• search
 • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿಲ್ಲದೆ ನಲ್ಲಿ ಹಾಕುವುದು ಪ್ರಯೋಜನವೇನು? ರಾಯಚೂರು ಜನರ ಪ್ರಶ್ನೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜೂ30: ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ನೀರಿನ ಸಂಪರ್ಕ ಒದಗಿಸುವುದಕ್ಕಾಗಿ ಜಾರಿಗೆ ತಂದಿರುವ 'ಜಲ ಜೀವನ್‌ ಮಿಷನ್‌' ಯೋಜನೆ ಕಾಮಗಾರಿಗಳನ್ನು ಉದ್ದೇಶಪೂರ್ವಕ ನಿಧಾನಗೊಳಿಸಲಾಗುತ್ತಿದೆ. ಕಾಮಗಾರಿ ವಿಳಂಬ ಹಾಗೂ ನಿಧಾನವಾಗಿ ನಡೆಯುವ ಸರ್ಕಾರಿ ಕೆಲಸಗಳ ವಿರುದ್ಧ ಸಂಘ-ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಧ್ವನಿ ಎತ್ತುವುದು ಸಾಮಾನ್ಯ. ಆದರೆ, ಜಲಜೀವನ ಮಿಷನ್‌ ಕಾಮಗಾರಿಗಳನ್ನು ಮಾತ್ರ ನಿಧಾನಗೊಳಿಸಲು ಜನರೇ ಕೇಳುತ್ತಿದ್ದಾರೆ. ನೀರಿನ ಮೂಲವಿಲ್ಲದೆ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದರೆ, ಕೆಲವೇ ತಿಂಗಳುಗಳಲ್ಲಿ ಅದು ಹಾಳಾಗಬಹುದು ಎನ್ನುವ ಸಂಗತಿಯು ಈಗ ಪ್ರಸ್ತಾಪಕ್ಕೆ ಬಂದಿದೆ.

ಜಲಜೀವನ್ ಮಿಷನ್‌ ಯೋಜನೆಯಡಿ ಎಲ್ಲ ಮನೆಗಳಿಗೂ ಮೊದಲು ನಲ್ಲಿ ಅಳವಡಿಸಲು ಆದ್ಯತೆ ವಹಿಸಲಾಗಿದೆ. ಆನಂತರ ಜಲಧಾರೆ ಯೋಜನೆ ಮೂಲಕ ನಾರಾಯಣಪುರ ಜಲಾಶಯದಿಂದ ಪ್ರತಿ ಗ್ರಾಮಕ್ಕೂ ನೀರು ಒದಗಿಸುವುದಕ್ಕೆ ಯೋಜಿಸಲಾಗಿದೆ. ಆದರೆ, ಜಲಧಾರೆ ಯೋಜನೆ ಇನ್ನೂ ಆರಂಭ ಹಂತದಲ್ಲಿದೆ. ಕಾಮಗಾರಿ ಜಾರಿಗಾಗಿ ಇನ್ನೂ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ.

ರಾಯಚೂರು ಜಿಲ್ಲಾಧಿಕಾರಿಯ ಹೆಸರಿನಲ್ಲಿಯೇ ಆನ್‌ಲೈನ್ ವಂಚಕರ ಕೈಚಳಕರಾಯಚೂರು ಜಿಲ್ಲಾಧಿಕಾರಿಯ ಹೆಸರಿನಲ್ಲಿಯೇ ಆನ್‌ಲೈನ್ ವಂಚಕರ ಕೈಚಳಕ

43 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಪೂರ್ಣ

43 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಪೂರ್ಣ

ಒಂದು ವೇಳೆ ಜಲಜೀವನ್ ಮಿಷನ್‌ ಯೋಜನೆ ಕ್ಷಿಪ್ರವಾಗಿ ಜಾರಿಗೊಳಿಸಿ, ಮನೆಗಳಿಗೆಲ್ಲ ನಲ್ಲಿ ಅಳವಡಿಸಿದರೆ ಎರಡು ವರ್ಷಗಳವರೆಗೂ ಅದು ಉಳಿದುಕೊಳ್ಳುವುದೇ ಎನ್ನುವ ಪ್ರಶ್ನೆ ಎದುರಾಗಿದೆ. ಜೀವಧಾರೆ ಯೋಜನೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಇನ್ನೂ ಎರಡು ವರ್ಷಗಳಾದರೂ ಬೇಕಾಗಬಹುದು. ಜಲ ಜೀವನ ಮಿಷನ್‌ ಮೊದಲ ಹಂತದಲ್ಲಿ 311 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. 83,480 ಮನೆಗಳಿಗೆ ಪೈಪ್‌ಲೈನ್‌ ಅಳವಡಿಸಿ ನಲ್ಲಿ ಸಂಪರ್ಕ ಒದಗಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು ₹211 ಕೋಟಿ ವ್ಯಯಿಸಲಾಗುತ್ತಿದೆ. 43 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ 262 ಗ್ರಾಮಗಳ ಮನೆಗಳಿಗೆ ಪೈಪ್‌ಲೈನ್‌ ಮತ್ತು ನಲ್ಲಿ ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ.

