ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ: ಸೈಯದ್ ಯಾಸಿನ್

ರಾಯಚೂರು, ಜೂನ್.11: ನಗರ ಕ್ಷೇತ್ರದಲ್ಲಿ ನನ್ನ ಸೋಲಿಗೆ ಎಂಎಲ್ ಸಿ ಬೋಸರಾಜು ಸೇರಿ ಅನೇಕ ಕಾಂಗ್ರೆಸ್ ನಾಯಕರೇ ಕಾರಣ ಎಂದು ಮಾಜಿ ಶಾಸಕ ಸೈಯದ್ ಯಾಸಿನ್ ರಾಯಚೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಬೋಸರಾಜು ವಿರುದ್ಧ ಎಐಸಿಸಿಗೆ ದೂರು ನೀಡಲಾಗಿದ್ದು, ಅಂಥ ಪಕ್ಷ ವಿರೋಧಿಗಳಿಗೆ ಉನ್ನತ ಹುದ್ದೆ ನೀಡದಂತೆ ಒತ್ತಾಯಿಸಿದ್ದೇನೆ. ಚುನಾವಣೆಯಲ್ಲಿ ಅವರು ತಮ್ಮ ಪರ ಪ್ರಚಾರ ಮಾಡಿಲ್ಲ. ಪ್ರಚಾರ ಮಾಡಿ ಅಂತಾನೂ ಹೇಳಿಲ್ಲ.

ಪಕ್ಷದ ಪರ ಅಭ್ಯರ್ಥಿಗೆ ಬೆಂಬಲಿಸಿ, ಪ್ರಚಾರ ಮಾಡಬೇಕಾದ್ದು ಅವರ ಕರ್ತವ್ಯ. ಆದರೆ ಅವರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರೂ ಸೇರಿದಂತೆ ಅನೇಕರ ಬಗ್ಗೆ ಡಾ.ಶೈಲೇಂದ್ರನಾಥ ಸಾಕೆ ಅವರಿಗೆ ದೂರು ಸಲ್ಲಿಸಿರುವೆ.

Former MLA Syed Yasin says my defeat was due to many of the Congress leaders

ಸ್ಥಳೀಯ ಆಡಳಿತದಲ್ಲಿ ಎಂಎಲ್ ಸಿ ಬೋಸರಾಜ್ ಮೂಗು ತೂರಿಸುವುದು ಒಳ್ಳೆಯದಲ್ಲ. ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರ, ಇತಿಮಿತಿ ಅವರು ಅರ್ಥೈಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬೋಸರಾಜ್ ಮತಯಾಚನೆಗೆ ಅತ್ತನೂರು ಗ್ರಾಮಕ್ಕೆ ತೆರಳಿದ್ದಾಗ ಭತ್ತದ ಬೆಳೆಗೆ ಹಾಗೂ ಕುಡಿಯಲು ನೀರಿಲ್ಲ. ಈಗ ಮತ ಯಾಚನೆಗೆ ಬಂದಿದ್ದೀರಲ್ಲ ಅಂತ ರೈತ ಮಲ್ಲಪ್ಪ ಮಡಿವಾಳ ಖಾರವಾಗಿ ಪ್ರಶ್ನಿಸಿದ್ದಕ್ಕೆ ಕೊಪಗೊಂಡ ಬೋಸರಾಜ, ಸ್ವತಃ ರೈತನ ಕೈತಿರುವಿ ಹಲ್ಲೆಗೆ ಮುಂದಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+