕೈಬಿಟ್ಟಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಇಂದು ಜಿಲ್ಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಗರದಲ್ಲಿ ಹಾಕಲಾದ ಫ್ಲೆಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಕೈಬಿಟ್ಟಿರುವುದು ಕಾಂಗ್ರೆಸ್ಸಿನ ಅನೇಕ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷರ ನೇತೃತ್ವದ ಪೂರ್ವಭಾವಿ ಸಭೆಯಲ್ಲಿಯೇ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಫ್ಲೆಕ್ಸ್‌ನಲ್ಲಿ ಹಾಕದಿರುವ ಬಗ್ಗೆ ಆಕ್ಷೇಪಿಸಲಾಗಿತ್ತು.

ಬೊಮ್ಮಾಯಿ ಯೋಗದಿಂದ ಸಿಎಂ ಆದವರು. ಯೋಗ್ಯತೆಯಿಂದಲ್ಲ:ಧ್ರುವನಾರಾಯಣ್ ಟೀಕೆಬೊಮ್ಮಾಯಿ ಯೋಗದಿಂದ ಸಿಎಂ ಆದವರು. ಯೋಗ್ಯತೆಯಿಂದಲ್ಲ:ಧ್ರುವನಾರಾಯಣ್ ಟೀಕೆ

ಫ್ಲೆಕ್ಸ್‌ನಲ್ಲಿ ಸಿದ್ದರಾಮಯ್ಯನ ಭಾವಚಿತ್ರ ಮಾಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿದ ಜಿಲ್ಲೆಗಳಲ್ಲಿ ರಾಯಚೂರು ಜಿಲ್ಲೆಯೂ ಸಹ ಒಂದಾಗಿದೆ. ರಾಯಚೂರಿನಲ್ಲಿಯೂ ಸಿದ್ಧರಾಮಯ್ಯ ಅವರ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅವರು ಬಂದರೆ ಸಾಕು ಕಿಕ್ಕಿರಿದು ಜನ ಸೇರುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ನಾಯಕ ಸೇರಿದಂತೆ ಶಾಸಕರು, ಮಾಜಿ ಶಾಸಕರು ಹಾಗೂ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿದೆ. ಈ ಪೂರ್ವಭಾವಿ ಸಿದ್ಧತೆಗೆ ಹಾಕಲಾದ ಫ್ಲೆಕ್ಸ್‌ನಲ್ಲಿ ಸಿದ್ಧರಾಮಯ್ಯ ಅವರ ಭಾವಚಿತ್ರ ಕಾಣೆಯಾಗಿರುವುದೇ ಈಗ ಭಾರಿ ಸೋಜಿಗದ ಸಂಗತಿ ಎನಿಸಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ಸಿನ ಜಿಲ್ಲಾ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ತಮ್ಮ ನಿಷ್ಠೆಯನ್ನು ಬದಲಿಸಿದ್ದಾರೆಯೇ? ಎನ್ನುವ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಎದ್ದಿದೆ.

Siddaramaiah Photo missing in DK shivakumar pre-meeting Flex

ಮುಂದಿನ ರಾಜಕೀಯ ಅಖಾಡಕ್ಕೆ ಡಿ.ಕೆ.ಶಿ ಪ್ಲಾನ್‌
ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಓಲೈಕೆಗಾಗಿ ಸಿದ್ದರಾಮಯ್ಯ ಅವರನ್ನೇ ಫ್ಲೆಕ್ಸ್‌ನಲ್ಲಿ ಕೈಬಿಟ್ಟಿದ್ದಾರೆಯೇ? ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಆಗಮಿಸದಿರುವುದರಿಂದ ಅವರ ಭಾವಚಿತ್ರವನ್ನು ಅಳವಡಿಸಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಆದರೂ ಪಕ್ಷದಲ್ಲಿ ಮತ್ತೆ ಒಡಕು ಮಡುತ್ತಿರುವುದಂತೂ ಎದ್ದು ಕಾಣುತ್ತಿದೆ.

Breaking: ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಗೆ ರಾಹುಲ್‌ ಗಾಂಧಿ ಚಾಲನೆBreaking: ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆಗೆ ರಾಹುಲ್‌ ಗಾಂಧಿ ಚಾಲನೆ

