ರಾಯಚೂರು: ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 6 ಬಾಲ ಕಾರ್ಮಿಕರ ರಕ್ಷಣೆ

Posted By:
Subscribe to Oneindia Kannada

ರಾಯಚೂರು, ನವೆಂಬರ್ 10 : ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ 6 ಬಾಲ ಕಾರ್ಮಿಕರನ್ನ ರಾಯಚೂರು ಜಿಲ್ಲಾ ಬಾಲ ಕಾರ್ಮಿಕ ಯೋಜನಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಕ್ರಾಸ್, ನೀರಮಾನ್ವಿ ಕ್ರಾಸ್, ಕೋನಾಪುರ, ಸಿಕಲ್ ಕ್ರಾಸ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹೊಲಗಳಿಗೆ 13 ವಾಹನಗಳ ಕೆಲಸಗಾರರನ್ನು ಕರೆದುಕೊಂಡ ಹೋಗಲಾಗುತಿತ್ತು. ಈ ವೇಳೆ ದಾಳಿ ನಡೆಸಿದ ಬಾಲ ಕಾರ್ಮಿಕ ಯೋಜನಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ 6 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

Government authorities rescued 6 child labourers at Manvi in Raichur district

ಶಾಲೆ ಬಿಡಿಸಿ 6 ಜನ ಬಾಲ ಕಾರ್ಮಿಕರನ್ನು ಹೊಲದ ಕೆಲಸಕ್ಕಾಗಿ ಕರೆದೊಯ್ಯಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ತಿಳಿದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ದಾಳಿ ವೇಳೆ 13 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Raichur district education and Child labour department officers 6 child labourers at Manvi. officers seized 13 vehicles and complement regestered in Manvi police station.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