ರಾಯಚೂರು ಜಿಲ್ಲಾ ಸಾರಿಗೆ ಇಲಾಖೆಗೆ ಆರ್ಥಿಕ ಬಲ ತಂದ ಶಕ್ತಿ ಯೋಜನೆ

ರಾಯಚೂರು, ಆಗಸ್ಟ್‌ 10: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ರಾಯಚೂರು ಜಿಲ್ಲೆಯ ಸಾರಿಗೆ ಇಲಾಖೆಗೆ ಆರ್ಥಿಕ ಬಲ ತಂದಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಏಳು ಘಟಕಗಳಲ್ಲಿ ಮಹಿಳೆಯರಿಗೆ ಸಂಚಾರದ ಮಧ್ಯೆ ಅಲ್ಲಿಲ್ಲಿ ಕಿರಿಕಿರಿ , ಮಾತಿನ ಚಕಮಕಿ, ಗೊತ್ತಾಗದೆ ಅನ್ಯರಾಜ್ಯಕ್ಕೆ ತೆರಳುವ ಬಸ್‌ ಹತ್ತಿಗೊಂಡಾಗ ಪಟ್ಟ ಫಜೀತಿಯ ಮಧ್ಯೆಯೂ ಸಾರಿಗೆ ಇಲಾಖೆ ನಷ್ಟದಿಂದ ಚೇತರಿಸಿಕೊಳ್ಳುವಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಸಹಕಾರಿಯಾಗಿದೆ.

ಶಕ್ತಿ ಯೋಜನೆ ಜಾರಿಗೆ ಬಂದು ಎರಡು ತಿಂಗಳಾಗುತ್ತಿದ್ದು, ಸದ್ಯಕ್ಕೆ ಆರ್ಥಿಕ ಸಮಸ್ಯೆ ಎದುರಾಗಿಲ್ಲ ಎನ್ನುವ ನಿಟ್ಟುಸಿರು ಸಿಬ್ಬಂದಿಯಲ್ಲಿದೆ. 1973ರಲ್ಲಿ ಆಸ್ತಿತ್ವಕ್ಕೆ ಬಂದಿರುವ ರಾಯಚೂರು ಸಾರಿಗೆ ವಿಭಾಗದಲ್ಲಿ ರಾಯಚೂರಿನ ಎರಡು ಸೇರಿ ಒಟ್ಟು ಏಳು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ಜಿಲ್ಲೆಯ ಏಳು ಘಟಕಗಳಿಂದ ಸುಮಾರು ನಿತ್ಯ 40 ಲಕ್ಷದವರೆಗೆ ಹಣ ಸಂದಾಯವಾಗುತ್ತಿದ್ದರೂ ಅಲ್ಪ ನಷ್ಟದಲ್ಲಿದ್ದ ಜಿಲ್ಲೆಯ ಸಾರಿಗೆ ವಿಭಾಗಕ್ಕೆ ಸರ್ಕಾರದ ಯೋಜನೆಯಿಂದ ಲಾಭದತ್ತ ಮರಳುತ್ತಿದೆ.

Shakti Yojana Brought Financial Strength To Raichur Transport Department

ರಾಜ್ಯ ಸರ್ಕಾರ ಇದುವರೆಗೆ ಉಚಿತ ಪ್ರಯಾಣದಿಂದ ನಿಗಮಕ್ಕೆ ಬಾಕಿ ಇರುವ ಹಣ ಬಿಡುಗಡೆ ಮಾಡಿದ್ದು ಇಂದು ಅಥವಾ ನಾಳೆಯೊಳಗೆ ಸಿಬ್ಬಂದಿ ಖಾತೆಗೆ ವೇತನ ಜಮಾ ಆಗುವ ವಿಶ್ವಾಸದಲ್ಲಿದ್ದಾರೆ. ಜಿಲ್ಲೆಯ 883 ಗ್ರಾಮಗಳ ಪೈಕಿ 878 ಗ್ರಾಮಗಳಲ್ಲಿ ಸಾರಿಗೆ ಸೌಲಭ್ಯವಿದ್ದು ರಾಯಚೂರು ತಾಲ್ಲೂಕಿನ ಕುರ್ವಕುಲ, ಕುರ್ವಕುರ್ದಾ, ಅಗ್ರಹಾರ, ಅರಳಪ್ಪನ ಹುಡಾ ಮತ್ತು ದೇವದುರ್ಗದ ಸೂಲಗುಡ್ಡ ಗ್ರಾಮಗಳಿಗೆ ರಸ್ತೆಯ ಸಮಸ್ಯೆಯಿಂದ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಯಿಂದ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ.

