Mannettina Amavasye: ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ.....ಸಂಭ್ರಮದ ಮಣ್ಣೆತ್ತು ಅಮವಾಸ್ಯೆ

ರಾಯಚೂರು, ಜುಲೈ 5: ದೇಶದ ಜನತೆಗೆಲ್ಲಾ ಅನ್ನ ನೀಡುವ ಅನ್ನದಾತನಿಗೆ ಕಾರಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸ್ಯೆ ಶ್ರೇಷ್ಠವಾದ ಸಂಭ್ರಮದ ಹಬ್ಬಗಳು. ಮುಂಗಾರು ಹಂಗಾಮಿನಲ್ಲಿ ಬರುವ ಕಾರಹುಣ್ಣಿಮೆಯೆಂದು ಎತ್ತುಗಳನ್ನು ಕರಿ ಹರಿಯುವುದು ಮತ್ತು ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣೆತ್ತುಗಳನ್ನು ಪೂಜಿಸಲಾಗುತ್ತದೆ.

ಜೇಷ್ಠಮಾಸ ಮತ್ತು ಆಷಾಢ ಮಾಸಗಳ ಉತ್ತರಾಯಣ ಮತ್ತು ದಕ್ಷಿಣಾಯಾನದ ಹೊಸ್ತಿಲಲ್ಲಿ ಬರುವ ಮಣ್ಣೆತ್ತಿನ ಅಮವಾಸ್ಯೆ ವಿಶೇಷವಾದುದ್ದು. ಅಮವಾಸ್ಯೆ ಭೂಮಿಯ ಸಂಕೇತ. ಹುಣ್ಣಿಮೆ ಚಂದ್ರನ ಸಂಕೇತ. ಎರಡರ ಸಂಗಮವೇ ಜೀವ ಸಂಕುಲಕ್ಕೆ ಅನ್ನ ಉತ್ಪತ್ತಿಗೆ ಕಾರಣ ಎಂಬ ನಂಬಿಕೆ ನಮ್ಮದು. ಕೃಷಿ ಪ್ರಧಾನವಾದ ನಮ್ಮ ನಾಡಿನಲ್ಲಿ ಮುಂಗಾರು ಮಳೆ ಬಂದು ರೈತರು ಬಿತ್ತನೆ ಕೆಲಸ ಮುಗಿಸಿದರೆಂದರೆ ಹಬ್ಬಗಳ ಸಂಭ್ರಮವೇ ಸಂಭ್ರಮ.

Mannettina amavasye celebration in Raichur

ರೈತನ ಸಂಗಾತಿಗಳಾದ ಎತ್ತುಗಳೊಂದಿಗೆ ಹೊಲದಲ್ಲಿ ಬಿತ್ತಿ ಬೀಜ ಮೊಳಕೆ ಹೊಡೆದು ಸಣ್ಣದಾಗಿ ಬೆಳೆ ಚಿಗುರೆಡೆಯುತ್ತಿದ್ದಂತೆ ಕಾರಹುಣ್ಣಿಮೆ ಬರುತ್ತದೆ. ಎತ್ತುಗಳನ್ನು ಶೃಂಗರಿಸಿ ಕರಿ ಹರಿದು ಹದಿನೈದು ದಿನಗಳಾಗಿರುವುದಿಲ್ಲ. ಮಣ್ಣೆತ್ತಿನ ಅಮವಾಸ್ಯೆಯ ಆಗಮನವಾಗುತ್ತದೆ.

