ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು: ಬೀದಿಗಳಲ್ಲಿ ಆವರಿಸುವ ಕತ್ತಲು- ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಕಿಡಿ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ನವೆಂಬರ್ 15: ನಗರದ ಹಲವು ಬಡಾವಣೆ ಮಾರ್ಗಗಳಲ್ಲಿ ಸಮರ್ಪಕವಾಗಿ ಬೀದಿ ದೀಪಗಳಿಲ್ಲದೆ ರಾತ್ರಿ‌ ಹೊತ್ತಿನಲ್ಲಿ ಜನರು ನಿರ್ಭಯದಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮಧ್ಯ ರಾತ್ರಿ ಬೈಕ್ ಹಾಗೂ ಕಾರುಗಳಲ್ಲಿ ಮನೆ ತಲುಪುವುದು ಕೆಲವು ಬಡಾವಣೆಗಳಲ್ಲಿ ಸವಾಲಾಗಿದೆ.

ಕತ್ತಲು ಆವರಿಸಿದ ರಸ್ತೆ ಮಧ್ಯೆದಲ್ಲೇ ಬೀದಿ ದನಗಳ ಗುಂಪು, ನಾಯಿಗಳ ಗುಂಪು ಹಾಗೂ ಹಂದಿಗಳು ಬಿಡಾರ ಹೂಡುತ್ತಿವೆ. ಕಾರು, ಬೈಕ್ ಸವಾರರು ಆತಂಕದಲ್ಲೇ ಅವುಗಳನ್ನು ಎದುರಿಸಬೇಕು. ಇದ್ದಕ್ಕಿದ್ದಂತೆ ಬೀದಿನಾಯಿಗಳು ಮುಗಿಬೀಳುತ್ತವೆ.

15 ದಿನಗಳ ಅಂತರದಲ್ಲಿ 2 ಬಾರಿ ಕುಸಿದ ಕಾಲುವೆ, ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ15 ದಿನಗಳ ಅಂತರದಲ್ಲಿ 2 ಬಾರಿ ಕುಸಿದ ಕಾಲುವೆ, ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಬಡಾವಣೆ ಮಾರ್ಗದಲ್ಲಿ ವಿದ್ಯುತ್ ಕಂಬಗಳಿದ್ದರೂ ಎಲ್ಲ ಕಡೆಗೂ ದೀಪಗಳನ್ನು ಅಳವಡಿಸಿಲ್ಲ. ಕೆಲವು ಕಡೆ ದೀಪಗಳು ಹಾಳಾಗಿದ್ದರೂ ಅದನ್ನು ಗಮನಿಸಿ ಬದಲಿಸುತ್ತಿಲ್ಲ. ಜವಾಬ್ದಾರಿ ಇದ್ದವರೂ ಕಣ್ತೆರೆದು ನೋಡುತ್ತಿಲ್ಲ. ಜವಾಬ್ದಾರಿ ಇದ್ದವರ ವಿರುದ್ಧ ಕ್ರಮವಹಿಸಬೇಕಾಗಿರುವ ನಗರಸಭೆ ಅಧಿಕಾರಿಗಳು, ವಾರ್ಡ್ ಸದಸ್ಯರು ಮೌನ ವಹಿಸುತ್ತಿದ್ದಾರೆ. ಹೀಗಾಗಿ ಜನರು ಅನುಭವಿಸುವ ಸಂಕಷ್ಟಕ್ಕೆ ಪರಿಹಾರ ಎಂಬುದೇ ಇಲ್ಲದಂತಾಗಿದ್ದು, ವ್ಯವಸ್ಥೆ ವಿರುದ್ಧ ಜನರು ಹಿಡಿಶಾಪ ಹಾಕುವಂತಾಗಿದೆ.