ಒಂದು ವಿಭಾಗೀಯ ಕಚೇರಿ, ಕಾರ್ಯಾಗಾರ ಹೊಂದಿರುವ ರಾಯಚೂರು ಘಟಕದಲ್ಲಿ 2504 ಸಿಬ್ಬಂದಿಗಳನ್ನೊಳಗೊಂಡಿದ್ದು 588 ಮಾರ್ಗಗಳಲ್ಲಿ 638 ಬಸ್ ಗಳು. ಸರಾಸರಿ 2 ಲಕ್ಷ ಕಿಲೋಮೀಟರ್ ನಿತ್ಯ ಓಡಾಡುತ್ತಿವೆ. ಅಲ್ಲದೆ ನಿತ್ಯ 216 ಟ್ರಿಪ್ ಸಂಚಾರದ ವ್ಯವಸ್ಥೆ ಮಾಡಲಾಗಿದ್ದು ಈ ವರ್ಷದ ಎಪ್ರಿಲ್ ನಿಂದ ಜುಲೈ ಅ ಂತ್ಯದವರೆಗೆ ಕೆಕೆಆರ್ ಡಿಬಿಯಿಚಿದ 15 ಸೇರಿ 69 ಹೊಸ ಬಸ್ ಗಳು ಸೇರಿವೆ.

Shakti Yojana Brought Financial Strength To Raichur Transport Department

ಜಿಲ್ಲೆಯಲ್ಲಿ ಸಾರಿಗೆ ನಿಗಮದಿಂದ ಜೂ 11ರಂದು ಜಾರಿಗೆ ಬಂದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆ ಚೇತರಿಸಿಕೊಂಡಿದ್ದು, ಪ್ರತಿದಿನ ಪ್ರಯಾಣಿಕರ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ. ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರು , ಬಾಲಕಿಯರು ಹಾಗೂ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ.

ಕಳೆದ ಎರಡು ತಿಂಗಳಿಂದ ಸುಮಾರು 53 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು, ಪ್ರತಿ ದಿನ ಸರಾಸರಿ 85 ಸಾವಿರದಿಂದ 1 ಲಕ್ಷದವರೆಗೆ ಪ್ರಯಾಣ ಮಾಡಿದ್ದಾರೆ. ಅಲ್ಲದೆ ಮಹಿಳೆಯರ ಪ್ರಯಾಣದಿಂದ ಪ್ರತಿದಿನ 36 ಲಕ್ಷದ 78 ಸಾವಿರ ಆದಾಯ ಬರುತ್ತಿದ್ದರೂ ಬರೋಬ್ಬರಿ 19 ಕೋಟಿ 12 ಲಕ್ಷದ 50 ಸಾವಿರ ರೂಪಾಯಿ ಲಾಭ ಬಂದಿದೆ ಎಂದು ವಿಭಾಗೀಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ಮಾಡಿದ್ದಾರೆ.

ಪ್ರವಾಸೋದ್ಯಮ , ಧಾರ್ಮಿಕ ಕ್ಷೇತ್ರಗಳಿಗೆ, ಮಹಿಳೆಯರು ಹೆಚ್ಚೆಚ್ಚು ಭೇಟಿ ನೀಡಲು ಶಕ್ತಿ ಉಚಿತ ಪ್ರಯಾಣ ಅನುಕೂಲತೆ ಮಾಡಿದ್ದರಿಂದ ಆದಾಯ ತಂದಿದೆ. ಅಲ್ಲದೆ ನಿತ್ಯ ಜಿಲ್ಲೆಯ ವಿವಿಧ ದೇವಸ್ಥಾನ, ಪ್ರಾವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಅಲ್ಲಿನ ವ್ಯಾಪಾರ , ವಹಿವಾಟು ಚೇತರಿಕೆಗೂ ಕಾರಣವಾಗಿದೆ ಎನ್ನುವ ಲೆಕ್ಕಾಚಾರ ಹಾಕಲಾಗಿದೆ.