ಅಮವಾಸ್ಯೆಯಂದು ಕುಂಬಾರರು ಮಾಡಿದ ಮಣ್ಣೆತ್ತುಗಳನ್ನು ಕೃಷಿಕರು, ವರ್ತಕರು, ಉದ್ದಿಮೆದಾರರು ತಂದು ವಿವಿಧ ರೀತಿಯಲ್ಲಿ ಶೃಂಗರಿಸಿ ಪೂಜಿಸುತ್ತಾರೆ. ವಿವಿಧ ಭಕ್ಷ್ಯ ಭೋಜನಗಳನ್ನು ತಯಾರಿಸಿ ನೈವೇದ್ಯ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಸಾಯಂಕಾಲ ಅಥವಾ ಮರುದಿನ ಮಣ್ಣೆತ್ತುಗಳನ್ನು ಹರಿಯುವ ನದಿ, ಹಳ್ಳಕ್ಕೆ ಬಿಡುತ್ತಾರೆ. ಇಲ್ಲವೆ ಮನೆಯ ಮಾಳಿಗೆಯ ಮೇಲಿಡುತ್ತಾರೆ. ಕಾರಣ ಮಳೆರಾಯನನ್ನು ಆ ಎತ್ತುಗಳು ಕರೆಯುತ್ತವೆ ಎಂಬ ನಂಬಿಕೆ ಇದೆ.

ದೇವಸೂಗೂರು ಹೋಬಳಿ ವ್ಯಾಪ್ತಿಯ ಗ್ರಾಮದ ಕುಂಬಾರರು ಕುಲಕಸುಬಾಗಿರುವ ಮಣ್ಣಿನ ಗಡಿಗೆ ಇನ್ನಿತರ ವಸ್ತುಗಳನ್ನು ಮಾಡುವುದರ ಜೊತೆಗೆ ಮಣ್ಣೆತ್ತಿನ ಅಮವಾಸ್ಯೆಯೆಂದು ರೈತರ ಹಬ್ಬಕ್ಕಾಗಿ ಮಣ್ಣೆತ್ತು ಮಾಡುವುದಕ್ಕೆ ಮುಂದಾಗುತ್ತಾರೆ. ಕುಂಬಾರರು ತಮ್ಮ ಬಡಾವಣೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಮಣ್ಣೆತ್ತುಗಳನ್ನು ಮಾರಾಟಕ್ಕೀಡುತ್ತಾರೆ. ಮ ಣ್ಣೆತ್ತು ಮಾಡುವುದು ನಮ್ಮ ಕುಲ ಕಸುಬು ಮೊದಲಿನಿಂದಲೂ ಮಣ್ಣೆತ್ತು ಮಾಡುತ್ತೇವೆ. ಸುತ್ತಮುತ್ತಲಿನ ಹಳ್ಳಿಗಳ ರೈತರು ಮಣ್ಣೆತ್ತುಗಳನ್ನು ತೆಗೆದುಕೊಂಡು ಪೂಜಿಸುತ್ತಾರೆ.

Mannettina amavasye celebration in Raichur

ಮೊದಲಿಗಿಚಿತಲೂ ಈಗ ಆಚರಣೆ ಕಡಿಮೆಯಾಗ ತೊಡಗಿದೆ. ಈ ವರ್ಷ 500ಕ್ಕೂ ಹೆಚ್ಚು ಮ ಣ್ಣೆತ್ತುಗಳನ್ನು ಮಾರುಕಟ್ಟೆಗೆ ತರಲಾಗಲಿದ್ದು 50 ರಿಂದ 60 ರೂಪಾಯಿಗೆ ಜೋಡಿ ಎತ್ತುಗಳನ್ನು ಮಾರಾಟ ಮಾಡಲಾಗುವುದು ಎಂದು ವಡ್ಲೂರಿನ ಕುಂಬಾರ ನಿಂಗಪ್ಪ ಹೇಳುತ್ತಾರೆ.

ಕಳೆದ ಒಂದುವರೆ ತಿಂಗಳಿನಿಂದ ಮಣ್ಣು ತಂದು ಹದ ಮಾಡಿ ದಿನಕ್ಕೆ ನಾಲ್ಕಾರು ಜೋಡಿ ಎತ್ತುಗಳನ್ನು ಮಾಡಲಾಗುತ್ತದೆ ಸುಮಾರು ಒಂದು ಸಾವಿರ ಜೋಡಿಗಳನ್ನು ತಯಾರಿಸಲಾಗುವುದು ಎಲ್ಲಾ ಎತ್ತುಗಳು ಮಾರಾಟವಾಗುತ್ತವೆ ಎನ್ನುತ್ತಾರೆ ನಿಂಗಪ್ಪ.

