ರಾಯಚೂರು : ಜನರನ್ನು ಕೈ ಬೀಸಿ ಕರೆದ ಸಿರಿಧಾನ್ಯ ಮೇಳ

Posted By: ರಾಯಚೂರು ಪ್ರತಿನಿಧಿ
Subscribe to Oneindia Kannada

ರಾಯಚೂರು, ಡಿಸೆಂಬರ್ 25 : ಆರೋಗ್ಯದ ದೃಷ್ಟಿಯಿಂದ ಸಾವಯವ ಹಾಗೂ ಸಿರಿಧಾನ್ಯಗಳು ಸೇವನೆ ಉತ್ತಮ. ಹೀಗಾಗಿ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ರಾಯಚೂರಿನಲ್ಲಿ ಎರಡು ದಿನಗಳ ಕಾಲ ಸಿರಿಧಾನ್ಯಗಳ ಮೇಳ ಹಮ್ಮಿಕೊಳ್ಳಲಾಗಿದೆ.

ಡಿಸೆಂಬರ್ 24 ಮತ್ತು 25ರಂದು ಸಿರಿಧಾನ್ಯಗಳ ಮೇಳ ಆಯೋಜಿಸಲಾಗಿತ್ತು. ಎರಡು ದಿನಗಳ ಮೇಳದಲ್ಲಿ ರೈತರು, ಜನರಿಗೆ ಧಾನ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಿರಿಧಾನ್ಯಗಳಿಂದ ಮಾಡಿದ್ದ ರಂಗೋಲಿ ಅಲಂಕಾರ ಜನರ ಗಮನಸೆಳೆಯಿತು.

ಕೌಲಾಲಂಪುರ್ ನಲ್ಲಿ ಮಾವಳ್ಳಿ ಟಿಫಿನ್ಸ್ ರೂಂ ಹೋಟೆಲ್ ಆರಂಭ

In pics : Millet mela in Raichur, Karnataka

ರಾಯಚೂರು ನಗರದ ಕೃಷಿ ವಿವಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಾವಯವ ಹಾಗೂ ಸಿರಿಧಾನ್ಯಗಳ ಮೇಳ ಆಯೋಜಿಸಲಾಗಿತ್ತು. ಧಾನ್ಯಗಳನ್ನ ಕುಟ್ಟುವ ಮೂಲಕ ಗಣ್ಯರು ಮೇಳಕ್ಕೆ ಚಾಲನೆ ನೀಡಿದರು.

ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ ಭಾಗ್ಯ?

ಸಿರಿಧಾನ್ಯಗಳ ಮೇಳದಲ್ಲಿ ಕೃಷಿ ಪದ್ಧತಿ, ಮಾರುಕಟ್ಟೆ, ಸಿರಿಧಾನ್ಯಗಳ ಮಹತ್ವ ಕುರಿತು ಮಾಹಿತಿ ನೀಡಲಾಯಿತು. ಇದೇ ವೇಳೆ ಗ್ರಾಹಕರ ವಾಣಿಜ್ಯ ಮೇಳ ಕೂಡ ನಡೆಯತು. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಮೂರು ಜಿಲ್ಲೆಗಳ ಕೃಷಿ ಇಲಾಖೆ ಜಂಟಿಯಾಗಿ ಮೇಳ ಹಮ್ಮಿಕೊಳ್ಳಲಾಗಿತ್ತು. ಸಾವಯವ ಮತ್ತು ಸಿರಿಧಾನ್ಯ ಬೆಳೆಯಲು ರೈತರಿಗೆ ಕರೆ ನೀಡಲಾಯಿತು.

In pics : Millet mela in Raichur, Karnataka

ಮೇಳಕ್ಕೆ ಆಗಮಿಸಿದ್ದ ಗಣ್ಯರು ಮತ್ತು ಜನರು ಸಿರಿಧಾನ್ಯಗಳಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ಸವಿದರು. ಮೇಳಕ್ಕೆ ಆಗಮಿಸಿದ್ದವರಿಗೆ ಸಾವಯವ-ಸಿರಿಧಾನ್ಯಗಳ ಊಟದ ವ್ಯವಸ್ಥೆ ಮಾಡಲಾಗಿತ್ತು.

In pics : Millet mela in Raichur, Karnataka

ಹಲವು ಖಾಯಿಲೆಗಳಿಗೆ ರಾಮಬಾಣವಾಗಿದ್ದ ಸಿರಿಧಾನ್ಯಗಳು ಇದೀಗ ಆರೋಗ್ಯ ದೃಷ್ಟಿಯಿಂದ ಅಗತ್ಯವೆನಿಸುತ್ತಿವೆ. ಈ ನಿಟ್ಟಿನಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳ ಮೇಳದ ಮೂಲಕ ಮಾಹಿತಿ, ಜಾಗೃತಿ ಮೂಡಿಸುತ್ತಿರೋದು ಉತ್ತಮ ಬೆಳವಣಿಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A large number of people visited the stalls and mela at the two-day organic vegetables and millet mela in Raichur, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