ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ್ ಕುಮಾರ್ ಹೆಗಡೆ ರೌಡಿ ವರ್ತನೆ: ಸಿದ್ದರಾಮಯ್ಯ ಟೀಕೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಡಿಸೆಂಬರ್ 16 : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ರೌಡಿಗಳ ರೀತಿ ಮಾತಾಡುತ್ತಾರೆ. ರೌಡಿ ಥರ ಮಾತಾಡುವುವವರು ರಾಜಕಾರಣಕ್ಕೆ ಲಾಯಕ್ಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಯಚೂರಿನ ಯರಮರಸ್ ಬಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಶನಿವಾರ ಮಾತನಾಡಿದ ಅವರು, ಬೇಜವಾಬ್ದಾರಿಯಾಗಿ ಮಾತಾಡಬಾರದು, ಇದನ್ನು ಯಾರೂ ಒಪ್ಪಲ್ಲ, ಕೆ.ಎಸ್.ಈಶ್ವರಪ್ಪಗೆ ಯಾವ ಸ್ವಾಭಿಮಾನ ಇದೆಯಾ, ಯಾವ ವಿಚಾರಕ್ಕೆ ಈಶ್ವರಪ್ಪ ಅವರಿಗೆ ಬದ್ಧತೆ ಇದೆ ಎಂದರು.

ಸಿದ್ದರಾಮಯ್ಯನದ್ದು ರಾಕ್ಷಸ ಮುಖ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಸಿದ್ದರಾಮಯ್ಯನದ್ದು ರಾಕ್ಷಸ ಮುಖ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ನನಗೆ ಮುಂದಿನ ವಿಧಾನಸಭಾ ಚುನಾವಣೆ ಕೊನೆಯ ಎಲೆಕ್ಷನ್ ಹಾಗಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ದಿಸುತ್ತೇನೆ. ವರುಣಾ, ಚಾಮುಂಡೇಶ್ವರಿ ಮಾತ್ರವಲ್ಲ ರಾಜ್ಯದಲ್ಲಿ 20 ಕ್ಷೇತ್ರಗಳಿವೆ ಎಂದು ಸಿದ್ದರಾಮಯ್ಯ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

Minister Hegde behaviour like rowdy: Siddaramaiah

ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ ಕ್ಷೇತ್ರ ಚಾಮುಂಡೇಶ್ವರಿ, ಇದು ಕೊನೆ ಚುನಾವಣೆಯಾಗಿರುವುದರಿಂದ ಚಾಮುಂಡೇಶ್ವರಿಯಿಂದ ಸ್ಪರ್ಧಿಸುವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಕಲ್ಲಿದ್ದಲು ಪೂರೈಕೆಯಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ತೋರುತ್ತಿದೆ ಇದು ನಮಗೆ ಅಸಮಾಧಾನ ಉಂಟು ಮಾಡಿದೆ. ರಾಹುಲ್ ಗಾಂಧಿ ಬಗ್ಗೆ ಯುವಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಹುಲ್ ಗಾಂಧಿಗೆ ದೇಶದಲ್ಲಿ ದೊಡ್ಡ ಭವಿಷ್ಯವಿದೆ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಶಕ್ತಿಯುತವಾಗಿ ಬೆಳೆಯುವ ಭರವಸೆ ಇದೆ

English summary
Chief Minister Siddaramaiah criticised Union minister Anantkumar Hegde behaviour like Rowdy and its unacceptable. He also said reporters in Raichur that Rahul Gandhi will lead the Congress party as youths of the nation have joining hands with our party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X