ಇಂದು (ಜುಲೈ 5 ರಂದು) ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತದೆ. ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಪೂಜಿಸುವ ಹಬ್ಬ ಇದಾಗಿದೆ. ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ (ಮೇವು - ನೀರು ಹಾಕಲು) ಮಾಡಿ ಪೂಜಿಸುವ ಸಂಪ್ರದಾಯವಿದೆ. ಈ ದಿನ ಮಣ್ಣಿನ ಎತ್ತು ಮಾಡಿ ಅದರಲ್ಲಿ ವೃಷಭವನ್ನು ಆವಾಹನೆ ಮಾಡಿ ಪೂಜಿಸಲಾಗುತ್ತದೆ.

Mannettina amavasye celebration in Raichur

ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ಜೊತೆಗೆ ನಮ್ಮ ಬದುಕು. ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮವಾಸ್ಯೆ. ತಮ್ಮ ರಾಸುಗಳಿಗೆ ಮಳೆಯಿಂದ ಕೆಲವು ಸಮಯ ಬಿಡುವು ಕೊಟ್ಟು ಅವುಗಳನ್ನು ಗೌರವಿಸುವ ಸಂಪ್ರದಾಯ ಇದಾಗಿದೆ. ಈ ಅಮಾವಾಸ್ಯೆಗೆ ರೈತರು ಮಾತ್ರ ಎತ್ತುಗಳನ್ನು ಸಿಂಗರಿಸುವುದಷ್ಟೇ ಅಲ್ಲ. ಎತ್ತುಗಳು ಇರಲಿ ಇಲ್ಲದಿರಲಿ ಎಲ್ಲರೂ ಗೌರವಿಸುವರು.

ಮರುದಿನ ಪಾಡ್ಯ ಕೂಡ ಪೂಜಿಸಿ ಹೊಲ ಹೊಂದಿದವರು ಅವುಗಳನ್ನು ನಾಗರಪಂಚಮಿ ಯವರೆಗೂ ದಿನನಿತ್ಯ ಪೂಜಿಸುತ್ತ ಕೆರೆಕೆಟ್ಟಂಬಲಿ ಅಂತ ಮಾಡಿ ಅಂಬಲಿ ಮಾಡಿಕೊಂಡು ಪಂಚಮಿ ನಂತರದ ದಿನ ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಿ ಇಡುವರು. ಅಂದರೆ ಮಳೆಯಿಂದ ಬಿತ್ತಿದ ಫಸಲು ಚೆನ್ನಾಗಿ ಬರಲಿ, ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದುಕೊಂಡು ಭಕ್ತಿಯಿಂದ ಸ್ಮರಿಸುವ ಅಮವಾಸ್ಯೆಯಿದು.

ಕೃಷಿ ಚಟುವಟಿಕೆಗಳು ಆರಂಭವಾದರೆ ಬಸವಣ್ಣಿಗೆ (ಎತ್ತು) ಖುಷಿಯಾಗುತ್ತಾದೆ ಎನ್ನುತ್ತಾರೆ ರೈತಾಪಿ ವರ್ಗ. ವಾಸ್ತವವಾಗಿ ಭಾರತೀಯ ಸಂಸ್ಸೃತಿಯಲ್ಲಿ ರೈತರು ಮಣ್ಣು ನಂಬಿ ಬದುಕು ಕಟ್ಟಿಕೊಂಡವರು. ಅಂತೆಯೇ ಮಣ್ಣೆತ್ತಿನ ಅಮವಾಸ್ಯೆಯ ಆಚರಣೆ. ನಾಗರಪಂಚಮಿ , ಗಣೇಶ್ ಹಬ್ಬ ಸ್ಭೆರಿದಂತೆ ಇತರೆ ಹಬ್ಬಗಳ ಆಚರಣೆ ಅಸ್ಥಿತ್ವದಲ್ಲಿವೆ. ಮಣ್ಣಿನ ಋಣ ತೀರಿಸಲು ಮತ್ತು ಎತ್ತಿನ ಋಣ ತೀರಿಸಲು ಈ ಪದ್ಧತಿ ಹಾಕಿಕೊಂಡಿದ್ದಾರೆಂಬ ಮಾತು ಹಿರಿಯರದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+