ಯಡಿಯೂರಪ್ಪ, ಡಿಕೆ ಶಿವಕುಮಾರ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಪ್ರಜ್ವಲ್ ರೇವಣ್ಣಯಡಿಯೂರಪ್ಪ, ಡಿಕೆ ಶಿವಕುಮಾರ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಪ್ರಜ್ವಲ್ ರೇವಣ್ಣ

₹124 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ

₹124 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ

ಅರ್ಧಕ್ಕೂ ಹೆಚ್ಚು ಕಾಮಗಾರಿಗಳ ಡಿಪಿಆರ್ ಅನುಮೋದನೆಗೊಂಡಿದ್ದು, ಕಾಮಗಾರಿಯೂ ಆರಂಭವಾಗಿವೆ. ಒಟ್ಟು ₹124 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇನ್ನೂ ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಪೈಪ್‌ಲೈನ್‌ ಅಳವಡಿಸಲು, ಡಿಪಿಆರ್ ಸಿದ್ಧಪಡಿಸುವುದು ಬಾಕಿ ಇದ್ದು, ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಮೊದಲ ಹಂತದ ಕಾಮಗಾರಿಗಳೇ ಇನ್ನೂ ಮುಗಿದಿಲ್ಲ. ಅಲ್ಲದೆ, ನೀರಿಲ್ಲದೆ ನಲ್ಲಿ ಹಾಕುವುದು ಪ್ರಾಯೋಗಿಕವಲ್ಲ ಎನ್ನುವ ಮಾತುಗಳು ಶುರುವಾಗಿವೆ.

ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರು, ‘ಸದ್ಯ ನನ್ನ ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಲ್ಲಿ ಜಲಜೀವನ್ ಮಿಷನ್‌ ಯೋಜನೆ ಜಾರಿ ಮಾಡುವುದು ಬೇಡ. ನೀರು ಒದಗಿಸುವುದಕ್ಕೆ ವ್ಯವಸ್ಥೆಯಾದ ಮೇಲೆಯೇ ನಲ್ಲಿ ಹಾಕುವ ಕಾರ್ಯ ಆರಂಭಿಸಿ' ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಲ್ಲಿ ಮೊದಲು ನೀರಿನ ವ್ಯವಸ್ಥೆ ಮಾಡಬೇಕೆ ಎನ್ನುವ ಪ್ರಶ್ನೆಗಳು

ನಲ್ಲಿ ಮೊದಲು ನೀರಿನ ವ್ಯವಸ್ಥೆ ಮಾಡಬೇಕೆ ಎನ್ನುವ ಪ್ರಶ್ನೆಗಳು

ಜಲಧಾರೆ ಯೋಜನೆ ಜಾರಿಗೆ ರಾಜ್ಯ ಸರ್ಕಾರವು 2021 ಜೂನ್‌ನಲ್ಲಿ ಅನುಮೋದನೆ ನೀಡಿದೆ. ಇದಕ್ಕಾಗಿ ₹1,988 ಕೋಟಿ ಅನುದಾನ ಒದಗಿಸಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದ 1,406 ಗ್ರಾಮಗಳಿಗೆ ನೀರು ಪೂರೈಸಲು ಯೋಜಿಸಿದ್ದು, ಇದರಲ್ಲಿ ಏಳು ತಾಲ್ಲೂಕು ಕೇಂದ್ರಗಳು ಒಳಗೊಂಡಿವೆ. ಯೋಜನೆಯನ್ನು ವಿನ್ಯಾಸಗೊಳಿಸಿ, ಕಾಮಗಾರಿ ಪೂರ್ಣಗೊಳಿಸಿ, ನಿರ್ವಹಣೆ ಮಾಡಿದ ನಂತರ ಅದನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವ ಸಾಮರ್ಥ್ಯವಿರುವ ಕಂಪೆನಿಗೆ ಈ ಕಾಮಗಾರಿ ಗುತ್ತಿಗೆ ನೀಡಲಾಗುತ್ತದೆ.