ಆಶಾಪೂರ ಮಾರ್ಗದ ಅಧಿತಿ ಆಸ್ಪತ್ರೆಯಿಂದ ಎಫ್‌ಸಿಐ ಗೋದಾಮುವರೆಗೂ ಮುಖ್ಯರಸ್ತೆ, ಅಕ್ಕಪಕ್ಕದ ಬಡಾವಣೆಗಳಲ್ಲಿ, ಸಿಯಾತಾಲಾಬ್‌, ಮಡ್ಡಿಪೇಟೆ, ಹುಂಡೇಕಾರ್‌ ಕಾಲೋನಿ, ಎಲ್‌ಬಿಎಸ್‌ ನಗರದ ಈಶ್ವರ ದೇವಸ್ಥಾನದ ಪಕ್ಕದಲ್ಲಿ, ತೋಟದ‌‌ ಬಾವಿ ರಸ್ತೆ, ಮಾಣಿಕಪ್ರಭು ದೇವಸ್ಥಾನದ ಮಾರ್ಗ. ಸೇರಿದಂತೆ ಸಾಕಷ್ಟು ಬಡಾವಣೆಗಳ ಉಪ‌ಮಾರ್ಗಗಳಲ್ಲಿ ಬೀದಿ ದೀಪಗಳು ಇಲ್ಲದಿರುವುದರಿಂದ ಕತ್ತಲು ಆವರಿಸಿಕೊಳ್ಳುತ್ತದೆ.

ರಾಯಚೂರು ಜಿಲ್ಲೆಯಲ್ಲಿ ಚರ್ಮಗಂಟು ರೋಗ, ಜಾನುವಾರುಗಳ ಸಾವಿನ ಸಂಖ್ಯೆ ಹೆಚ್ಚಳರಾಯಚೂರು ಜಿಲ್ಲೆಯಲ್ಲಿ ಚರ್ಮಗಂಟು ರೋಗ, ಜಾನುವಾರುಗಳ ಸಾವಿನ ಸಂಖ್ಯೆ ಹೆಚ್ಚಳ

ಭಯದಲ್ಲೇ ಓಡಾಡುವ ಮಹಿಳೆಯರು

ಭಯದಲ್ಲೇ ಓಡಾಡುವ ಮಹಿಳೆಯರು

ಬೀದಿಗಳಲ್ಲಿ ಸಮರ್ಪಕ ದೀಪದ ವ್ಯವಸ್ಥೆಯಿಲ್ಲದ ಕಾರಣ ನಸುಕಿನಲ್ಲಿ ವಾಯುವಿಹಾರಕ್ಕೆ ತೆರಳುವವರು ಹಿಂದೇಟು ಹಾಕುವ ಸ್ಥಿತಿ ಇದೆ. ಅದರಲ್ಲೂ ಮಹಿಳೆಯರು, ಯುವತಿಯರು ಭಯದಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ. ಬೀದಿನಾಯಿಗಳ ಉಪಟಳ ಒಂದು ಕಡೆಯಾದರೆ, ನಗರಸಭೆ ನಿರ್ಲಕ್ಷ್ಯವೂ ಜನರನ್ನು ಬಾಧಿಸುತ್ತಿದೆ. ದೂರುಗಳನ್ನು ನೀಡುವುದಕ್ಕೆ ನಗರಸಭೆಯಿಂದ ವ್ಯವಸ್ಥೆ ಮಾಡಲಾಗಿದೆ. ಆದರೆ, ದೂರು ಪಡೆದು‌ ಸ್ಪಂದಿಸುವ ವ್ಯವಸ್ಥೆ ಸಮರ್ಪಕವಾಗಿಲ್ಲ. ದೂರು ಕೊಟ್ಟವರೆ ಮತ್ತೆ ಅಲೆದಾಡಬೇಕಾಗಿದೆ.

ರಾಯಚೂರು ನಗರದ ಬಡಾವಣೆಗಳಲ್ಲಿ ಮೂಲಸೌಕರ್ಯ ಸಮಸ್ಯೆಯಾದಾಗ ಯಾರಿಗೆ ದೂರು ಕೊಡಬೇಕು ಎಂದು ಜನರು ಕೇಳುತ್ತಿದ್ದಾರೆ. ಬಡಾವಣೆಯ ಯಾವ ಮೂಲೆಯಲ್ಲೂ ಸಂಪರ್ಕಿಸುವ ಸಂಖ್ಯೆಗಳಿರುವ, ವಾರ್ಡ್ ಸದಸ್ಯರ ವಿವರ ಇರುವ ಫಲಕಗಳನ್ನು ಹಾಕಿಲ್ಲ.