ಆದರೆ, ಹರಿಪ್ರಸಾದ್‌ ಮತ್ತು ಸಲೀಂ ಅಹ್ಮದ್‌ ಸಹ ಈ ಪೂರ್ವಭಾವಿ ಸಭೆಗೆ ಆಗಮಿಸಿಲ್ಲ. ಆದರೆ ಈ ಉಭಯ ನಾಯಕರ ಭಾವಚಿತ್ರವನ್ನು ಫ್ಲೆಕ್ಸ್‌ನಲ್ಲಿ ಹಾಕಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್‌ ಅವರು ನೀಡಿದ ಸ್ಪಷ್ಟೀಕರಣವನ್ನು ಮುಖಂಡರು ಮತ್ತು ಕಾರ್ಯಕರ್ತರು, ಸಿದ್ದರಾಮಯ್ಯ ಅವರ ಬೆಂಬಲಿಗರು ಸಂಶಯದಿಂದ ನೋಡುವಂತೆ ಮಾಡಿದೆ. ಭಾರತ ಜೋಡೋ ಕಾರ್ಯಕ್ರಮದ ಫ್ಲೆಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಕೈಬಿಟ್ಟಿರುವುದರ ಇಂದಿನ ಉದ್ದೇಶವೇನು? ಎನ್ನುವುದೇ ಈಗ ಬಹುದೊಡ್ಡ ಪ್ರಶ್ರ ಆಗಿದ್ದು, ಇದು ರಾಜಕೀಯ ಸವಾಲಾಗಿ ಪರಿಣಮಿಸಿದೆ.

Siddaramaiah Photo missing in DK shivakumar pre-meeting Flex

ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಜಿಲ್ಲೆಗೆ ಭೇಟಿ ನೀಡದಿದ್ದರೂ, ಅವರ ಭಾವಚಿತ್ರ ಹಾಕುವ ನಾಯಕರಿಗೆ ಈಗ ಏಕೆ ಸಿದ್ದರಾಮಯ್ಯ ಅವರ ಭಾವಚಿತ್ರದ ನೆನಪಾಗಲಿಲ್ಲ? ಕೆಪಿಸಿಸಿ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ಅವರ ಮಧ್ಯದ ರಾಜಕೀಯ ಭಿನ್ನಾಭಿಪ್ರಾಯ ಜೀವಂತಿಕೆಗೆ ಈ ಭಾವಚಿತ್ರ ಸಾಕ್ಷಿ ಆದಂತಿದೆ. ಈ ಸವಾಲುಗಳಿಗೆ ಜಿಲ್ಲಾ ಕಾಂಗ್ರೆಸ್ ಉತ್ತರಿಸಬೇಕಾಗಿದೆ. ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವಾಗ ಸಿದ್ದರಾಮಯ್ಯ ಅವರನ್ನು ಫ್ಲೆಕ್ಸ್‌ನಿಂದ ಕೈಬಿಡುವ ತಂತ್ರಕ್ಕೆ ಸಂಬಂಧಿಸಿ ಪಕ್ಷದಲ್ಲಿ ಗೊಂದಲಗಳು ಮತ್ತಷ್ಟು ತೀವ್ರಗೊಳ್ಳಲು ಕಾರಣವಾಗಿದೆ.

ಕಾಂಗ್ರೆಸ್‌ನಲ್ಲಿ ಶುರುವಾಯ್ತ ಫ್ಲೆಕ್ಸ್‌ ದೊಂಬರಾಟ?
ಈ ಘಟನೆ ಮೂಲಕ ಉಭಯ ನಾಯಕರ ಭಿನ್ನಾಭಿಪ್ರಾಯ ಈಗ ಜಿಲ್ಲೆ ಮತ್ತು ತಾಲೂಕುಗಳಿಗೂ ವಿಸ್ತರಿಸಿದೆ ಎನ್ನಲಾಗಿದೆ. ಸಿದ್ದರಾಮೋತ್ಸವ ಕಾರ್ಯಕ್ರಮ ಯಶಸ್ವಿಯಾದ ನಂತರ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಶಕ್ತಿ ಕುಗ್ಗಿಸಲು ವಿರೋಧಿ ಬಣ ಈ ರೀತಿಯ ತಂತ್ರ ನಡೆಸಿದೆಯೇ?. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಸಿದೆ. ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಕೋಕ್ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷರ ಮೆಚ್ಚಿಸುವ ಪ್ರಯತ್ನ ನಡೆದಿದೆಯೇ?. ಒಟ್ಟಾರೆಯಾಗಿ ಜಿಲ್ಲಾ ಕಾಂಗ್ರೆಸ್ ರಾಜ್ಯದ ಯಾವ ನಾಯಕತ್ವದ ಬಗ್ಗೆ ನಿಷ್ಠೆ ಹೊಂದಿದೆ ಎನ್ನುವ ಗೊಂದಲ ಪಕ್ಷದಲ್ಲಿ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇದು ಮುಂಬರುವ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಸ್ವರೂಪ ಪಡೆಯಲಿದೆ ಅನ್ನುವುದನ್ನು ಕಾದುನೋಡಬೇಕಿದೆ. ಮತ್ತು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣಗಳ ಮಧ್ಯೆ ಸಂಘರ್ಷಕ್ಕೆ ಅಖಾಡವಾಗಲಿದೆಯೇ? ಎನ್ನುವ ಹಲವು ಪ್ರಶ್ನೆಗಳನ್ನು ರಾಜಕೀಯ ವಲಯದಲ್ಲಿ ಗರಿಗೆದರಿವೆ.

English summary
Siddaramaiah photo missing in Raichur Bharat Jodo yatra pre-meeting flex led. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X