ರಾಯಚೂರು : ಬಿಜೆಪಿ ಭಿನ್ನಮತ, ಸಿದ್ದು ಬಂಡಿ ಜೆಡಿಎಸ್‌ಗೆ

By: ರಾಯಚೂರು ಪ್ರತಿನಿಧಿ
Subscribe to Oneindia Kannada

ರಾಯಚೂರು, ಫೆಬ್ರವರಿ 09 : ಲಿಂಗಸುಗೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಸಿದ್ದು ಬಂಡಿ ಜೆಡಿಎಸ್ ಸೇರಲಿದ್ದಾರೆ. ಮಾನಪ್ಪ ವಜ್ಜಲ್ ಬಿಜೆಪಿ ಸೇರಿದ ಬಳಿಕ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ.

ಕ್ಷೇತ್ರ ಪರಿಚಯ : ಲಿಂಗಸಗೂರು ಕ್ಷೇತ್ರದಲ್ಲಿ ಯಾರಿಗೆ ಜಯ?

ಬಿಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾಗಿದ್ದ ಸಿದ್ದು ಬಂಡಿ ಜ.22ರಂದು ಬಿಜೆಪಿ ತೊರೆದಿದ್ದರು. ಈಗ ಅವರು ಜೆಡಿಎಸ್ ಸೇರಲು ಮುಂದಾಗಿದ್ದು, ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ, ಬಂಡಿ ರಾಜೀನಾಮೆ

ಸಿದ್ದು ಬಂಡಿ ಲಿಂಗಸುಗೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕ್ಷೇತ್ರದ ಶಾಸಕ, ಜೆಡಿಎಸ್ ನಾಯಕ ಮಾನಪ್ಪ ವಜ್ಜಲ್ ಬಿಜೆಪಿ ಸೇರಿದ್ದು, ಅವರಿಗೆ ಟಿಕೆಟ್ ಖಚಿತ ಎಂದು ತಿಳಿದುಬಂದಿದೆ.

Raichur : Siddu Bandi set to join JDS

ಮಾನಪ್ಪ ವಜ್ಜಲ್ ಬಿಜೆಪಿ ಸೇರಿದ ಬಳಿಕ ಸಿದ್ದು ಬಂಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಸಿದ್ದು ಬಂಡಿ ಜೆಡಿಎಸ್ ಸೇರುವ ನಿರ್ಧಾರ ಕೈಗೊಂಡಿದ್ದಾರೆ.

ವಜ್ಜಲ್, ಪಾಟೀಲ್ ಜೆಡಿಎಸ್‌ ತೊರೆದ ಕಾರಣ ಬಹಿರಂಗ

ರಾಯಚೂರಿನಲ್ಲೂ ರಾಜೀನಾಮೆ : ರಾಯಚೂರಿನಲ್ಲಿಯೂ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತಿ ಸದಸ್ಯ ವೆಂಕಟೇಶ ಪೂಜಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೆಂಕಟೇಶ ಪೂಜಾರಿ ಅವರು ಜೆಡಿಎಸ್ ಸೇರಲಿದ್ದು, ದೇವದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

venkatesha poojari

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP executive committee member and Raichur district leader Siddu Bandi who quit the BJP recently will join JD (S). Siddu Bandi quit the BJP after Manappa Vajjal joined the party.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