9 ಲಕ್ಷ ರೂ ಬಿಡುಗಡೆಯಾದರ ಸಮರ್ಪಕ ಅಳವಡಿಕೆಯಾಗಿಲ್ಲ

9 ಲಕ್ಷ ರೂ ಬಿಡುಗಡೆಯಾದರ ಸಮರ್ಪಕ ಅಳವಡಿಕೆಯಾಗಿಲ್ಲ

ನಗರದ ಗಡಿಯಾರ, ಬಸವ ಸಾಗರ, ಬಸ್‍ ನಿಲ್ದಾಣ ವೃತ್ತ ಹಾಗೂ ಬಸ್‍ ನಿಲ್ದಾಣದಿಂದ ಅಂಚೆ ಕಚೇರಿ, ಕಲಬುರ್ಗಿ ರಸ್ತೆ ಹೊರತು ಪಡಿಸಿದರೆ ಉಳಿದ ಪ್ರಮುಖ ರಸ್ತೆಗಳಲ್ಲಿ ಅಲ್ಲೊಂದು, ಇಲ್ಲೊಂದು ಮಿಣಕುವ ಲೈಟಿಂಗ್‍ ಗುರುತಿಸಿಯೆ ಮನೆಗಳಿಗೆ ತೆರಳುವ ಸ್ಥಿತಿ ಬಂದೊದಗಿದೆ. ಕೆಲ ತಿಂಗಳ ಹಿಂದೆ 9 ಲಕ್ಷ ರೂಗಳಿಗೆ ವಿವಿಧ ಬಗೆಯ ಬಲ್ಬ್‌ ಟೆಂಡರ್‍ ಆಗಿದ್ದರು ಕೂಡ ಸಮರ್ಪಕ ಅಳವಡಿಕೆ ಸಾಧ್ಯವಾಗಿಲ್ಲ. ಸದಸ್ಯರ ಆಂತರಿಕ ಒತ್ತಡಗಳಿಗೆ ಮಣಿದ ಪುರಸಭೆ ಆಡಳಿತ ಹೆಚ್ಚುವರಿಯಾಗಿ 4 ಲಕ್ಷ ರೂ. ವಿದ್ಯುತ್‍ ಸಾಮಗ್ರಿ ಖರೀದಿ ಮಾಡಿದೆ. ಈ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದೆ ಇಷ್ಟೊಂದು ಕಗ್ಗತ್ತಲೆಗೆ ಕಾರಣ ಎಂದು ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆ ವ್ಯಾಪ್ತಿಯ ವಾರ್ಡ್‌ ಮತ್ತು ಪ್ರಮುಖ ರಸ್ತೆಗಳಲ್ಲಿ ಸಮರ್ಪಕ ವಿದ್ಯುತ್‍ ಬಲ್ಬ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಸದಸ್ಯರ ಬೇಡಿಕೆ ಆಧರಿಸಿ ಹೆಚ್ಚುವರಿ ಬಲ್ಬ್‌ ಕೂಡ ಖರೀದಿಸಿದ್ದು ನಿಜ. ವಿದ್ಯುತ್‍ ವಿಭಾಗದ ನೌಕರರನ್ನು ಸಂಪರ್ಕಿಸಿ ಮುಖ್ಯ ರಸ್ತೆಗಳಲ್ಲಿ ಕನಿಷ್ಠ ಬೆಳಕು ಇರುವಂತೆ ನೋಡಿಕೊಳ್ಳಲಾಗುವುದು ಎಂದು ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಹೇಳಿದರು.

ಟಾರ್ಚ್‌ ಬೆಳಕಿನಲ್ಲೆ ಜನರ ತಿರುಗಾಟ

ಟಾರ್ಚ್‌ ಬೆಳಕಿನಲ್ಲೆ ಜನರ ತಿರುಗಾಟ

ಸಿಂಧನೂರು ಪಟ್ಟಣ ಕೆಲವು ವಾರ್ಡ್‌ನ ಜನರು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ವಾರ್ಡ್ ನಂ. 31ರ ವ್ಯಾಪ್ತಿಗೆ ಬರುವ ಏಳು ರಾಗಿ ಕ್ಯಾಂಪಿಗೆ ಸಂಜೆಯಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರು ಕತ್ತಲಿನಲ್ಲಿಯೇ ಸಂಚರಿಸಬೇಕಾದ ಸ್ಥಿತಿಯಿದೆ. ಪಟ್ಟಣದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಏಳುರಾಗಿ ಕ್ಯಾಂಪಿಗೆ ಸಿಂಧನೂರು-ಮಸ್ಕಿ ರಾಜ್ಯ ಹೆದ್ದಾರಿಯ ಕೂಡು ರಸ್ತೆಯಿಂದ ಹೋಗಬೇಕು. ಆದರೆ ರಸ್ತೆ ಡಾಂಬರೀಕರಣ ಮಾಡಿಲ್ಲ. ಮುರಂ ರಸ್ತೆಯೆಲ್ಲಾ ಸಂಪೂರ್ಣ ಹದಗೆಟ್ಟಿದೆ. ಮುಖ್ಯರಸ್ತೆಯಿಂದ ಕ್ಯಾಂಪಿನವರೆಗೆ 1 ಕಿ.ಮೀ ವರೆಗೂ ವಿದ್ಯುತ್ ದೀಪಗಳೇ ಇಲ್ಲ. ಮುರಂ ರಸ್ತೆಯ ಅಕ್ಕಪಕ್ಕ ಹೊಲಗಳಿದ್ದು, ಹುಳ-ಉಪ್ಪಡಿಗಳು ತಿರುಗಾಡುತ್ತವೆ. ಹೀಗಾಗಿ ರಾತ್ರಿ ಸಮಯದಲ್ಲಿ ಮಹಿಳೆಯರು, ವೃದ್ದರು ಮತ್ತು ಸಾರ್ವಜನಿಕರು ಬೈಕ್‌ ಲೈಟ್, ಮೊಬೈಲ್ ಟಾರ್ಚ್ ಹಾಕಿಕೊಂಡು ತಿರುಗಾಡುವ ಪರಿಸ್ಥಿತಿಯಿದೆ.

ಇನ್ನೂ ಕ್ಯಾಂಪಿನ ಒಳರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿಗೆ ಲೈಟ್ಗಸಳನ್ನು ಅಳವಡಿಸಿಲ್ಲ. ಈ ಕುರಿತು ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಕ್ಯಾಂಪಿನ ಪಾರ್ವತಿ, ಲಕ್ಷ್ಮಿ, ಶಾರದಾ, ಶರಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರೈಕೆ ಪ್ರಮಾಣ ಹೆಚ್ಚಿಸಲು ಮನವಿ

ಪೂರೈಕೆ ಪ್ರಮಾಣ ಹೆಚ್ಚಿಸಲು ಮನವಿ

ಮಾನ್ವಿ ಪುರಸಭೆಯ ವತಿಯಿಂದ ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಎಲ್ಲಾ ವಾರ್ಡ್‌ಗಳಲ್ಲಿ ವಿದ್ಯುದ್ದೀಪಗಳ ಅಳವಡಿಕೆ, ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಪಟ್ಟಣದ 1 ಮತ್ತು 2ನೇ ವಾರ್ಡ್‌ಗಳಲ್ಲಿ ವಿದ್ಯುತ್ ಕಂಬಗಳ ಸಂಖ್ಯೆ ಹೆಚ್ಚಿದೆ. ಪುರಸಭೆ ವತಿಯಿಂದ ಎರಡು ಮೂರು ತಿಂಗಳಿಗೊಮ್ಮೆ 10-15 ವಿದ್ಯುದ್ದೀಪಗಳನ್ನು ಪೂರೈಸುವುದು ಇಲ್ಲಿ ಸಾಕಾಗುವುದಿಲ್ಲ. 1ನೇ ವಾರ್ಡ್‌ನಲ್ಲಿ 300ಕ್ಕೂ ಅಧಿಕ ವಿದ್ಯುತ್ ಕಂಬಗಳಿವೆ. ಕಾರಣ ಈ ವಾರ್ಡಿಗೆ ಹೆಚ್ಚಿನ ಸಂಖ್ಯೆಯ ವಿದ್ಯುದ್ದೀಪಗಳನ್ನು ಪೂರೈಸಬೇಕು ಎಂಬುದು ಪುರಸಭೆಯ ಸದಸ್ಯ ಶರಣಗೌಡ ಅವರ ಒತ್ತಾಯವಾಗಿದೆ.

English summary
People from many places in Raichur city suffer Without adequate Street Lights. School children, and women are fearful to walking at night time,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X