Karnataka election 2023: ಸಿಂಧನೂರಿನಲ್ಲಿ ಮತದಾರರನ್ನು ಸೆಳೆಯಲು ಸಿದ್ಧವಾದ್ವು ವಿಶೇಷ ಮತಗಟ್ಟೆಗಳು
ರಾಯಚೂರು, ಮೇ, 08: ರಾಜ್ಯ ವಿಧಾನಸಭಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಚುನಾವಣೆಗೆ ಮತದಾರರನ್ನು ಆಕರ್ಷಿಸಲು ಹಲವು ಕ್ಷೇತ್ರಗಳಲ್ಲಿ ಮತಗಟ್ಟೆಗಳನ್ನು ಅಂದಚೆಂದವಾಗಿ ಸಿದ್ಧಗೊಳಿಸಲಾಗಿದೆ. ಅದೇ ರೀತಿ ಸಿಂಧನೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಣ್ಣ-ಬಣ್ಣ ಬಳಿದು ವಿಶೇಷ ಮತಗಟ್ಟೆಗಳನ್ನು ರಚಿಸಲಾಗಿದೆ.
ಸಿಂಧನೂರು ತಾಲೂಕಿನ ಮತದಾರರ ವಿವರ
ಸಿಂಧನೂರು ತಾಲೂಕಿನಲ್ಲಿ 2,37,505 ಮತದಾರರಿದ್ದು, ಒಟ್ಟು 269 ಮತಗಟ್ಟೆಗಳಿವೆ. ಅದರಲ್ಲಿ ಬಂಗಾರಿ ಕ್ಯಾಂಪ್ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಂಗಾಪುರ ಕ್ಯಾಂಪ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಆರ್.ಎಚ್.ಕ್ಯಾಂಪ್ ನಂ.2 ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನಗರಸಭೆ ಕಚೇರಿಯ ಮತಗಟ್ಟೆ, ಸಾರ್ವಜನಿಕ ಪಶು ಆಸ್ಪತ್ರೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಹಾಗೆಯೆ ಬೂತಲ ದಿನ್ನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಯುವ ಮತಗಟ್ಟೆ ಎಂದು ಗುರುತಿಸಲಾಗಿದೆ. ನಗರದ ಎಂ.ಮಲ್ಲಪ್ಪ ಸ್ಮಾರಕ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆಯನ್ನು ಅಂಗವಿಕಲರ ಮತಗಟ್ಟೆಯೆಂದು ಮಾರ್ಪಡಿಸಲಾಗಿದೆ ಅಂತಾ ಸಿಂಧನೂರು ನಗರ ನೋಡಲ್ ಅಧಿಕಾರಿ ಮಂಜುನಾಥ್ ಗುಂಡೂರು ತಿಳಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ಸಮಾನ ಹಕ್ಕಿದೆ ಎನ್ನುವ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಮತಗಟ್ಟೆಯನ್ನು ಆಕರ್ಷಕ ಹೆಸರಿನಿಂದ ಹೆಸರಿಸಲಾಗಿದೆ. ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗೆ ಸಖಿ ಮತಗಟ್ಟೆ ಎಂದು ಹೆಸರಿಸಿ ಮಹಿಳೆಯರನ್ನು ಆಕರ್ಷಿಸಲಾಗುತ್ತಿದೆ.
ಇಲ್ಲಿ ಮಹಿಳಾ ಅಧಿಕಾರಿಗಳೇ ಚುನಾವಣಾ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ಅದೇ ರೀತಿ ಯುವಕರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೊತ್ತುಪಡಿಸುವ ದೃಷ್ಟಿಯಿಂದ ಯುವ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಮತದಾನದ ಹಬ್ಬದಲ್ಲಿ ಅಂಗವಿಕಲರ ಪಾತ್ರವೂ ಕೂಡ ಮಹತ್ವದ್ದಾಗಿದೆ ಎನ್ನುವುದನ್ನು ಖಚಿತ ಪಡಿಸಲು ಅಂಗವಿಕಲರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಉತ್ಕೃಷ್ಟ ಮೂಲಸೌಕರ್ಯ ಹೊಂದಿರುವ ಕೋಟೆ ಏರಿಯಾದ ಸರ್ಕಾರಿ ಶಾಲೆಯನ್ನು ಮಾದರಿ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದು ವಿವರಿಸಿದರು.
ವಿಶೇಷ ಮತಗಟ್ಟೆಗಳಿಗೆ ಅಂದ-ಚೆಂದದ ಭಿತ್ತಿ ಚಿತ್ರಗಳನ್ನು ಬಿಡಿಸಿ, ಮತದಾರರನ್ನು ಆಕರ್ಷಿಸಲಾಗಿದೆ ಎಂದು ಚಿತ್ರಕಲಾವಿದರ ಸಂಘದ ಅಧ್ಯಕ್ಷ ಶಿವಾನಂದ ಸಾತಿಹಾಳ ತಿಳಿಸಿದರು.
ಮತಗಟ್ಟೆಗಳ ವಿವರ ಇಲ್ಲಿದೆ
ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಆಚರಣೆ ಹಾಗೂ ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಕ್ಷೇತ್ರದ ಕೆಲ ಮತದಾನ ಕೇಂದ್ರಗಳಿಗೆ ವರ್ಲಿ ಚಿತ್ರಕಲೆ ಸ್ಪರ್ಶ ನೀಡಲಾಗಿದ್ದು, ಇದರಿಂದ ಮತಗಟ್ಟೆಗಳು ಎಲ್ಲರ ಗಮನ ಸೆಳೆಯುತ್ತಿವೆ.
ಗುರುಗುಂಟಾ ಹೋಬಳಿ ವ್ಯಾಪ್ತಿಯ ಮತದಾನ ಕೇಂದ್ರಗಳಿಗೆ ವರ್ಲಿ ಚಿತ್ರಕಲೆಯ ಸ್ಪರ್ಶ ನೀಡಲಾಗಿದೆ. ಇನ್ನು ಹಟ್ಟಿ ಪಟ್ಟಣದಲ್ಲಿ 28 ಕೇಂದ್ರ ಹಾಗೂ ಗುರುಗುಂಟಾ ಗ್ರಾಮದಲ್ಲಿ 12 ಮತಗಟ್ಟೆ ಕೇಂದ್ರ ಸೇರಿ ಗುರುಗುಂಟಾ ಹೋಬಳಿಯಲ್ಲಿ ಒಟ್ಟು 112 ಮತಗಟ್ಟೆ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯ ಚಿತ್ರಕಲಾ ಶಿಕ್ಷಕರ ತಂಡದಿಂದ ವರ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ.
ನಾಡಿನ ಸಂಪ್ರದಾಯಿಕ ಕಲೆ, ಸಂಸ್ಕ್ರತಿ ಬಿಂಬಿಸುವ ಕಲೆಯನ್ನು ಬಿಡಿಸಲಾಗಿದ್ದು, ಇದರಿಂದ ಮತಗಟ್ಟೆ ಕೇಂದ್ರಗಳು ಜನರನ್ನು ಆಕರ್ಷಿಸುತ್ತಿವೆ. ಮತದಾನ ಮಾಡಲು ಬರುವವರು ಉತ್ಸಾಹದಿಂದ ಮತದಾನ ಮಾಡಬೇಕು. ಹಬ್ಬದ ರೀತಿಯ ಸಂಭ್ರಮವನ್ನು ತರುವ ಉದ್ಧೇಶದಿಂದ ಮತದಾನ ಕೇಂದ್ರಗಳಿಗೆ ವರ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications