ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು ಜಿಲ್ಲೆಯಲ್ಲಿ ಚರ್ಮಗಂಟು ರೋಗ, ಜಾನುವಾರುಗಳ ಸಾವಿನ ಸಂಖ್ಯೆ ಹೆಚ್ಚಳ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ನವೆಂಬರ್‌, 11: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾಸುಗಳಿಗೆ ಚರ್ಮಗಂಟು ರೋಗವು ಆವರಿಸಿಕೊಳ್ಳುತ್ತಿದ್ದು, ಮತ್ತಷ್ಟು ಆತಂಕವನ್ನು ಹೆಚ್ಚು ಮಾಡಿದೆ. ಈ ರೋಗಕ್ಕೆ ತುತ್ತಾದ ಹಸು, ಎತ್ತುಗಳು ಬದುಕುಳಿಯುವ ಯುವ ಭರವಸೆಯೇ ಇಲ್ಲದಂತಾಗಿದೆ. ಇದರಿಂದ ಜಾನುವಾರು ಸಾಕಾಣಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ.

ಕಲ್ಯಾಣ ಕರ್ನಾಟಕ ಹೊರತಾದ ಜಿಲ್ಲೆಗಳಲ್ಲಿ ಚರ್ಮಗಂಟು ರೋಗವು ಈಗಾಗಲೇ ಭಾರಿ ಪ್ರಮಾಣದಲ್ಲಿ ವ್ಯಾಪಿಸಿದೆ. ಅಲ್ಲದೆ, ನೂರಾರು ಜಾನುವಾರುಗಳು ಸಾವನ್ನಪ್ಪುತ್ತಲೇ ಇವೆ. ಆರಂಭದಲ್ಲಿ ದಕ್ಷಿಣ ಹಾಗೂ ಮಧ್ಯೆ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹರಡಿದ್ದ ಈ ರೋಗವು ಇದೀಗ ಗಡಿಭಾಗ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಗೂ ವ್ಯಾಪಿಸಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರು, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಚರ್ಮಗಂಟು ರೋಗವು ನಿಯಂತ್ರಣದಲ್ಲಿದೆ. ರೋಗ ಅಂಟಿಕೊಂಡ ರಾಸುಗಳ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ರೋಗ ಗುಣಮುಖವಾಗಿಸಲು ದೇಶದಲ್ಲಿ ಇನ್ನೂ ನಿರ್ದಿಷ್ಟ ಔಷಧಿ, ಲಸಿಕೆ ಇಲ್ಲದಂತಾಗಿದೆ.

ದೇವದುರ್ಗ; ಸತ್ತ ವ್ಯಕ್ತಿಯ ಹೆಸರಿನಲ್ಲಿಯೂ ನರೇಗಾ ಕಾಮಗಾರಿದೇವದುರ್ಗ; ಸತ್ತ ವ್ಯಕ್ತಿಯ ಹೆಸರಿನಲ್ಲಿಯೂ ನರೇಗಾ ಕಾಮಗಾರಿ

ಸಾವನ್ನಪ್ಪಿದ ಒಟ್ಟು ಜಾನುವಾರುಗಳು ಎಷ್ಟು?

ಚರ್ಮಗಂಟು ರೋಗದ ತಡೆಗೆ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಐಎಎಚ್‌ ಹಾಗೂ ವಿಬಿ ಲಸಿಕೆಗಳನ್ನು ಕೊಡಲಾಗುತ್ತಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶುವೈದ್ಯರು, ಸಿಬ್ಬಂದಿಯು ರಾಸುಗಳ ರೋಗಕ್ಕೆ ಸಾಮಾನ್ಯ ಔಷೋಧೋಪಚಾರವನ್ನು ಮಾಡುತಿದ್ದಾರೆ. ಹಾಗೂ ಲಸಿಕೆ ನೀಡುವುದನ್ನು ವ್ಯಾಪಕಗೊಳಿಸಿದ್ದಾರೆ. ಚರ್ಮಗಂಟು ರೋಗವು ಸಾಂಕ್ರಾಮಿಕವಾಗಿದ್ದು, ರೋಗವು ಪತ್ತೆಯಾಗದ ಗ್ರಾಮಗಳ ರಾಸುಗಳಿಗೆ ಈಗಾಗಲೇ ಲಸಿಕೆ ನೀಡಲಾಗಿದೆ.

Lumpy skin disease kills many cattle in Raichur District

ಚರ್ಮಗಂಟು ರೋಗ ಪತ್ತೆಯಾದ ಗ್ರಾಮಗಳು, ಜಾನುವಾರುಗಳ ಸಂಖ್ಯೆ, ಮೃತಪಟ್ಟ ಜಾನುವಾರುಗಳ ಅಂಕಿ ಅಂಶಗಳನ್ನು ಇಲಾಖೆಯವರು ಕಲೆಹಾಕಿ ಲಸಿಕೆ ಹಾಕಲಾಗುತ್ತಿದೆ. ಮತ್ತು ಚಿಕಿತ್ಸೆ ಒದಗಿಸಲು ಸೂಕ್ತ ಕ್ರಮವನ್ನು ವಹಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಇದುವರೆಗೂ 55 ಜಾನುವಾರುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ. ಇನ್ನು ಯಾದಗಿರಿ ಜಿಲ್ಲೆಯಲ್ಲಿ ಎರಡು, ವಿಜಯನಗರ ಜಿಲ್ಲೆಯಲ್ಲಿ 2,080 ಜಾನುವಾರುಗಳು ಸಾವನ್ನಪ್ಪಿವೆ.