ಯೋಜನೆ ಜಾರಿಗೆ ಬಂದು ಸುಮಾರು ಎರಡು ತಿಂಗಳಾಗುತ್ತಿರುವುದರಿಂದ ಸದ್ಯ ಸಮಸ್ಯೆಯಾಗಿಲ್ಲ. ಆದರೆ ಈ ಉಚಿತ ಪ್ರಯಾಣದ ಹಣ ಪ್ರತಿದಿನ ತಿಂಗಳಿಗೊಮ್ಮೆ ಸಮಯಕ್ಕೆ ಸರಿಯಾಗಿ ಜಮಾ ಆಗದಿದ್ದರೆ ಸಿಬ್ಬಂದಿ ವೇತನ , ವಾಹನಗಳ ದುರಸ್ತಿ , ಇಂಧನ ಪೂರೈಕೆ ಮತ್ತಿತ್ತರ ಕೆಲಸಗಳಿಗೆ ಸಮಸ್ಯೆ ಉದ್ಭವಿಸುವ ಚಿಂತೆ ಸಿಬ್ಬಂದಿಗೆ ಕಾಡುತ್ತಿದೆ. ಈಗಾಗಲೇ ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಮಸ್ಯೆ ಎದುರಾಗಿದ್ದು ನಮ್ಮ ವಿಭಾಗಕ್ಕೆ ವಿವಿಧ ತೆರಿಗೆಗಳಲ್ಲಿ ವಿನಾಯಿತಿ ಇರುವುದರಿಂದ ಆ ನಿಗಮದಷ್ಟು ನಷ್ಟವಿಲ್ಲದ ಕಾರಣ ಯೋಜನೆಯ ಅಷ್ಟೂ ಹಣ ಒಮ್ಮೆ ಬಂದರೆ ಸಾಕು ಯಾವುದೇ ಆತಂಕವಿಲ್ಲದೆ ನಿಗಮ ಉತ್ತಮ ಹಾದಿಯಲ್ಲಿ ಸಾಗಲಿದೆ ಎನ್ನುವುದು ಸಿಬ್ಬಂದಿ ಮಾತಾಗಿದೆ.

ರಾಯಚೂರು ಹೊರತು ಪಡಿಸಿ ಉಳಿದ ತಾಲೂಕಿನ ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಡಿಪೋಗಳಿಂದ ಮಂತ್ರಾಲಯ, ಕರ್ನೂಲ್, ಗದ್ವಾಲ್, ಹೈದರಬಾದ್ ಬೋರ್ಡ ಇರುವ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅನ್ವಯಿಸದು. ರಾಯಚೂರಿನಿಂದ ಕಲಬುರಗಿ , ಯಾದಗಿರಿಗೆ ತೆರಳುವವರು ಮಾರ್ಗ ಮಧ್ಯೆ ಬರುವ ಕೃಷ್ಣಾ , ಹಿಂದುಪುರ ಗ್ರಾಮಗಳಿಗೆ ಹೋಗುವ , ಹೈದರಬಾದ್ , ಕರ್ನೂಲ್ ಗೆ ತೆರಳುವ ಮಹಿಳೆಯರಿಗೆ ಉಚಿತ ಟಿಕೆಟ್ ಸಿಗುವುದಿಲ್ಲ. ಇದು ನಿರ್ವಾಹಕರ ತಲೆನೋವಿಗೂ ಕಾರಣವಾಗಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೂ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ.

ಮಹಿಳೆಯರು ಮಾತು ಕೇಳುತ್ತಿಲ್ಲ. ಮಹಿಳೆಯರಿಗೆ ಪುರುಷ ಪ್ರಯಾಣಿಕರು ಧ್ವನಿಗೂಡಿಸುತ್ತಿರುವುದು ಗೋಜಿಗೆ ಕಾರಣವಾಗಿದೆ. ಒಟ್ಟಾರೆ ಶಕ್ತಿ ಯೋಜನೆಯಿಚಿದ ರಾಯಚೂರು ಸಾರಿಗೆ ವಿಭಾಗ ಸದ್ಯದ ಆರ್ಥಿಕ ಚೇತರಿಕೆಗೆ ಪೂರಕವಾಗಿರುವುದು ಅಲ್ಲಗಳೆಯುವಂತಿಲ್ಲ.

ರಾಯಚೂರು ವಿಭಾಗದಲ್ಲಿ ಶಕ್ತಿ ಯೋಜನೆಗಿಂತ ಮುಂಚೆ ಬರುತಿದ್ದ ಹಣೆದಲ್ಲಿ ಶೇಕಡಾ 50ರಷ್ಟು ನಗದು ಕಡಿಮೆಯಾಗಿದ್ದರೂ ,ಅದನ್ನು ಸರ್ಕಾರ ತುಂಬಿ ಕೊಡುವುದರಿಂದ ಸದ್ಯಕ್ಕೆ ಸಮಸ್ಯೆಯಾಗದು. ಸಕಾಲಕ್ಕೆ ಹಣ ಬಿಡುಗಡೆಯಾದರೆ ಸಿಬ್ಬಂದಿ ವೇತನ , ಬಸ್‌ಗಳಿಗೆ ಇಂಧನ ಪೂರೈಕೆ, ದುರಸ್ತಿ , ಸಾಮಾಗ್ರಿ ಪೂರೈಕೆಗೆ ತೊಂದರೆ ಆಗದು ಎಂದು ಸಾರಿಗೆ ನೌಕರರ ಸಂಘದ ಕಾರ್ಯದರ್ಶಿ ಶ್ರೀಶೈಲರೆಡ್ಡಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+