'ವಸತಿ ಸಚಿವ ಲಿಪ್ ಸ್ಟಿಕ್ ಹಾಕಿಸಿಕೊಂಡು ಜಾಹೀರಾತು ನೀಡ್ತಾರೆ'

Recommended Video

      ರಾಯಚೂರಿನ ಮಾನ್ವಿಯಲ್ಲಿ ಸಿದ್ದುನ ತರಾಟೆಗೆ ತೆಗೆದುಕೊಂಡ ಎಚ್ ಡಿ ಕುಮಾರಸ್ವಾಮಿ | Oneindia Kannada

      ಮಾನ್ವಿ (ರಾಯಚೂರು ಜಿಲ್ಲೆ), ಮಾರ್ಚ್ 12 : ಇಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನ್ಮ ಜಾಲಾಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಅವರು ಏನೆಂದರು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

      * "ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಆಗಿರುವುದನ್ನು ಗಮನಿಸಿದರೆ ನೈಸ್ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿರುವಂತಿದೆ".

      * "ಈ ಬಾರಿ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಖೇಣಿ ಫಂಡಿಂಗ್ ಮಾಡುವಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಮೊದಲಿಂದಲೂ ಭ್ರಷ್ಟರಿಗೆ ಆಶ್ರಯ ನೀಡುತ್ತಾ ಬಂದಿದೆ".

      HD Kumaraswamy

      * "ಹಲವು ಯೋಜನೆ ಹೆಸರಲ್ಲಿ ಒಂದು‌ ಲಕ್ಷದ ನಾಲ್ಕುನೂರು ಕೋಟಿ ರೂಪಾಯಿ ಸಾಲವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿದ್ದಾರೆ. ಇದನ್ನು ರಾಜ್ಯದ ಜನರು ತೀರಿಸಬೇಕು. ಸಿದ್ಧರಾಮಯ್ಯ ತೀರಿಸೋದಿಲ್ಲ".

      * "ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ಪತ್ರಿಕೆಗಳಿಗೆ ಏಳು ಪುಟಗಳ ಜಾಹೀರಾತು ನೀಡ್ತಾರೆ. ಈ ಜಾಹೀರಾತಿಗೆ ನೀಡಿದ ಹಣ ಯಾರ ಅಪ್ಪನದು?"

      * "ಸಿದ್ದರಾಮಯ್ಯ ಡ್ಯಾನ್ಸ್ ಮಾಡಿಕೊಂಡು ಸ್ಟೇಜ್ ಮೇಲೆ ಮಾತನಾಡ್ತಾರೆ. ಆದರೆ ಇವರು ನೀಡಿದ್ದು ಬರಭಾಗ್ಯ, ಅರೆಬರೆ ಕುಡಿಯುವ ನೀರಿನ ಭಾಗ್ಯ"

      * "ಸಸಿ ನೆಡುವ ನೆಪದಲ್ಲಿ ನೂರಾರು ಕೋಟಿ ನುಂಗಿಹಾಕಿದ್ದಾರೆ".

      * "ಸಿದ್ದರಾಮಯ್ಯ ಶೌಚಾಲಯಮುಕ್ತ ಅಂತಾರೆ. ಇಂದಿಗೂ ಉತ್ತರ ಕರ್ನಾಟಕದಲ್ಲಿ ಬಯಲಲ್ಲೇ ಕುಳಿತಿರುತ್ತಾರೆ. ಇವರು ನೋಡಿದರೆ ಕ್ರಾಂತಿ ಅಂತಿದ್ದಾರೆ. ಶೌಚಾಲಯಕ್ಕೆ ನೀರೇ ಕೊಡದಿದ್ದರೆ ಹೇಗೆ?"

      * "ಪತ್ರಿಕೆಗಳಿಗೆ ಒಂದೇ ದಿನ ನೀರಾವರಿ ಇಲಾಖೆಯಿಂದ ಏಳರಿಂದ ಎಂಟು ಕೋಟಿ ನೀಡುತ್ತಿದ್ದಾರೆ."

      * "ವಸತಿ ಸಚಿವ ನನ್ನಂತೆ ಕಪ್ಪಗಿಲ್ಲ. ಆದರೂ ಬಣ್ಣ, ಲಿಪ್ ಸ್ಟಿಕ್ ಹಾಕಿಸಿಕೊಂಡು ಜಾಹೀರಾತು ನೀಡುತ್ತಿದ್ದಾರೆ".

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+