ರಾಯಚೂರು: ಮೂಳೆ ಮುರಿತಕ್ಕೆ ಉಚಿತ ಚಿಕಿತ್ಸೆ ನೀಡುವ ನಾಟಿ ವೈದ್ಯರಾಯಚೂರು: ಮೂಳೆ ಮುರಿತಕ್ಕೆ ಉಚಿತ ಚಿಕಿತ್ಸೆ ನೀಡುವ ನಾಟಿ ವೈದ್ಯ

ರಾಸುಗಳ ಸಾವಿನ ಸಂಖ್ಯೆ ಹೆಚ್ಚಳ

ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲೂ ರಾಸುಗಳ ಸಾವಿನ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಲೇ ಇದೆ. ಆದರೆ ಪಶುವೈದ್ಯರು ರೋಗ ನಿಯಂತ್ರಣಕ್ಕಾಗಿ ರಾಸುಗಳು ಸೇರಿದಂತೆ ಎಲ್ಲ ಜಾನುವಾರುಗಳಿಗೂ ಲಸಿಕೆಗಳನ್ನು ನೀಡುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ರೋಗಕ್ಕೆ ತುತ್ತಾಗಿರುವ 2,800 ಜಾನುವಾರುಗಳ ಪೈಕಿ 1,245 ಜಾನುವಾರುಗಳು ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿವೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಚರ್ಮಗಂಟು ರೋಗವು ಹರಡದಂತೆ ಜಾನುವಾರುಗಳಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ರೋಗವನ್ನು ಗುಣಪಡಿಸಲು ನಿರ್ದಿಷ್ಟವಾದ ಔಷಧಿಯನ್ನು ಇನ್ನು ಕಂಡುಹಿಡಿದಿಲ್ಲ ಎಂದು ರಾಯಚೂರು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೆಶಕರು ವಿ.ಕೃಷ್ಣಮೂರ್ತಿ ಹೇಳಿದರು.

ಹುಬ್ಬಳ್ಳಿಯಲ್ಲೂ ಹೆಚ್ಚಿದ ಚರ್ಮಗಂಟು ರೋಗ

ಇನ್ನು ಗ್ರಾಮೀಣ ಭಾಗದಲ್ಲಿ ಚರ್ಮಗಂಟು ರೋಗ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಚರ್ಮಗಂಟು ರೋಗದಿಂದ ಪ್ರಾಣಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹುಬ್ಬಳ್ಳಿ ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾಧಿಕಾರಿ ದೀಪಕ್‌ ಮಡಿವಾಳ ಹೇಳಿದರು. ಹುಬ್ಬಳ್ಳಿಯ ಮಾತನಾಡಿದ ಅವರು. ಚರ್ಮಗಂಟು ರೋಗದ ಹರಡುವಿಕೆ ಹೆಚ್ಚಳ ಆಗುತ್ತಿದ್ದು, ಔಷಧಿ ಸಿಂಪಡಣೆ ಮಾಡಬೇಕು.

Lumpy skin disease kills many cattle in Raichur District

ರೋಗದ ಕುರಿತು ರೈತರು ಹಾಗೂ ಜನರಲ್ಲಿ ಅರಿವು ಮೂಡಿಸಲು ಮುಂದಾಗಿ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಎಸ್.ಜಿ. ರೋಣ ಅವರಿಗೆ ಸೂಚಿಸಿದರು. ನಂತರ ಮುಖ್ಯ ಪಶು ವೈದ್ಯಾಧಿಕಾರಿ ಎಸ್.ಜಿ. ರೋಣ ಮಾತನಾಡಿ, 48 ಗ್ರಾಮಗಳ 1,018 ಪ್ರಾಣಿಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈಗಾಗಲೇ 597 ಪ್ರಾಣಿಗಳು ಗುಣಮುಖವಾಗಿವೆ.

ಮುಂಜಾಗ್ರತಾ ಕ್ರಮವಾಗಿ 26,543 ಪ್ರಾಣಿಗಳಿಗೆ ಲಸಿಕೆ ಹಾಕಲಾಗಿದೆ. 44 ಪ್ರಾಣಿಗಳು ಈ ರೋಗಕ್ಕೆ ಬಲಿ ಆಗಿವೆ. ರೋಗಕ್ಕೆ ಬಲಿಯಾದ ಕರುಗಳಿಗೆ 5 ಸಾವಿರ ರೂಪಾಯಿ, ಆಕಳು ಮತ್ತು ಎಮ್ಮೆಗಳಿಗೆ 20 ಸಾವಿರ ರೂಪಾಯಿ ಹಾಗೂ ಎತ್ತುಗಳ ಮಾಲೀಕರಿಗೆ 30 ಸಾವಿರ ರೂಪಾಯಿ ಹಣವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.

English summary
Lumpy skin disease kills many cattle in Raichur District. People are worried, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X