ಜಿಲ್ಲೆಯಾದ್ಯಂತ ಎಲ್ಲ ಮನೆಗಳಿಗೂ ಸಮರ್ಪಕವಾಗಿ ನೀರು ಒದಗಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಸಹಯೋಗದಲ್ಲಿ ಜಲಧಾರೆ ಮತ್ತು ಜಲ ಜೀವನ್‌ ಮಿಷನ್‌ ಯೋಜನೆ ಜಾರಿಗೊಳಿಸುತ್ತಿವೆ. ಆದರೆ, ನಲ್ಲಿ ಮೊದಲು ಹಾಕಬೇಕೆ ಅಥವಾ ಮೊದಲು ನೀರಿನ ವ್ಯವಸ್ಥೆ ಮಾಡಬೇಕೆ ಎನ್ನುವ ಪ್ರಶ್ನೆಗಳು ಶುರುವಾಗಿವೆ. ಎರಡೂ ಯೋಜನೆ ಏಕಕಾಲಕ್ಕೆ ಪ್ರಾರಂಭಿಸಿದ್ದರೆ, ಈ ಸಮಸ್ಯೆ ಇರುತ್ತಿರಲಿಲ್ಲ.ಪ್ರತಿ ಮನೆಗೂ ಶುದ್ಧ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನ ಕಾರ್ಯ ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ. ಗುತ್ತಿಗೆದಾರರ ವಿಳಂಬ ನೀತಿ ಹಾಗೂ ಗ್ರಾಮಸ್ಥರು ವಂತಿಕೆ ಕೊಡಬೇಕು ಎನ್ನುವ ಅಂಶ ಯೋಜನೆಗೆ ಅಡ್ಡಿಯಾಗಿದೆ.

ಯೋಜನೆಗೆ ಕೇಂದ್ರ-ಸರ್ಕಾರ ತಲಾ ಶೇಕಡ 37.5ರಷ್ಟು ಅನುದಾನ

ಯೋಜನೆಗೆ ಕೇಂದ್ರ-ಸರ್ಕಾರ ತಲಾ ಶೇಕಡ 37.5ರಷ್ಟು ಅನುದಾನ

ಮನೆ ಮನೆಗೆ ಸಂಪರ್ಕ ಕಲ್ಪಿಸುವುದು ಜಲ ಜೀವನ ಮಿಷನ್ ಯೋಜನೆಯ ಉದ್ದೇಶವಾಗಿದೆ. ಯೋಜನೆಗೆ ಕೇಂದ್ರ ಹಾಗೂ ಸರ್ಕಾರ ತಲಾ ಶೇಕಡ 37.5ರಷ್ಟು ಅನುದಾನ ಕೊಡುತ್ತವೆ. ಉಳಿದ ಶೇಕಡ ೨೫ರಷ್ಟು ಅನುದಾನದಲ್ಲಿ ಶೇಕಡ 15ರಷ್ಟು ಅನುದಾನವನ್ನು ಗ್ರಾಮ ಪಂಚಾಯಿತಿಗಳು ತಮ್ಮ ಪಂಚಾಯಿತಿ ೧೫ನೇ ಹಣಕಾಸು ಆಯೋಗದ ಅಡಿ ಪಾವತಿಸಬೇಕು. ಉಳಿದ ಶೇಕಡ 10ರಷ್ಟನ್ನು ಗ್ರಾಮಸ್ಥರು ವಂತಿಕೆಯಾಗಿ ನೀಡಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಹಕಾರ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಮಾಡುವ ಜನರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ನಲ್ಲಿಗೆ ಮೀಟರ್ ಅಳವಡಿಸಿ ಹಣ ಕೇಳಿದರೆ ಹೇಗೆ? ಕೂಲಿ ಕಾರ್ಮಿಕರಿಗೆ ಮನೆಗಳ ವಿದ್ಯುತ್ ಬಿಲ್ ಪಾವತಿಸುವುದೇ ಕಷ್ಟವಾಗುತ್ತಿದೆ. ಇನ್ನು ಪ್ರತಿ ತಿಂಗಳು ನೀರಿಗೂ ಹಣ ಪಾವತಿಸಿ ಅಂದರೆ ಕಷ್೧ಟವಾಗಲಿದೆ ಎಂದು ಸಗಮಕುಂಟ ಗ್ರಾಮದ ನಿವಾಸಿ ಸುರೇಶ್ ಅವರು ವಿಷಾದ ವ್ಯಕ್ತಪಡಿಸುತ್ತಾರೆ.

Recommended Video

   ಉದಯಪುರ್ ಟೈಲರ್ ಹತ್ಯೆ ನಂತರ ಕರ್ನಾಟಕದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ | Oneindia Kannada
   English summary
   people are asking to slow down only the jala jeevan mission works implemented to provide water connection to every house in the rural areas. It has now come to the fore that if taps are connected to houses without a source of water, it may spoil within a few months.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X